ಕಾನ್ಸ್ಟೇಬಲ್ ಮಗ, LLB ವಿದ್ಯಾರ್ಥಿ​​! ಬಾಬಾ ಸಿದ್ದಿಕಿ ಸಾಯಿಸಿದ ಲಾರೆನ್ಸ್​ ಬಳಿ 700 ಶೂಟರ್​ಗಳು!

author-image
AS Harshith
Updated On
25 ಲಕ್ಷ, ಪಾಕಿಸ್ತಾನದಿಂದ ಬರಲಿದ್ವು ಎಕೆ 47, ಎಕೆ92! ಸಲ್ಮಾನ್ ಮುಗಿಸಲು ಏನೆಲ್ಲಾ ಪ್ಲಾನ್ ನಡೆದಿತ್ತು ಗೊತ್ತಾ?
Advertisment
  • 700ಕ್ಕೂ ಹೆಚ್ಚು ಶೂಟರ್​ಗಳು ಹೊಂದಿರುವ ಲಾರೆನ್ಸ್​ ಗ್ಯಾಂಗ್​
  • ಸಿಧು ಮೂಸೆವಾಲಾ, ಕರ್ಣಿ ಸೇನಾ ಅಧ್ಯಕ್ಷನನ್ನು ಕೊಲೆ ಮಾಡಿದಾತ
  • ಕಾನ್ಸ್ಟೇಬಲ್ ಮಗ ಎಡವಿದ್ದೆಲ್ಲಿ? ಗ್ಯಾಂಗ್​​ಸ್ಟರ್​ ಆಗಿದ್ದೇಗೆ? ಇಲ್ಲಿದೆ ಮಾಹಿತಿ

ಎನ್​ಸಿಪಿ ನಾಯಕ ಮತ್ತು ಮಾಜಿ ಸಚಿವ ಬಾಬಾ ಸಿದ್ದಿಕಿಯ ಹತ್ಯೆಯ ಹೊಣೆಯನ್ನು ಲಾರೆನ್ಸ್​ ಬಿಷ್ಣೋಯ್​​ ಗ್ಯಾಂಗ್​ ಹೊತ್ತುಕೊಂಡಿದೆ. ಸದ್ಯ ಲಾರೆನ್ಸ್​ ಬಿಷ್ಣೋಯ್​ನನ್ನು ಗುಜರಾತ್​​​ ಸಬರಮತಿ ಆಶ್ರಮದಲ್ಲಿ ಇರಿಸಲಾಗಿದೆ.

ಲಾರೆನ್ಸ್​ ಬಿಷ್ಣೋಯ್​​ ಹೆಸರಿನಲ್ಲಿ ಅನೇಕ ಪ್ರಕರಣಗಳಿವೆ. ಈ ಹಿಂದೆ ಸಲ್ಮಾನ್​ ಖಾನ್​ ಮತ್ತು ದಾವೂದ್​​ ಗ್ಯಾಂಗ್​ಗೆ ಸಹಾಯ ಮಾಡುವವರು ತಮ್ಮ ಖಾತೆಗಳನ್ನು ಇಟ್ಟುಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದನು. ಆ ಬಳಿಕ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್​ ಖಾನ್​ ಜೊತೆಗಿನ ಆಪ್ತತೆ ಕಂಡು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಲಾರೆನ್ಸ್​ ಬಿಷ್ಮೋಯ್​ ಕೈಯಲ್ಲಿ ಪಂಜಾಬ್​ನ ಗಾಯಕ ಸಿಧು ಮೂಸೆವಾಲಾ, ಕರ್ಣಿ ಸೇನಾ ಅಧ್ಯಕ್ಷ ಸುಖದೇವ್​​ ಸಿಂಗ್​ ಗೋಗಮೆಡ ಹತ್ಯೆಯಾಗಿದ್ದಾರೆ. ಇದೀಗ ಬಾಬಾ ಸಿದ್ಧಿಕಿ ಕೂಡ ಸಾವನ್ನಪ್ಪಿದ್ದಾರೆ. ಸದ್ಯ ಲಾರೆನ್ಸ್​ ಗ್ಯಾಂಗ್​ನಲ್ಲಿ ದೇಶ ಮತ್ತು ವಿದೇಶದಲ್ಲಿ ಸುಮಾರು 700ಕ್ಕೂ ಹೆಚ್ಚು ಶೂಟರ್​ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ.

publive-image

ಲಾರೆನ್ಸ್​ ಬಿಷ್ಣೋಯ್​ ಯಾರು? ಎಲ್ಲಿಯವನು?

ಲಾರೆನ್ಸ್​ ಪಂಜಾಬ್​ ಮೂಲದ ಫಿರೋಜ್​​ಪುದ ಜಿಲ್ಲೆಯವನು. ತಂದೆ ಹರಿಯಾಣ ಪೊಲೀಸ್​ಠಾಣೆಯಲ್ಲಿ ಕಾನ್ಸ್​ಸ್ಟೇಬಲ್​ ಆಗಿದ್ದರು. ನಂತರ ಪೊಲೀಸ್​ ನೌಕರಿ ತೊರೆದು ಕೃಷಿ ಆರಂಭಿಸಿದರು. ಲಾರೆನ್ಸ್​ ಅಬೋಹರ್​ ಜಿಲ್ಲೆಯಲ್ಲಿ ಪಿಯುಸಿವರೆಗೆ ಓದಿದ್ದಾರೆ. ಬಳಿಕ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ಬಳಿಕ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡನು.

ಇದನ್ನೂ ಓದಿ: ಬಾಬಾ ಸಿದ್ದಿಕಿ ಕೇಸ್​ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ; ಏನಿದು ಲಿಂಕ್..?

ರಾಜಕೀಯ ಆಸಕ್ತಿ ಹೊಂದಿದ್ದ ಲಾರೆನ್ಸ್​ಗೆ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್​ ಅಲಿಯಾಸ್​ ಸತೀಂದರ್​ಜೀತ್​ ಸಿಂಗ್​ ಪರಿಚಯವಾಗುತ್ತದೆ. ಇಬ್ಬರು ರಾಜಕೀಯ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುತ್ತಾರೆ.

ನಂತರ ಲಾರೆನ್ಸ್​ ಎಲ್​ಎಲ್​ಬಿ ಮಾಡಲು ಮುಂದಾಗುತ್ತಾರೆ. ಈ ವೇಳೆ ಹಲ್ಲೆ, ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಲಾರೆನ್ಸ್ ಮೇಲೆ ದಾಖಲಾಗುತ್ತದೆ. ಹಲವು ಪ್ರಕರಣಗಳು ಖುಲಾಸೆಗೊಂಡರು, ಇನ್ನೂ ಹಲವು ಪ್ರಕರಣಗಳು ನಡೆಯುತ್ತಿವೆ.

ಇದನ್ನೂ ಓದಿ: ಜೈಲಿನಲ್ಲಿ ಬೆಳಗ್ಗಿನ ಉಪಹಾರ ಸೇವಿಸದ ದರ್ಶನ್; ಟೆನ್ಷನ್​​ನಲ್ಲಿ ಸಿಬ್ಬಂದಿಗೆ ಇಟ್ಟ ಬೇಡಿಕೆ ಏನು..?

ಹಲವು ಪ್ರಕರಣದಲ್ಲಿ ಜೈಲಿಗೆ ಸೇರಿದ ಲಾರೆನ್ಸ್​ಗೆ ಅದು ಲಾಭದಾಯಕ ವ್ಯವಹಾರವಾಯ್ತು. ಹೊರಗಡೆ ಮಾಡಲಾಗದಂತೆ ಕೆಲಸವನ್ನು ಜೈಲಿನ ಒಳಗೆ ಕುಳಿತು ಲಾರೆನ್ಸ್​ ಮಾಡಲು ಮುಂದಾದನು. ಜೈಲಿನ ಒಳಕ್ಕೂ ಅನೇಕ ದರೋಡೆಕೋರರ ಪರಿಚಯವಾಗುತ್ತದೆ. ಜೊತೆಗೆ ಶಸ್ತ್ರಾಸ್ತ್ರ ಖರೀದಿ, ವ್ಯಾಪಾರಿಗಳ ಪರಿಚಯವಾಗುತ್ತದೆ. ಬಳಿಕ ತನ್ನ ಪ್ರಭಾವವನ್ನು ಸಾಬೀತು ಪಡಿಸಲು ಲಾರೆನ್ಸ್​ ಕೊಲೆ ಮಾಡಲು ಮುಂದಾಗುತ್ತಾನೆ. ಲೂಧೀಯಾನದಲ್ಲಿ ಮುನ್ಸಿಪಲ್​ ಕಾರ್ಪೋರೇಷನ್​ ಚುನಾವಣೆ ವೇಳೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಕೊಲೆ ಮಾಡುತ್ತಾನೆ. 2014ರಲ್ಲಿ ರಾಜಸ್ಥಾನ ಪೊಲೀಸರ ಕೈಯಲ್ಲಿ ಬಂಧನವಾಗುತ್ತಾನೆ.

[caption id="attachment_91779" align="alignnone" width="800"]publive-image ಲಾರೆನ್ಸ್​ ಬಿಷ್ಣೋಯ್​ ಮತ್ತು ಗೋಲ್ಡ್​ ಬ್ರಾರ್​​[/caption]

ತಿಹಾರ್​ ಜೈಲಿಗೆ ಲಾರೆನ್ಸ್​

ಲಾರೆನ್ಸ್​ನನ್ನು 2021ರಲ್ಲಿ ತಿಹಾರ್​ ಜೈಲಿಗೆ ಸ್ಥಳಾಂತರಿಸಲಾಯಿತು. ಅದಕ್ಕೂ ಮುನ್ನ ಜಸ್ವಿಂದರ್​ ಸಿಂಗ್​ ಅಲಿಯಾಸ್​ ರಾಕಿ ಜೊತೆ ಸ್ನೇಹ ಬೆಳೆಯುತ್ತದೆ. 2016ರಲ್ಲಿ ರಾಜಿಯನ್ನು ಜೈಪಾಲ್​ ಭುಲ್ಲರ್​ ಹತ್ಯೆ ಮಾಡುತ್ತಾನೆ. 2020ರಲ್ಲಿ ಅದರ ಸೇಡು ತೀರಿಸಲು ಭುಲ್ಲರ್​ನನ್ನು ಕೊಲೆ ಮಾಡುತ್ತಾನೆ.

ಬಳಿಕ ಪಂಜಾಬ್​ ಗಾಯಕ ಸಿದ್ದು ಮೂಸೆವಾಲನನ್ನು ಕೊಲೆ ಮಾಡಲಾಗುತ್ತದೆ. ಮತ್ತೋರ್ವ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್​ ಮನೆ ಮೇಲೆ ಗುಂಡು ಹಾರಿಸಲಾಗುತ್ತದೆ. ಗಾಯಕನು ಸಲ್ಮಾನ್​ ಖಾನ್​ ಜೊತೆ ಸಂಬಂಧ ಹೊಂದಿದ್ದಾನೆಂದು ಗುಂಡು ಹಾರಿಸಲಾಗುತ್ತದೆ.

[caption id="attachment_10976" align="alignnone" width="800"]publive-image ಸಿಧು ಮೂಸೆವಾಲ[/caption]

700ಕ್ಕೂ ಅಧಿಕ ಶೂಟರ್​ಗಳು!

ಲಾರೆನ್ಸ್​ ಗ್ಯಾಂಗನ್ನು ಗೋಲ್ಡಿ ಬ್ರಾರ್​ ಅಲಿಯಾಸ್​ ಸತೀಂದರ್​ಜೀತ್ ಮುನ್ನಡೆಸುತ್ತಿದ್ದಾರೆ. ಅತ್ತ ಕೆನಡಾ ಪೊಲೀಸರಿಗೆ ಇವರು ಬೇಕಾಗಿದ್ದಾರೆ. ಲಾರೆನ್ಸ್​ ಗ್ಯಾಂಗ್​ 700 ಶೂಟರ್​ಗಳನ್ನು ಹೊಂದಿದ್ದು, 300 ಜನರು ಪಂಜಾಬ್​ ರಾಜ್ಯದಲ್ಲಿ ಸಂಪರ್ಕ ಹೊಂದಿದ್ದಾರೆ ಎಂದು ಎನ್​ಐಎ ಚಾರ್ಜ್​ಶೀಟ್​ನಲ್ಲಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment