newsfirstkannada.com

ಬೆಂಗಳೂರಲ್ಲಿ ಇಂದು ಧಾರಾಕಾರ ಮಳೆ.. ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

Share :

Published May 6, 2024 at 4:56pm

Update May 6, 2024 at 4:55pm

    ಎರಡು ದಿನದ ಹಿಂದೆ ಉದ್ಯಾನನಗರಿಯಲ್ಲಿ ಸುರಿದಿರುವ ಮಳೆ

    ಬಿಸಿಲಿನ ಸೆಕೆ, ಈ ಮಳೆಯಿಂದ ತಂಪಾದ ವಾತಾವರಣ ಬಂದಿದೆ

    ರಾಜ್ಯದ 8 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಮೇತ ಮಳೆ ಸಾಧ್ಯತೆ

ಬೆಂಗಳೂರು: ಎರಡು ದಿನದ ಹಿಂದೆ ಸಿಲಿಕಾನ್ ಸಿಟಿಗೆ ಮಳೆರಾಯ ತಂಪೆರೆದು ಹೋಗಿದ್ದಾನೆ. ಸದ್ಯ ಇದರ ಬೆನ್ನಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ವರ್ಷದ ಮೊದಲ ಮಳೆ ಬಂದಿದ್ದು ಜನ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದ ಸುತ್ತ ಮುತ್ತ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ರಸ್ತೆಗಳಲ್ಲಿ ಕೊಂಚ ಟ್ರಾಫಿಕ್ ಕೂಡ ಕಂಡು ಬಂದಿತು. ಬೈಕ್ ಸವಾರರು, ವಾಹನ ಡ್ರೈವರ್ಸ್​ ಟ್ರಾಫಿಕ್​​ನಿಂದ ಬೇಸರ ವ್ಯಕ್ತಪಡಿಸಿದ್ರೂ ಮಳೆ ಬಂದಿದ್ದಕ್ಕೆ ಸಂತಸಗೊಂಡಿದ್ದಾರೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣನು ಸಮಾಧಾನ ಮಾಡಿದ್ದಾನೆ. ಏರ್​​ಪೋರ್ಟ್​ನಲ್ಲಿ ಮಳೆಯಿಂದಾಗಿ ತಂಪಾದ ವಾತಾವರಣ ಮೂಡಿದ್ದು ವಿಮಾನ ಪ್ರಯಾಣಿಕರೆಲ್ಲ ವಾವ್ಹ್​.. ಕೂಲ್.. ಕೂಲ್ ಎಂದು ಖುಷಿಯಾಗಿದ್ದಾರೆ.

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

ನಾಳೆ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆಗುತ್ತೆ..?

ಬೆಂಗಳೂರಲ್ಲಿ ಮೇ 7 ಮತ್ತು 8 ರಂದು ಮೋಡ ಕವಿದ ವಾತಾವರಣ ಸಿಲಿಕಾನ್ ಸಿಟಿಯನ್ನು ಆವರಿಸಲಿದೆ. ಮೇ 7 ಹಾಗೂ 8ರಂದು ಬೆಂಗಳೂರಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೇ 9 ಮತ್ತು 10 ರಂದು ಸಹ ಮಳೆಯ ವಾತಾವರಣ ಮುಂದುವರಿಯಲಿದೆ. ಮುಂದಿನ ವಾರ ಬೆಂಗಳೂರಿಗರಿಗೆ ಮಳೆಗಾಲದ ಅನುಭವ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ಹೊರೆತುಪಡಿಸಿ 8 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಮೇತ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ಮೈಸೂರು, ಹುಣಸೂರು, ಕೊಡಗು, ಕೆ.ಆರ್ ನಗರ, ಹಾಸನ, ಮಂಡ್ಯ ಜಿಲ್ಲೆಯಲ್ಲಿ 2 ಸೆಂಟಿ ಮೀಟರ್‌ನಷ್ಟು ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: 120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

ಉಳಿದಂತೆ ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಯ ವಿವಿಧೆಡೆ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ಜೊತೆ, ಜೊತೆಗೆ ಮೇ 7ರವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಇಂದು ಧಾರಾಕಾರ ಮಳೆ.. ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

https://newsfirstlive.com/wp-content/uploads/2024/05/BNG_AIRPORT.jpg

Load More