/newsfirstlive-kannada/media/post_attachments/wp-content/uploads/2024/08/Rain_Traffic.jpg)
ಸಿಲಿಕಾನ್ ಸಿಟಿಯಲ್ಲಿ ಇಂದು ಭಾರೀ ಮಳೆ ಬರುವ ಸಾಧ್ಯತೆ ಇದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ವರುಣಾ ಹನಿ ಸುರಿಸುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಸಂಜೆ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿತ್ತು. ಮಳೆಯಿಂದ ಹಲವು ಕಡೆ ತೊಂದರೆ ಉಂಟಾಗಿತ್ತು. ಇದೀಗ ಸೆಪ್ಟೆಂಬರ್ 1ವೆರೆಗೆ ಸಿಲಿಕಾನ್​​ ಸಿಟಿಯಲ್ಲಿ ಮಳೆ ಸುರಿಯುವ ಬಗ್ಗೆ ಹವಮಾನ ಇಲಾಖೆ ಅಲರ್ಟ್​ ಘೋಷಿಸಿದೆ.
ಆಸ್ನಾ ಸೈಕ್ಲೋನ್​​ ಅಬ್ಬರ
ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದೆ. ವಾಯುಭಾರ ಕುಸಿತದಿಂದ ಸೈಕ್ಲೋನ್ ಆಗಿ ಅಸ್ನಾ ಸೈಕ್ಲೋನ್​ ಆಗಿ ಪರಿವರ್ತನೆಗೊಂಡಿದೆ.
ಇದನ್ನೂ ಓದಿ: Flood photos: ಭಾರೀ ಮಳೆಗೆ 28 ಮಂದಿ ಸಾವು; 11 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್..
1976ರ ಬಳಿಕ ಆಗಸ್ಟ್ ತಿಂಗಳಲ್ಲಿ ಬಂದಿರುವ ಮೊದಲ ಸೈಕ್ಲೋನ್ ಇದಾಗಿದೆ. ಹೀಗಾಗಿ ಇದಕ್ಕೆ ಅಸ್ನಾ ಎಂದು ಹೆಸರಿಡಲಾಗಿದೆ. ಗುಜರಾತ್ ರಾಜ್ಯ ಅಸ್ನಾ ಸೈಕ್ಲೋನ್ ನಿಂದ ತತ್ತರಿಸಿದೆ.
ಗುಜರಾತ್ ರಾಜ್ಯದಲ್ಲಿ ಸೈಕ್ಲೋನ್ ನಿಂದ ಕಳೆದ 4 ದಿನಗಳಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 4 ದಿನಗಳಲ್ಲಿ 32 ಸಾವಿರ ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ 1,200 ಮಂದಿಯನ್ನು ವಿವಿಧ ರಕ್ಷಣಾ ತಂಡಗಳು ರಕ್ಷಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us