/newsfirstlive-kannada/media/post_attachments/wp-content/uploads/2024/05/pulsar-Ns400z.jpg)
ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಬಹುನಿರೀಕ್ಷಿತ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಶಕ್ತಿಶಾಲಿ 373 CC ಇಂಜಿನ್ ಮೂಲಕ ನೂತನ ಪಲ್ಸರ್ ಎನ್​​ಎಸ್ 400 ಝಡ್ ಮಾರುಕಟ್ಟೆಯಲ್ಲಿ ಸೌಂಡ್​ ಮಾಡುತ್ತಿದೆ.
ಅಂದಹಾಗೆಯೇ ನೂತನ ಬೈಕ್ ಗ್ಲಾಸಿ ರೇಸಿಂಗ್ ರೆಡ್, ಬ್ರೂಕ್ಲಿನ್ ಬ್ಲ್ಯಾಕ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಪ್ಯೂಟರ್ ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದರ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್‌ಸ್ಟುಮೆಂಟ್ ಕನ್ಸೆಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಎನ್​ಎಸ್​​​ 400 ಝಡ್​​ ಬೈಕ್​ನಲ್ಲಿ ಒದಗಿಸಲಾಗಿದೆ.
ಮಾಹಿತಿ ಪ್ರಕಾರ ಬಜಾಜ್​ ನೂತನ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಅನ್ನು ತಯಾರಿಸಲು 8 ವರ್ಷ ತೆಗೆದುಕೊಂಡಿದೆ. ಇದು 400ಸಿಸಿ ಜೊತೆಗೆ ಏರ್​ ಕೂಲ್ಡ್​ ಸಿಲಿಂಡರ್​​ ಎಂಜಿನ್​ ಸಾಮರ್ಥ್ಯದೊಂದಿಗೆ ಬಂದಿದೆ. 27ಹೆಚ್ಪಿ ಮತ್ತು 36ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಸಿಕ್ಸ್​ ಗೇರ್​ ಬಾಕ್ಸ್​ ಇದರಲ್ಲಿದೆ.
/newsfirstlive-kannada/media/post_attachments/wp-content/uploads/2024/05/pulsar-Ns400z-1.jpg)
ಇನ್ನು ನೂತನ ಬೈಕ್​ 4 ರೈಡಿಂಗ್​ ಮೋಡ್​​ ಹೊಂದಿದೆ. ಸ್ಪೋರ್ಟ್​​, ರೋಡ್​, ರೈನ್​, ಆಫ್​ರೋಡ್​ ಮೋಡ್​ಗಳಲ್ಲಿ ಚಲಿಸುತ್ತದೆ. ಇದಲ್ಲದೆ ಡ್ಯುಯೆಲ್​ ಚಾನೆಲ್​ ಎಬಿಎಸ್​, 43ಎಮ್​ಎಮ್​​ ಯುಎಸ್​ಡಿ ಪೋರ್ಕ್​​ ಒಳಗೊಂಡಿದೆ.
ಇದನ್ನೂ ಓದಿ: ದೇಶದಲ್ಲಿ ಅಕ್ಷಯ ತೃತೀಯದ ಸಂಭ್ರಮ.. ಡೈಮಂಡ್​ ಆಭರಣಗಳ ಮೇಲೆ ಶೇ. 20ರಷ್ಟು ರಿಯಾಯಿತಿ, ಚಿನ್ನ?
ಪಲ್ಸರ್ ಎನ್ ಎಸ್ 400 ಝಡ್ ಬೈಕ್​ನಲ್ಲಿ ನ್ಯಾವಿಗೇಷನ್, ಎಸ್​ಎಮ್​ಎಸ್​​, ಕರೆ ಸ್ವೀಕರಿಸಬಹುದಾದ ಡಿಜಿಟಲ್​​ ಕನ್ಸೋಲ್​​ ಅನ್ನು ನೀಡಲಾಗಿದೆ. ಸ್ಮಾರ್ಟ್​ಫೋನ್​ಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಬ್ಲೂಟೂತ್​ ಕನೆಕ್ಟಿವಿಟಿ ಲಭ್ಯವಿದೆ.
ಬೆಲೆ ಎಷ್ಟು?
ನೂತನ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಆರಂಭಿಕ ಎಕ್ಸ್​ ಶೋ ರೂಂ ಬೆಲೆ 1.85 ಲಕ್ಷ ರೂ ಆಗಿದೆ. (ಹೆಚ್ಚಿನ ಮಾಹಿತಿಗೆ ಹತ್ತಿರದ ಶೋಂ ರೂಂ ಸಂಪರ್ಕಿಸಿ)​.
ಇದನ್ನೂ ಓದಿ: ಶಿವಕಾಶಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 8 ಮಂದಿ ಸುಟ್ಟು ಕರಕಲು, ಹಲವರಿಗೆ ಗಾಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us