/newsfirstlive-kannada/media/post_attachments/wp-content/uploads/2024/10/Babar-Azam-1.jpg)
ಪಾಕಿಸ್ತಾನ ಕ್ರಿಕೆಟ್​ ತಂಡದ ಕ್ಯಾಪ್ಟನ್​​ ಬಾಬರ್​ ಅಜಂ. ಇವರು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ.
ಇನ್ನು, ಬಾಬರ್​ ಅಜಂ ರಾತೋರಾತ್ರಿ ನಾಯಕತ್ವ ತ್ಯಜಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಬಾಬರ್​​ ಒಂದೇ ವರ್ಷದಲ್ಲಿ 2ನೇ ಬಾರಿ ಪಾಕ್ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಪಾಕ್​​ ಸ್ಥಿರ ಪ್ರದರ್ಶನ ನೀಡದಿದ್ದಾಗ ಅವರು ಕ್ಯಾಪ್ಟನ್ಸಿ ತೊರೆದಿದ್ದರು.
ಬಾಬರ್ ಏನಂದ್ರು?
ಮ್ಯಾನೇಜ್‌ಮೆಂಟ್ ಸೂಚನೆ ಮೇರೆಗೆ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಇಷ್ಟು ದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದು ಹೆಮ್ಮೆಯ ವಿಚಾರ. ಈಗ ನಾನು ಕ್ಯಾಪ್ಟನ್ಸಿ ತೊರೆದಿದ್ದು, ನನ್ನ ಬ್ಯಾಟಿಂಗ್​ ಮೇಲೆ ಫೋಕಸ್​​​ ಮಾಡುತ್ತೇನೆ. ನಾಯಕತ್ವದ ಅನುಭವ ಚೆನ್ನಾಗಿದೆ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಈಗ ನಾನು ಬ್ಯಾಟಿಂಗ್​ಗೆ ಒತ್ತು ನೀಡಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಾಯಕತ್ವದಿಂದ ಕೆಳಗೆ ಇಳಿದಿರುವುದು ನನ್ನ ಬ್ಯಾಟಿಂಗ್ ಮೇಲೆ ಫೋಕಸ್​ ಮಾಡಲು. ನನ್ನ ಮೇಲೆ ನಂಬಿಕೆ ಇಟ್ಟ ಫ್ಯಾನ್ಸ್​ಗೆ ಧನ್ಯವಾದಗಳು. ನನಗೆ ಬೆಂಬಲ ನೀಡಿದ ಸಹ ಆಟಗಾರರಿಗೆ ಥ್ಯಾಂಕ್ಸ್​​. ನನ್ನ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ