newsfirstkannada.com

‘ಹಣ ಕೊಟ್ರೆ ಟಿವಿ ವಾಪಸ್‌ ಕೊಡ್ತೀವಿ’- ಬೈಜೂಸ್ ಕಚೇರಿಯಲ್ಲಿ ಪೋಷಕರ ಪಟ್ಟು; ವಿಡಿಯೋ ವೈರಲ್!

Share :

Published February 22, 2024 at 8:22pm

Update February 22, 2024 at 8:24pm

    ಆರ್ಥಿಕ ಸಂಕಷ್ಟದಲ್ಲಿರೋ ಶಿಕ್ಷಣ ಸಂಸ್ಥೆ ಬೈಜೂಸ್‌ಗೆ ಶಾಕ್‌ ಮೇಲೆ ಶಾಕ್!

    ಬೈಜೂಸ್ ಕಚೇರಿಗೆ ತೆರಳಿ ಹಣಕ್ಕೆ ಡಿಮ್ಯಾಂಡ್ ಇಟ್ಟ ಪೋಷಕರು

    ಬೈಜೂಸ್ ಕಂಪನಿಯ ರವೀಂದ್ರನ್ ವಿರುದ್ಧ ಲುಕ್ ಔಟ್ ನೋಟಿಸ್

ಆರ್ಥಿಕ ಸಂಕಷ್ಟ, ಉದ್ಯೋಗಿಗಳಿಗೆ ಸಂಬಳ ಕೊಡಲು ಪರದಾಡುತ್ತಿರುವ ಬೈಜೂಸ್‌ ಕಂಪನಿಗೆ ಬಿಗ್‌ ಶಾಕ್ ಎದುರಾಗಿದೆ. ಬೈಜೂಸ್‌ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ. ಫೆಮಾ ನಿಯಮ‌ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬೈಜು ರವೀಂದ್ರನ್ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ದೇಶದ ಎಲ್ಲಾ ವಿಮಾನ ನಿಲ್ದಾಣ, ಬಂದರುಗಳಿಗೆ ಇ.ಡಿಯಿಂದ ಲುಕ್ ಔಟ್ ನೊಟೀಸ್ ಜಾರಿಯಾಗಿದೆ.

ಸಾಲು, ಸಾಲು ಸವಾಲುಗಳ ಮಧ್ಯೆ ನಾಳೆ ಬೈಜು ಕಂಪನಿಯ ಮಹತ್ವದ ಸಭೆ ಕರೆಯಲಾಗಿದೆ. ಈ EMG ಸಭೆಯಲ್ಲಿ ಬೈಜು ರವೀಂದ್ರನ್ ಅವರನ್ನು ಕಂಪನಿಯಿಂದ ತೆಗೆಯಲು ಹೂಡಿಕೆದಾರರು ಒತ್ತಾಯ ಮಾಡುವ ಸಾಧ್ಯತೆ ಇದೆ. EGM ತೀರ್ಮಾನಗಳು ಹೈಕೋರ್ಟ್‌ನ ಅಂತಿಮ‌ ತೀರ್ಪುಗೆ ಒಳಪಟ್ಟಿರುತ್ತೆ ಎಂದು ಹೈಕೋರ್ಟ್ ಆದೇಶ ನೀಡಿದೆ.

View this post on Instagram

A post shared by lafdavlog (@lafdavlog)

ಇದನ್ನೂ ಓದಿ: ಬೆಂಗಳೂರಿನ ತನ್ನ ಅತಿದೊಡ್ಡ ಕಚೇರಿಯನ್ನು ಖಾಲಿ ಮಾಡಿದ ಬೈಜೂಸ್​​; ಕಾರಣವೇನು?

ಈ ಶಾಕಿಂಗ್ ಸುದ್ದಿಯ ಮಧ್ಯೆ ಅತಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿದ್ದ ಬೈಜೂಸ್ ಕಂಪನಿಯ ಮೇಲೆ ಪೋಷಕರು ತಿರುಗಿ ಬಿದ್ದಿದ್ದಾರೆ. ಬೈಜೂಸ್ ಕಚೇರಿಗೆ ತೆರಳಿ ಪೋಷಕರೊಬ್ಬರು ಟಿವಿಯನ್ನು ಎತ್ತಿಕೊಂಡು ಹೋಗಿದ್ದಾರೆ. ನಾವು ಕಟ್ಟಿರುವ ಹಣ ವಾಪಸ್ ಕೊಡಿ ಆಗ ಟಿವಿಯನ್ನು ವಾಪಸ್ ಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಪೋಷಕರು ಬೈಜೂಸ್ ಕಚೇರಿಯಲ್ಲಿ ಟಿವಿ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೈಜೂಸ್ ಕಚೇರಿಯಲ್ಲಿ ಪೋಷಕರು ಟಿವಿಯನ್ನು ತೆಗೆದುಕೊಂಡು ಹೋಗಿರೋ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಆ ವ್ಯಕ್ತಿ ಮಾಡಿದ್ದು ಸರಿಯಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಣ ಕೊಟ್ರೆ ಟಿವಿ ವಾಪಸ್‌ ಕೊಡ್ತೀವಿ’- ಬೈಜೂಸ್ ಕಚೇರಿಯಲ್ಲಿ ಪೋಷಕರ ಪಟ್ಟು; ವಿಡಿಯೋ ವೈರಲ್!

https://newsfirstlive.com/wp-content/uploads/2024/02/Byjus-Tv-Video-Viral.jpg

Load More