ಕೊಲ್ಕತ್ತಾದಲ್ಲಿ ವೈದ್ಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳುವ ಅಂಶ
ವೈದ್ಯೆಯ ಕಣ್ಣಿನಿಂದ ರಕ್ತಸ್ರಾವ ಆಗಲು ಅಸಲಿ ಕಾರಣವೇನು ಗೊತ್ತಾ?
ಕೊಲ್ಕತ್ತಾ ನಗರದ ಆರ್.ಜಿ. ಕರ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಭೀಕರ ಅತ್ಯಾಚಾರ ಕೊಲೆಯ ವಿರುದ್ಧ ಈಗ ಇಡೀ ದೇಶವೇ ರೊಚ್ಚಿಗೆದ್ದಿದೆ. ದೇಶವ್ಯಾಪಿ ಪ್ರತಿಭಟನೆಯ ಕಿಚ್ಚು ಭುಗಿಲೆದ್ದಿದೆ. ಇದು ದೇಶ ಕಂಡ ಮತ್ತೊಂದು ನಿರ್ಭಯಾ ಪ್ರಕರಣ ಅಂತಲೇ ಜನರು ಹೇಳುತ್ತಿದ್ದಾರೆ.
ಕ್ಯಾಂಡಲ್ ಹಚ್ಚಿ ಅಗಲಿದ ಹೋದ ವೈದ್ಯ ಚೇತನಕ್ಕೆ ಶಾಂತಿ ಸಿಗಲೆಂದು ಶಾಂತವಾಗಿ ಬೇಡಿಕೆ ಒಂದು ಕಡೆ ಸಲ್ಲುತ್ತಿದ್ದರೆ ಮತ್ತೊಂದು ಕಡೆ ಕೊಲೆ ಮಾಡಿದವನನ್ನು ಸುಮ್ಮನೆ ಬಿಡಬಾರದು. ನೇಣಿಗೆ ಏರಿಸಬೇಕು ಅನ್ನೋ ಆಗ್ರಹಗಳು ಕೂಡ ಕೇಳಿ ಬರುತ್ತಿವೆ. ಇದೆಲ್ಲದರ ಮಧ್ಯೆ ಮೃತ ವೈದ್ಯೆಯ ಪೋಸ್ಟ್ ಮಾರ್ಟಮ್ ವರದಿ ಹೊರ ಬಂದಿದ್ದು ಬೆಚ್ಚಿ ಬೀಳಿಸುವ ಅಂಶ ಶವಪರೀಕ್ಷೆಯ ವರದಿಯಲ್ಲಿ ಬಂದಿದೆ.
ಕಳೆದ ಆಗಸ್ಟ್ 9 ರಂದು ಮಧ್ಯರಾತ್ರಿ 31 ವರ್ಷದ ಟ್ರೇನಿ ಡಾಕ್ಟರ್ಗಳನ್ನ ಸಂಜಯ್ ರಾಯ್ ಎಂಬ ವಿಕೃತ ಕಾಮಿಯೊಬ್ಬ ಬರ್ಬರವಾಗಿ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದ. ಆರಂಭದಲ್ಲಿ ಇದನ್ನು ಆತ್ಮಹತ್ಯೆಯೆಂದು ಬಿಂಬಿಸುವ ಕೆಲಸವು ನಡೆದಿತ್ತು. ಯಾವಾಗ ಪ್ರತಿಭಟನೆಯ ಕಾವು ಜೋರಾಯಿತೋ ಆಗ ಅಸಲಿ ವಿಚಾರಣೆ ಶುರುವಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಬಿದ್ದಿದ್ದ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ವೈದ್ಯೆಯ ಶವಪರೀಕ್ಷೆಗೆ ಕಳುಹಿಸಲಾಯ್ತು. ಈಗ ಶವಪರೀಕ್ಷೆ ವರದಿಯೂ ಪೊಲೀಸರ ಕೈಸೇರಿದ್ದು ಬೆಚ್ಚಿ ಬೀಳಿಸುವ ಅಂಶಗಳು ಅದರಲ್ಲಿ ಆಚೆ ಬಂದಿವೆ.
ಇದನ್ನೂ ಓದಿ: ನೈಟ್ ಡ್ಯೂಟಿ ವೈದ್ಯೆಗೆ ರೇಪ್ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?
ಮರಣೋತ್ತರ ಪರೀಕ್ಷೆಯಲ್ಲಿ ಎಂಥವರು ಕೂಡ ಒಂದು ಕ್ಷಣ ವಿಚಲಿತರಾಗುವ ಅಂಶಗಳು ಬಯಲಾಗುತ್ತಿವೆ. ಅತ್ಯಾಚಾರ ನಡೆದ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ವೀಕ್ಷಿಸಿದಾಗ ಕೊಲೆಯಾದ ಟ್ರೇನಿ ಡಾಕ್ಟರ್ ಅರೆನಗ್ನಸ್ಥಿತಿಯಲ್ಲಿ ಬಿದ್ದಿದ್ದಳು, ಆಕೆಯ ಜೀನ್ಸ್ ಪ್ಯಾಂಟ್ ಹಾಗೂ ಒಳ ಉಡುಪು ಬೇರೆ ಕಡೆ ಬಿದ್ದಿದ್ದವು. ಅಲ್ಲದೇ ಕಣ್ಣು, ಕಿವಿ ಹಾಗೂ ಖಾಸಗಿ ಭಾಗದಲ್ಲಿ ರಕ್ತಸ್ರಾವ ಆಗಿದ್ದು ಕಾಣಿಸಿತ್ತು. ತೊಡೆ, ಕೈ ಹಾಗೂ ತುಟಿಗಳ ಮೇಲೆ ಗಾಯದ ಗುರುತು ಕಂಡು ಬಂದಿದ್ದವು. ಕಣ್ಣಿನಲ್ಲಿ ರಕ್ತಸ್ರಾವ ಆಗಿದ್ದೇಕೆ ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು. ಈಗ ಮರಣೋತ್ತರ ಪರೀಕ್ಷೆಯಾದ ಬಳಿಕ ಅದರ ಕಾರಣ ತಿಳಿದು ಬಂದಿದೆ.
ಇದನ್ನೂ ಓದಿ: 3 ಹೆಂಡ್ತಿಯರ ಬಿಟ್ಟು 4ನೇ ಮದುವೆ.. ವೈದ್ಯೆಯ ರೇಪ್ & ಮರ್ಡರ್ ಹಂತಕನಿಗಿದೆ ಕರಾಳ ಚಾಳಿ; ಏನದು?
ರೇಪ್ ಮಾಡಿದ ಸೈಕೋಪಾತ್ ಮಾಡಿದ್ದೇನು?
ಅತ್ಯಾಚಾರ ಮಾಡಿದ ಬಳಿಕ ಆ ಸೈಕೋಪಾತ್ ಸಂಜಯ್ ರಾಯ್ ಅನ್ನೋನು ವೈದ್ಯೆಯ ಮುಖಕ್ಕೆ ಬಲವಾಗಿ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ವೈದ್ಯೆ ಹಾಕಿಕೊಂಡಿದ್ದ ಚಸ್ಮಾದ ಗ್ಲಾಸ್ ತುಣುಕು ಕಣ್ಣಿನೊಳಕ್ಕೆ ನುಗ್ಗಿದೆ. ಇದರಿಂದ ಕಣ್ಣಿನಿಂದ ರಕ್ತಸ್ರಾವ ಆಗಿದೆ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ . ಈ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣಕ್ಕೂ ಈ ಪ್ರಕರಣಕ್ಕೂ ಹೆಚ್ಚಿ ವ್ಯತ್ತಾಸಗಳು ಏನು ಇಲ್ಲ. ಅಲ್ಲಿ ಸಾಮೂಹಿಕವಾಗಿ ನಡೆದ ಅತ್ಯಾಚಾರ ಹಾಗೂ ಮಹಿಳೆ ಮೇಲೆ ನಡೆದ ಹಿಂಸೆಯೇ ಇಲ್ಲಿ ಒಬ್ಬನಿಂದಲೇ ನಡೆದಿದೆ. ಅಕ್ಷರಶಃ ನರರಾಕ್ಷಸನಂತೆ ಅತ್ಯಾಚಾರ ಮಾಡಿ, ಮುಗ್ಧ ವೈದ್ಯಯನ್ನು ಸಾಯುವ ಹಾಗೆ ಬಡಿದು ಹಾಕಿದ್ದಾನೆ ಪರಮನೀಚ ಸಂಜಯ್ ರಾಯ್.
ಅತ್ಯಾಚಾರ ಮಾಡುವ ಮೊದಲು ಈ ನೀಚ ಕೊಲ್ಕತ್ತಾದ ಎರಡು ರೆಡ್ಲೈಟ್ ಏರಿಯಾಗಳಲ್ಲಿ ಅಡ್ಡಾಡಿ ಬಂದಿದ್ದನಂತೆ. ಹಲವಾರು ನೀಲಿ ಚಿತ್ರಗಳನ್ನು ನೋಡಿ ಬಂದು ಆಮೇಲೆ ಆಸ್ಪತ್ರೆಯೊಳಗೆ ನುಗ್ಗಿ ಅತ್ಯಾಚಾರದಂತ ಹೀನ ಕೃತ್ಯಕ್ಕೆ ಕೈ ಹಾಕಿದ್ದಾನೆ
ಈಗಾಗಲೇ ದೇಶಾದ್ಯಂತ ಈ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ಅವನಿಗೆ ಗಲ್ಲು ಶಿಕ್ಷೆಯಾಗಬೇಕು ಎಂಬ ಆಗ್ರಹದೊಂದಿಗೆನೇ ನಡೆಯುತ್ತಿವೆ. ಅದು ನಿಜವಾಗಲೂ ಆಗಬೇಕಾಗಿದೆ. ಈ ಹಂತಕನಿಗೆ ಕೊಡುವ ಶಿಕ್ಷೆ, ಇನ್ನೊಮ್ಮೆ ಇಂತಹ ಕೃತ್ಯಕ್ಕೆ ಕೈ ಹಾಕುವವರಿಗೆ ಕೈ ನಡುಗುವಷ್ಟು ಭೀಕರವಾಗಿರಬೇಕು ಅನ್ನೋದು ಜನರ ಆಶಯವೂ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ