Advertisment

ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!

author-image
Ganesh
Updated On
ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!
Advertisment
  • ಬಾಗಲಕೋಟೆಯಲ್ಲಿ ಮಹಿಳೆ ಮೇಲೆ ಹಲ್ಲೆ, ನಿಂದನೆ
  • ಮೊಬೈಲ್ ಕಸಿದುಕೊಂಡು ಆವಾಜ್ ಹಾಕಿದ ಸಿಬ್ಬಂದಿ
  • ಬ್ಯಾಂಕ್ ಸಿಬ್ಬಂದಿಯ ದುರ್ವರ್ತನೆಗೆ ವ್ಯಾಪಕ ಖಂಡನೆ

ಬಾಗಲಕೋಟೆ: ಸಾಲ ವಸೂಲಿಗೆ ಬಂದ ಖಾಸಗಿ ಬ್ಯಾಂಕ್​​ನ ರಿಕವರಿ ಸಿಬ್ಬಂದಿ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಸಾಲ ಕಟ್ಟದ ಕಾರಣ ಮಹಿಳೆಯ ಕಪಾಳಕ್ಕೆ ಹೊಡೆದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಜೋಗಿಮಡ್ಡಿ ಕಾಲೋನಿಯಲ್ಲಿ ಘಟನೆ ನಡೆದಿದೆ.

Advertisment

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆ; ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವು

ರುಕ್ಸಾನಾ ಎಂಬ ಮಹಿಳೆಗೆ ಕಪಾಳಕ್ಕೆ ಹೊಡೆದು ದುರ್ವರ್ತನೆ ಮೆರೆದಿದ್ದಾನೆ. ರಾಜೇಸಾಬ್ ಎಂಬ ಬ್ಯಾಂಕ್ ರಿಕವರಿ ನೌಕರ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದೂ ಮಾತ್ರವಲ್ಲದೇ ಮಹಿಳೆಯ ಮೊಬೈಲ್‌ ಕಸಿದುಕೊಂಡಿದ್ದ. ಹಣ ಕಟ್ಟಿದ್ರೆ ಮಾತ್ರ ಮೊಬೈಲ್ ಕೊಡೋದಾಗಿ ಬ್ಯಾಂಕ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ.

ಇದನ್ನೂ ಓದಿಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video

Advertisment

ಮೊಬೈಲ್ ಹೇಗೆ ಕಸಿದುಕೊಂಡ್ರಿ? ಮೊಬೈಲ್ ಕೊಟ್ರೆ ಮಾತ್ರ ಹಣ ಕೊಡ್ತಿನಿ ಎಂದು ಮಹಿಳೆ ಹೇಳುತ್ತಾಳೆ. ಈ ವೇಳೆ ಬ್ಯಾಂಕ್ ಸಾಲ ವಸೂಲಿ ಸಿಬ್ಬಂದಿ ಹಾಗೂ ಮಹಿಳೆ ಮಧ್ಯೆ ವಾಗ್ವಾದ ನಡೆದಿದೆ. ನೋಡ ನೋಡುತ್ತಿದ್ದಂತೆ ಮಹಿಳೆಯ ಕಪಾಳಕ್ಕೆ ಬ್ಯಾಂಕ್ ಸಿಬ್ಬಂದಿ ಕಪಾಳಕ್ಕೆ ಹೊಡೆದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment