newsfirstkannada.com

USA ವಿರುದ್ಧ ಹೀನಾಯ ಸೋಲು.. ಪಾಕ್​ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ ಬಾಬರ್​!

Share :

Published June 7, 2024 at 7:38pm

  ಟಿ20 ವಿಶ್ವಕಪ್​ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಪಾಕ್​ಗೆ ಹೀನಾಯ ಸೋಲು

  ಹೀನಾಯ ಸೋಲು ಕಂಡ ಬೆನ್ನಲ್ಲೇ ಪಾಕ್​ ಕ್ಯಾಪ್ಟನ್​ ಬಾಬರ್​​ ಅಜಂ ಬೇಸರ!

  ತಂಡದ ಆಟಗಾರರ ವಿರುದ್ಧವೇ ಬೇಸರ ಹೊರಹಾಕಿದ ಕ್ಯಾಪ್ಟನ್​​ ಬಾಬರ್​ ಅಜಂ

ಇತ್ತೀಚೆಗೆ ನಡೆದ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಪಾಕ್​ ತಂಡ ಹೀನಾಯ ಸೋಲು ಕಂಡಿದೆ. ಟಿ20 ವಿಶ್ವಕಪ್‌ನಲ್ಲಿ ಆಘಾತಕಾರಿ ಫಲಿತಾಂಶ ನೀಡಿದ ಯುಎಸ್ಎ ಕ್ರಿಕೆಟ್​ ಟೀಮ್​ ಪಾಕ್​ ವಿರುದ್ಧ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದೆ.

ಇನ್ನು, ಪಾಕ್​​ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​​ ಬಾಬರ್​ ಅಜಂ ಮಾತಾಡಿದ್ದಾರೆ. ನಾವು ಯಾರ ವಿರುದ್ಧ ಆಡಬೇಕು ಅಂದ್ರೂ ತಯಾರಿ ಮಾಡಿಕೊಂಡೇ ಫೀಲ್ಡಿಗೆ ಇಳಿಯುತ್ತೇವೆ. ಇದು ಒಂದು ರೀತಿಯ ಮನಸ್ಥಿತಿ. ಸಣ್ಣ ತಂಡಗಳ ವಿರುದ್ಧ ಪಂದ್ಯ ಇದ್ದಾಗ ಕೆಲವರು ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಎಲ್ಲಾ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ ಎಂದು ತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ರು ಬಾಬರ್​​ ಅಜಂ.

ನಾವು ನಮ್ಮ ಪ್ಲಾನ್​ ಸರಿಯಾಗಿ ಎಕ್ಸಿಗ್ಯೂಟ್​ ಮಾಡಿಲ್ಲ. ಯಾವಾಗ ನಾವು ಪ್ಲಾನ್​​ ಎಕ್ಸಿಗ್ಯೂಟ್​ ಮಾಡುವಲ್ಲಿ ಎಡವಿದೆವೋ ಆಗಲೇ ಸೋತೆವು. ಇಡೀ ತಂಡ ತಯಾರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ನಿಜ ಹೇಳಬೇಕೆಂದರೆ, ಉತ್ತಮ ಭಾವನೆ ಹೊಂದಿದ್ದೆವು. ಸಣ್ಣ ತಂಡಗಳು ವಿರುದ್ಧ ಸೋತಾಗ ಬೇಜಾರಾಗುತ್ತೆ. ನಾವು ಫೀಲ್ಡಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಸರಿಯಾಗಿ ಆಡಲಿಲ್ಲ ಎಂದರು.

ಇದನ್ನೂ ಓದಿ: ಕೊನೆಗೂ ಡಿವೋರ್ಸ್​ ಬಗ್ಗೆ ಮೌನಮುರಿದ ಚಂದನ್​ ಶೆಟ್ಟಿ.. ನಿವೇದಿತಾ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

USA ವಿರುದ್ಧ ಹೀನಾಯ ಸೋಲು.. ಪಾಕ್​ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ ಬಾಬರ್​!

https://newsfirstlive.com/wp-content/uploads/2024/06/Babar-Azam_1.jpg

Load More