Advertisment

100 ರೂಪಾಯಿಗೆ ಮಗು ಮಾರಾಟ.. ಮದ್ಯವ್ಯಸನಿ ತಾಯಿಯಿಂದ 4 ತಿಂಗಳ ಮಗುವಿನ ರಕ್ಷಣೆ

author-image
AS Harshith
Updated On
100 ರೂಪಾಯಿಗೆ ಮಗು ಮಾರಾಟ.. ಮದ್ಯವ್ಯಸನಿ ತಾಯಿಯಿಂದ 4 ತಿಂಗಳ ಮಗುವಿನ ರಕ್ಷಣೆ
Advertisment
  • ಭಿಕ್ಷೆ ಬೇಡುತ್ತಾ ಬೀದಿಗಳಲ್ಲಿ ಅಲೆಯುತ್ತಿದ್ದ ಅಪರಿಚಿತ ಮಹಿಳೆ
  • 3 ಮಕ್ಕಳ ಪೈಕಿ ಒಂದು ಮಗುವನ್ನು 100 ರೂಪಾಯಿಗೆ ಮಾರಾಟ
  • ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮ ಪಂಚಾಯತಿ ಕಾವಲು ಸಮಿತಿ ನೂರು ರೂಪಾಯಿಗೆ ಮಾರಾಟವಾಗಿದ್ದ, ನಾಲ್ಕು ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಗೆ ಒಪ್ಪಿಸಿದ ಘಟನೆ ಜರುಗಿದೆ.

Advertisment

ಹೌದು! ನಾಲ್ಕು ದಿನಗಳ ಹಿಂದೆ ಮದ್ಯವ್ಯಸನಿ ಹಾಗೂ ಅಪರಿಚಿತ ಮಹಿಳೆಯೊಬ್ಬಳು ತನ್ನೆರಡು ಮಕ್ಕಳೊಂದಿಗೆ ಭಿಕ್ಷೆ ಬೇಡುತ್ತಾ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಬೀದಿಗಳಲ್ಲಿ ಅಲೆಯುತ್ತಿದ್ದಳು. ಆಕೆಗೆ ಒಟ್ಟು ಮೂರು ಮಕ್ಕಳಿದ್ದವು, ಅದರಲ್ಲಿ ಈಗಾಗಲೇ ಒಂದು ಗಂಡು ಮಗುವನ್ನು ಮಾರಿರುವ ಸಂಶಯಗಳು ವ್ಯಕ್ತವಾಗಿದ್ದು.

ಕಳೆದ ನಾಲ್ಕು ದಿನಗಳ ಹಿಂದೆ ಹುಲಿಗಿಯ ಟ್ಯಾಂಕರ್ ಬಡವಾಣೆಯ ಮಹಿಳೆಯೊಬ್ಬಳು ಮಗುವಿನ ಪರಿಸ್ಥಿತಿಯನ್ನು ನೋಡದೆ ಮದ್ಯವ್ಯಸನಿ ಮಹಿಳೆಗೆ ನೂರು ರೂಪಾಯಿ ಕೊಟ್ಟು ಮಗುವನ್ನು ತೆಗೆದುಕೊಂಡಿದ್ದಾಳೆ ಎನ್ನುವ ಸಂಶಯಗಳು ವ್ಯಕ್ತವಾಗಿದ್ದವು. ಇನ್ನು ಮಗುವನ್ನು ಪಡೆದ ಮಹಿಳೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾಳೆ. ಈ ಮಾಹಿತಿ ಹುಲಿಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಕಾವಲು ಸಮಿತಿ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ನಿನ್ನೆ ದಿನ ನಾಲ್ಕು ತಿಂಗಳ ಮಗುವನ್ನು ಮಹಿಳೆಯಿಂದ ಪಡೆದು, ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗರೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದ ಅಣ್ಣ.. ಕೊಡಲಿಯಿಂದ ಕೊಚ್ಚಿ ಹತ್ಯೆಗೈದ 14 ವರ್ಷದ ತಂಗಿ

Advertisment

ಸುಮಾರು 25 ವರ್ಷದ ಈ ಮಹಿಳೆಗೆ ಮದ್ಯವ್ಯಸನಿಯಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ ಎನ್ನಲಾಗುತ್ತಿದೆ. ಮದ್ಯ ಸೇವನೆ ಮಾಡಿ ಹುಲಿಗಿ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಾ, ಬೀದಿ ಬೀದಿ ಅಲೆಯುತ್ತಾ, ಎಲ್ಲಿ ಬೇಕು ಅಲ್ಲಿ ಮಲಗುತ್ತಿದ್ದಳು ಎನ್ನಲಾಗುತ್ತಿದ್ದು. ಕಾಮುಕರ ದಾಹಕ್ಕೂ ಮಹಿಳೆ ತುತ್ತಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವುದಾಗಿ ಗ್ರಾಮ ಪಂಚಾಯಿತಿ ಪಿಡಿಒ ಗುರು ದೇವಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ತಾಯಿ ನಾಲೆಗೆ ಎಸೆದ ಮಗುವಿನ ಮೃತದೇಹ ಪತ್ತೆ.. ಮೊಸಳೆ ಬಾಯಿಯಿಂದ ಹೊರತೆಗೆದ ಸಿಬ್ಬಂದಿ

Advertisment

ಸಿಡಿಪಿಓ ಜಯಶ್ರೀ ಮಗುವನ್ನು ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರಿಂದ ಪಡೆದು ಮೇಲಾಧಿಕಾರಿಗಳೊಂದಿಗೆ ಮಾತನಾಡಿ, ಮಹಿಳೆಯ ವಿಳಾಸವನ್ನು ಪತ್ತೆಹಚ್ಚಿ, ಕ್ರಮವಹಿಸಲಾಗುವುದು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment