newsfirstkannada.com

ವಾರೆ ವ್ಹಾ.. ಅಂತು ಇಂತು ಬಂತು ಹೊಸ ಬಜಾಜ್​ ಪಲ್ಸರ್​ NS400Z ಬೈಕ್​.. ಫೀಚರ್ಸ್​ ಅದ್ಭುತ! ಬೆಲೆ ಎಷ್ಟಿದೆ?

Share :

Published May 10, 2024 at 9:01am

Update May 10, 2024 at 9:14am

    ಮಾರುಕ್ಟೆಟಗೆ ಬಂದ ಹೊಸ ಬಜಾಜ್​ ಪಲ್ಸರ್​ NS400Z ಬೈಕ್​

    ನೂತನ ಬೈಕ್​ ಹೇಗಿದೆ? ಫೀಚರ್ಸ್​, ಬೆಲೆ ನೋಡಿ ಖರೀದಿಸಬಹುದೇ?

    ಬಜಾಜ್​ ಪಲ್ಸರ್​ NS400Z bಐಕ್​ ತಯಾರಿಸಲು 8 ವರ್ಷ ತೆಗೆದುಕೊಂಡರೇ?

ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಬಹುನಿರೀಕ್ಷಿತ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಶಕ್ತಿಶಾಲಿ 373 CC ಇಂಜಿನ್ ಮೂಲಕ ನೂತನ ಪಲ್ಸರ್ ಎನ್​​ಎಸ್ 400 ಝಡ್ ಮಾರುಕಟ್ಟೆಯಲ್ಲಿ ಸೌಂಡ್​ ಮಾಡುತ್ತಿದೆ.

ಅಂದಹಾಗೆಯೇ ನೂತನ ಬೈಕ್ ಗ್ಲಾಸಿ ರೇಸಿಂಗ್ ರೆಡ್, ಬ್ರೂಕ್ಲಿನ್ ಬ್ಲ್ಯಾಕ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಪ್ಯೂಟರ್ ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದರ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್‌ಸ್ಟುಮೆಂಟ್ ಕನ್ಸೆಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಎನ್​ಎಸ್​​​ 400 ಝಡ್​​ ಬೈಕ್​ನಲ್ಲಿ ಒದಗಿಸಲಾಗಿದೆ.

ಮಾಹಿತಿ ಪ್ರಕಾರ ಬಜಾಜ್​ ನೂತನ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಅನ್ನು ತಯಾರಿಸಲು 8 ವರ್ಷ ತೆಗೆದುಕೊಂಡಿದೆ. ಇದು 400ಸಿಸಿ ಜೊತೆಗೆ ಏರ್​ ಕೂಲ್ಡ್​ ಸಿಲಿಂಡರ್​​ ಎಂಜಿನ್​ ಸಾಮರ್ಥ್ಯದೊಂದಿಗೆ ಬಂದಿದೆ. 27ಹೆಚ್ಪಿ ಮತ್ತು 36ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಸಿಕ್ಸ್​ ಗೇರ್​ ಬಾಕ್ಸ್​ ಇದರಲ್ಲಿದೆ.

ಇನ್ನು ನೂತನ ಬೈಕ್​ 4 ರೈಡಿಂಗ್​ ಮೋಡ್​​ ಹೊಂದಿದೆ. ಸ್ಪೋರ್ಟ್​​, ರೋಡ್​, ರೈನ್​, ಆಫ್​ರೋಡ್​ ಮೋಡ್​ಗಳಲ್ಲಿ ಚಲಿಸುತ್ತದೆ. ಇದಲ್ಲದೆ ಡ್ಯುಯೆಲ್​ ಚಾನೆಲ್​ ಎಬಿಎಸ್​, 43ಎಮ್​ಎಮ್​​ ಯುಎಸ್​ಡಿ ಪೋರ್ಕ್​​ ಒಳಗೊಂಡಿದೆ.

ಇದನ್ನೂ ಓದಿ: ದೇಶದಲ್ಲಿ ಅಕ್ಷಯ ತೃತೀಯದ ಸಂಭ್ರಮ.. ಡೈಮಂಡ್​ ಆಭರಣಗಳ ಮೇಲೆ ಶೇ. 20ರಷ್ಟು ರಿಯಾಯಿತಿ, ಚಿನ್ನ?

ಪಲ್ಸರ್ ಎನ್ ಎಸ್ 400 ಝಡ್ ಬೈಕ್​ನಲ್ಲಿ ನ್ಯಾವಿಗೇಷನ್, ಎಸ್​ಎಮ್​ಎಸ್​​, ಕರೆ ಸ್ವೀಕರಿಸಬಹುದಾದ ಡಿಜಿಟಲ್​​ ಕನ್ಸೋಲ್​​ ಅನ್ನು ನೀಡಲಾಗಿದೆ. ಸ್ಮಾರ್ಟ್​ಫೋನ್​ಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಬ್ಲೂಟೂತ್​ ಕನೆಕ್ಟಿವಿಟಿ ಲಭ್ಯವಿದೆ.

ಬೆಲೆ ಎಷ್ಟು?

ನೂತನ ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಆರಂಭಿಕ ಎಕ್ಸ್​ ಶೋ ರೂಂ ಬೆಲೆ 1.85 ಲಕ್ಷ ರೂ ಆಗಿದೆ. (ಹೆಚ್ಚಿನ ಮಾಹಿತಿಗೆ ಹತ್ತಿರದ ಶೋಂ ರೂಂ ಸಂಪರ್ಕಿಸಿ)​.

ಇದನ್ನೂ ಓದಿ: ಶಿವಕಾಶಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 8 ಮಂದಿ ಸುಟ್ಟು ಕರಕಲು, ಹಲವರಿಗೆ ಗಾಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೆ ವ್ಹಾ.. ಅಂತು ಇಂತು ಬಂತು ಹೊಸ ಬಜಾಜ್​ ಪಲ್ಸರ್​ NS400Z ಬೈಕ್​.. ಫೀಚರ್ಸ್​ ಅದ್ಭುತ! ಬೆಲೆ ಎಷ್ಟಿದೆ?

https://newsfirstlive.com/wp-content/uploads/2024/05/pulsar-Ns400z.jpg

Load More