9 ವರ್ಷ ಕಟ್ಟಿ ಬೆಳೆಸಿದ ಕಂಪನಿಯಿಂದಲೇ ಕಿಕ್‌ಔಟ್ ಆಗ್ತಾರಾ ಬೈಜು ರವೀಂದ್ರನ್‌?

author-image
admin
Updated On
ಬೆಂಗಳೂರಿನ ತನ್ನ ಅತಿದೊಡ್ಡ ಕಚೇರಿಯನ್ನು ಖಾಲಿ ಮಾಡಿದ ಬೈಜೂಸ್​​; ಕಾರಣವೇನು?
Advertisment
  • ಬೈಜೂಸ್ ಹೂಡಿಕೆದಾರರಿಂದ ಮಹತ್ವದ ನಿರ್ಣಯ ಅಂಗೀಕಾರ
  • ರವೀಂದ್ರನ್ ಅವರನ್ನು ಕಂಪನಿಯಿಂದ ಕಿತ್ತು ಹಾಕಲು ಬಿಗಿ ಪಟ್ಟು
  • ಅತಿ ದೊಡ್ಡ ಬೈಜೂಸ್ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದ ಬೈಜು ರವೀಂದ್ರನ್

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೈಜೂಸ್ ಕಂಪನಿಯ ಹೂಡಿಕೆದಾರರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬೈಜೂಸ್ ಸಂಸ್ಥೆಯನ್ನು 9 ವರ್ಷಗಳ ಕಾಲ ಕಟ್ಟಿ ಬೆಳೆಸಿದ ಸಂಸ್ಥಾಪಕ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬ ಸದಸ್ಯರನ್ನು ಕಂಪನಿಯಿಂದ ಹೊರ ಹಾಕುವ ನಿರ್ಣಯಕ್ಕೆ ಬರಲಾಗಿದೆ. ಆದರೆ ಬೈಜೂಸ್ ಕಂಪನಿ ಇದನ್ನು ತಿರಸ್ಕರಿಸಿದೆ.

ಬೈಜೂಸ್ ಕಂಪನಿ ಹೂಡಿಕೆದಾರರ ಮಹತ್ವದ ಸಭೆಯನ್ನು ಇಂದು ನಡೆಸಲಾಯಿತು. ಇದರಲ್ಲಿ ಬೈಜೂಸ್ ಹೂಡಿಕೆದಾರರು CEO ರವೀಂದ್ರನ್ ಅವರನ್ನು ತೆಗೆದು ಹಾಕುವ ನಿರ್ಣಯವನ್ನು ಅಂಗೀಕರಿಸಲಾಯಿತು. ಕಂಪನಿಯ ಪ್ರಮುಖ ಷೇರುದಾರರಾದ ಪ್ರಾಸಸ್ NV ಮತ್ತು ಪೀಕ್ XV ಪಾಲುದಾರರು ರವೀಂದ್ರನ್ ಅವರನ್ನು ಕಂಪನಿಯಿಂದ ಕಿತ್ತು ಹಾಕಲು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: ‘ಹಣ ಕೊಟ್ರೆ ಟಿವಿ ವಾಪಸ್‌ ಕೊಡ್ತೀವಿ’- ಬೈಜೂಸ್ ಕಚೇರಿಯಲ್ಲಿ ಪೋಷಕರ ಪಟ್ಟು; ವಿಡಿಯೋ ವೈರಲ್!

2015ರಲ್ಲಿ ಸ್ಟಾರ್ಟ್‌ ಅಪ್‌ ಕಂಪನಿಯನ್ನ ಆರಂಭಿಸಿದ್ದ ರವೀಂದ್ರನ್ ಅವರು ದೇಶದ ಅತಿ ದೊಡ್ಡ ಬೈಜೂಸ್ ಶಿಕ್ಷಣ ಸಂಸ್ಥೆಯನ್ನಾಗಿಸಿದ್ದರು. 9 ವರ್ಷದ ಬಳಿಕ ಉದ್ಯೋಗಿಗಳಿಗೂ ಸಂಬಳ ಕೊಡಲು ಆಗದ ಪರಿಸ್ಥಿತಿಗೆ ತಲುಪಿದ ರವೀಂದ್ರನ್ ಅವರನ್ನು ಕಂಪನಿಯಿಂದ ಕಿತ್ತು ಹಾಕುವ ಸಾಧ್ಯತೆ ಇದೆ. ಫೆಮಾ ನಿಯಮ‌ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬೈಜು ರವೀಂದ್ರನ್ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ದೇಶದ ಎಲ್ಲಾ ವಿಮಾನ ನಿಲ್ದಾಣ, ಬಂದರುಗಳಿಗೆ ಇ.ಡಿಯಿಂದ ಲುಕ್ ಔಟ್ ನೊಟೀಸ್ ಜಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment