Advertisment

ಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!

author-image
Ganesh
Updated On
ಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!
Advertisment
  • ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್ ನಡುವೆ ಇನ್ನೂ ಘೋರ ಯುದ್ಧ
  • ಇಸ್ರೇಲ್ ದಾಳಿಗೆ ಶಿಶುವಿನ ಅಪ್ಪನೂ ಸಾವು, ಒಟ್ಟು 13 ಮಕ್ಕಳ ಹತ್ಯೆ
  • ಯುದ್ಧದಿಂದಾಗಿ ಹುಟ್ಟುವಾಗಲೇ ಅನಾಥವಾಗಿ ಜನಿಸಿದ ಮಗು

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧದ ಬಿಕ್ಕಟ್ಟಿನಿಂದಾಗಿ ಆಗುತ್ತಿರುವ ಅನಾಹುತಗಳು, ತೊಂದರೆಗಳು ಲೆಕ್ಕಕ್ಕೇ ಇಲ್ಲ. ವೈದ್ಯಕೀಯ ಲೋಕಕ್ಕೆ ಸವಾಲ್ ಆಗಿದ್ದ ಪ್ರಕರಣವನ್ನು ಪ್ಯಾಲೆಸ್ಟೀನ್​​ ವೈದ್ಯರು ಬೇಧಿಸಿದ್ದು, ಎಲ್ಲರೂ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಇಸ್ರೇಲ್​ನ ಮಾರಣಾಂತಿಕ ದಾಳಿಯಿಂದಾಗಿ ಕೊಲ್ಲಲ್ಪಟ್ಟ ತಾಯಿಯ ಗರ್ಭದಲ್ಲಿದ್ದ ಶಿಶುವನ್ನು ವೈದ್ಯರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

Advertisment

ಇದನ್ನೂ ಓದಿ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡ ಬಂದ್; ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಬಂದ್​ಗೆ ಕರೆ

publive-image

ದುರಂತ ಅಂದರೆ ಕೊಲ್ಲಲ್ಪಟ್ಟ ಆ ತಾಯಿ ಹಾಗೂ ಆಕೆಯ ಪತಿಯೂ ಒಂದೇ ದಿನ ಯುದ್ಧದಿಂದ ಸಾವನ್ನಪ್ಪಿದ್ದು, ಶಿಶು ಅನಾಥವಾಗಿದೆ. ಮಧ್ಯರಾತ್ರಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಗಾಜಾದ ರೆಫಹ್​ನಲ್ಲಿ ಒಟ್ಟು 19 ಮಂದಿ ಕೊಲ್ಲಲ್ಪಟ್ಟಿದ್ದಾರೆ. ಎರಡು ಮನೆಗಳ ಮೇಲೆ ದಾಳಿಯಾಗಿದೆ. ಈ ದಾಳಿಯಲ್ಲಿ 13 ಮಕ್ಕಳೂ ಕೂಡ ಸಾವನ್ನಪ್ಪಿವೆ ಎಂದು ಪ್ಯಾಲೆಸ್ಟೀನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

Advertisment

publive-image

ಜನಿಸಿದ ಮಗು 1.4 ಕೆಜಿ ತೂಕ ಇದೆ. ಹೆಣ್ಣುಮಗಳು. ಎಮರ್ಜನ್ಸಿಯಲ್ಲಿ ಸಿಸರಿನ್ ಮಾಡಿ ಶುಶುವನ್ನು ಹೊರ ತೆಗೆದಿದ್ದೇವೆ. ಸದ್ಯ ಆಕೆಯ ಆರೋಗ್ಯ ಸುಧಾರಿಸುತ್ತಿದ್ದು, Incubatorನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾಕ್ಟರ್ ಮೊಹಮ್ಮದ್ ಸಲಾಮ್ ತಿಳಿಸಿದ್ದಾರೆ. ಶಿಶುವಿನ ತಾಯಿ ಗರ್ಭ ಧರಿಸಿದ 30 ವಾರಗಳಾಗಿತ್ತು ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ತಿರುವ ಶಿಶುವಿನ ಜೊತೆ ಇನ್ನೊಂದು ಮಗುವನ್ನು ಇಡಲಾಗಿದೆ. ಮಗುವಿನ ಹೊಟ್ಟೆ ಮೇಲೆ ಹಾಕಿರುವ ಬ್ಯಾಂಡ್ ಮೇಲೆ ‘The baby of the martyr Sabreen Al-Sakani’ ಎಂದು ಬರೆಯಲಾಗಿದೆ.

ಇದನ್ನೂ ಓದಿ:ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು

publive-image

ಕೊಲ್ಲಲ್ಪಟ್ಟ ಸಾಕಾನಿಯ ಮತ್ತೊಬ್ಬ ಮಗಳು ತನ್ನ ಸಹೋದರಿಗೆ Rouh ಎಂದು ಹೆಸರಿಡಲು ನಿರ್ಧರಿಸಿದ್ದಳು. ಅರೆಬಿಕ್ ಭಾಷೆಯ ಈ ಪದವು ಸ್ಫೂರ್ತಿ ಎಂದು ಸೂಚಿಸುತ್ತದೆ ಅಂತಾ ಆಕೆಯ ಚಿಕ್ಕಪ್ಪ ರಮಿ ಅಲ್ ಶೇಖ್ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಈ ಶಿಶುವಿಗೆ ಇನ್ನೂ ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ನಂತರ ಮಗುವಿನ ಚಿಕ್ಕಪ್ಪ, ಅಜ್ಜಿ-ಅಜ್ಜನಿಗೆ ಒಪ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment