newsfirstkannada.com

ಬಾಗಲಕೋಟೆಯಲ್ಲಿ ‘ಕೈ’ಗೆ ಬಂಡಾಯ.. ಬೆಂಬಲಿಗರ ಮುಂದೆ ಬಿಕ್ಕಿ, ಬಿಕ್ಕಿ ಅತ್ತ ವೀಣಾ ಕಾಶಪ್ಪನವರ್; ಹೇಳಿದ್ದೇನು?

Share :

Published March 22, 2024 at 4:39pm

  ವೀಣಾ ಕಾಶಪ್ಪನವರ್ ಅಭಿಮಾನಿಗಳ ಸಭೆಯಲ್ಲಿ ಭಾರೀ ಆಕ್ರೋಶ

  ಹುನಗುಂದ ಶಾಸಕ ವಿಜಯಾನಂದ‌ ಕಾಶಪ್ಪನವರ ಕೂಡ ಭಾಗಿ

  ಬೆಂಬಲಿಗರ ಸಭೆ ಬಳಿಕ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ವೀಣಾ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವೀಣಾ ಕಾಶಪ್ಪನವರ ಅಭಿಮಾನಿಗಳ, ಹಿತೈಷಿಗಳ ಸಭೆ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಈ ವೇಳೆ ಅಭಿಮಾನಿಗಳ ಮುಂದೆ ವೀಣಾ ಕಾಶಪ್ಪನವರ್ ಕಣ್ಣೀರು ಹಾಕಿದ್ದಾರೆ.

ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಣಾ ಕಾಶಪ್ಪನವರು ಹಾಗೂ ಇವರ ಪತಿ ಶಾಸಕ ವಿಜಯಾನಂದ‌ ಕಾಶಪ್ಪನವರ ಕೂಡ ಭಾಗಿಯಾಗಿದ್ದರು. ನೂರಾರು ಅಭಿಮಾನಿಗಳು, ಹಿತೈಷಿಗಳು ಆಗಮಿಸಿದ್ದು ಸಭೆಯ ಬಳಿಕ ಲೋಕಸಭೆ ಎಲೆಕ್ಷನ್​ಗೆ ಸ್ಪರ್ಧೆ ಮಾಡುವ ಬಗ್ಗೆ ವೀಣಾ ಕಾಶಪ್ಪನವರ ನಿರ್ಧಾರ ಕೈಗೊಳ್ಳಲಿದ್ದಾರೆ.

ಆದರೆ ಬೆಂಬಲಿಗರ ಸಭೆಯಲ್ಲಿ ಬಂಡಾಯ ಸ್ಫರ್ಧೆಯ ಕೂಗು ಕೇಳಿ ಬಂದಿದ್ದು ಬಂಡಾಯವೆದ್ದು ಸ್ಫರ್ಧೆ ಮಾಡುವಂತೆ ಅಭಿಮಾನಿಗಳೆಲ್ಲ ಒಕ್ಕೊರಲಿನಿಂದ ಹೇಳಿದ್ದಾರೆ. ಈ ವೇಳೆ ಬೆಂಬಲಿಗರು ಟಿಕೆಟ್​ ನೀಡದ ಕಾಂಗ್ರೆಸ್ ಮುಖಂಡರ ವಿರುದ್ಧ ವೈಯಕ್ತಿಕ ನಿಂದನೆ ಮಾಡಕೂಡದು ಎಂದು ಹೇಳಲಾಗಿದೆ. ನಮಗೆ ಟಿಕೆಟ್ ಕೈ ತಪ್ಪಿದೆ, ನೋವಾಗಿದೆ, ವೈಯಕ್ತಿಕ ನಿಂದನೆ ಮಾಡಲೇಬೇಕಿದೆ ಎಂದು ಸಭೆಯಲ್ಲಿ ಎದ್ದು ನಿಂತು ವೀಣಾ ಕಾಶಪ್ಪನವರ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಆಕ್ರೋಶಗೊಂಡ ಎಲ್ಲರನ್ನು ಪಕ್ಷದ ಮುಖಂಡರು ಸಮಾಧಾನಪಡಿಸಿದರು. ಬೆಂಬಲಿಗರ ಸಮಾಧಾನದ ನಂತರ ಮತ್ತೆ ಹಿತೈಷಿಗಳ ಭಾಷಣ ಮುಂದುವರೆದಿದೆ.

ಕಳೆದ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತ್ತಿದ್ದ ವೀಣಾ ಕಾಶಪ್ಪನವರು ಈ ಬಾರಿಯು ಟಿಕೆಟ್​ ನನಗೆ ಬೇಕು ಎಂದು ಕಾಂಗ್ರೆಸ್​ ನಾಯಕರನ್ನು ಕೇಳಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲರಿಗೆ ಟಿಕೆಟ್ ನೀಡಿದೆ. ಹೀಗಾಗಿ ವೀಣಾ ಕಾಶಪ್ಪನವರ ಅಭಿಮಾನಿಗಳ ಬಳಗದಿಂದ ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ.

ಇದನ್ನೂ ಓದಿ: VIDEO: ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಗಳಗಳನೆ ಅತ್ತ ವೀಣಾ ಕಾಶಪ್ಪನವರ್

ಸ್ವಾಭಿಮಾನಿ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ವೀಣಾ ಕಾಶಪ್ಪನವರ್, ನನಗೆ ಟಿಕೆಟ್ ಕೊಡಲಿಲ್ಲ ಅಂದ್ರ ಪರವಾಗಿಲ್ಲ. ನನ್ನ ಜಿಲ್ಲೆಯ ಜನರನ್ನ ನನ್ನಿಂದ ಕಸಿದುಕೊಳ್ತಿದ್ದೀರಿ ಎಂದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಐದು ವರ್ಷಕ್ಕೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದೆ. ಕಾರಣಾಂತರಗಳಿಂದ ಅವತ್ತು ಸಹ ರಾಜೀನಾಮೆ ಕೊಟ್ಟೆ. ಲೋಕಸಭೆಯಲ್ಲಿ ನನ್ನ ಜಿಲ್ಲೆಯ ಬಗ್ಗೆ ಧನಿಯಾಗಬೇಕು ಎಂದವಳು ನಾನು ಎಂದು, ವೇದಿಕೆ ಮೇಲೆ ಗಳಗಳನೆ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ್‌, ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರೇ ಬಂದಿಲ್ಲ ಅಂದ್ರೆ ನನಗೆ ಎಷ್ಟು ನೋವಾಗಿರಬೇಡ. ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯನ್ನ ಸುತ್ತಿದೆ. ಎಐಸಿಸಿ ಅಧ್ಯಕ್ಷರು ನನಗೆ ಹೇಳ್ತಾರೆ. ಜಿಲ್ಲೆಯಿಂದ ಕೇವಲ ಒಂದೇ ಹೆಸರು ಬಂದಿದೆ. ಎರಡು ಹೆಸರು ಬಂದಿದ್ರೆ ಏನಾದ್ರೂ ಮಾಡಬಹುದಿತ್ತು ಅಂತ. ನಾವು ಬಾಗಲಕೋಟೆ ಜಿಲ್ಲೆಯವ್ರು ಅಸಮರ್ಥರಾ? ನಮ್ಮ ಜಿಲ್ಲೆಯನ್ನ ಬೇರೆಯವ್ರಿಗೆ ಮಾರಿಬಿಟ್ಟಿವಾ ಎಂದು ವೀಣಾ ಪ್ರಶ್ನಿಸಿದ್ದಾರೆ.

ನಾನು ನನ್ನ ಗಂಡನ ಮನೆಯಿಂದಲೇ ಲೋಕಸಭೆ ಸದಸ್ಯಳಾಗಬೇಕು‌ ಅಂದುಕೊಂಡವಳು. ನಾನು ಅವಕಾಶವಾದಿ ರಾಜಕಾರಣಿ ಆಗಿದ್ರೆ ಯಾವತ್ತೋ ಏನೋ ಆಗ್ತಿದ್ದೆ. ನನ್ನ ಜಿಲ್ಲೆಯ ಜನರ ಸೇವೆ ಮಾಡೋಕೆ ನನಗೆ ಅವಕಾಶ ಕೊಡಿ ಎಂದು ಕೈಮುಗಿದು ವೀಣಾ ಮನವಿ ಮಾಡಿದರು. ನಮ್ಮಂತವರ ಪರಿಸ್ಥಿತಿ ಹೀಗಾದ್ರೆ, ಇನ್ನೂ ಸಾಮನ್ಯ ಕಾರ್ಯಕರ್ತೆಯರ ಗತಿ ಏನು. ಪ್ರತಿ ಗ್ರಾಮದ ಜನರ ನಾಡಿಮಿಡಿತ ನಾನು ಅರಿತಿದ್ದೇನೆ‌. ನನ್ನ ತಾಯಂದಿರು ಅನಾಥರಾಗ್ತಾರೆ. ನನ್ನ ಜಿಲ್ಲೆಯ ಜನ ಏನು ತೀರ್ಮಾನ ತಗೊಳ್ತಾರೆ ಅದಕ್ಕೆ ನಾನು ಬದ್ಧ ಎಂದು ವೀಣಾ ಕಾಶಪ್ಪನವರ್ ಹೇಳಿದರು. ವೇದಿಕೆ ಮೇಲಿಂದ ಇಳಿದು ಬಂದು ಬೆಂಬಲಿಗರ ಪ್ರೀತಿ, ಅಭಿಮಾನಕ್ಕೆ ಕೈ ಮುಗಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಲಕೋಟೆಯಲ್ಲಿ ‘ಕೈ’ಗೆ ಬಂಡಾಯ.. ಬೆಂಬಲಿಗರ ಮುಂದೆ ಬಿಕ್ಕಿ, ಬಿಕ್ಕಿ ಅತ್ತ ವೀಣಾ ಕಾಶಪ್ಪನವರ್; ಹೇಳಿದ್ದೇನು?

https://newsfirstlive.com/wp-content/uploads/2024/03/Veena-Kashappanavar-2.jpg

Load More