newsfirstkannada.com

ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಬಾಲಕಿ ಮನೆಯ ಹಿಂದೆಯೇ ನಿಗೂಢ ಸಾವು.. ಏನಾಯಿತು?

Share :

Published May 15, 2024 at 6:03pm

Update May 15, 2024 at 6:06pm

    ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ ಪೋಷಕರು

    ಮನೆ ಹಿಂದೆ ಬಾಲಕಿಯ ಮೃತದೇಹ ಪತ್ತೆ, ತಂದೆ- ತಾಯಿ ಶಾಕ್

    ಸಾವಿಗೆ ಕಾರಣವಾದರೂ ಏನು, ರಿಪೋರ್ಟ್ ಏನ್ ಹೇಳುತ್ತೆ..?

ಬೆಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳ್ಳಂದೂರಿನ ಠಾಣೆ ವ್ಯಾಪ್ತಿಯ ಇಬ್ಬಲೂರಿನಲ್ಲಿ ನಡೆದಿದೆ.

ಇಬ್ಬಲೂರಿನಲ್ಲಿ ಪೋಷಕರ ಜೊತೆ ವಾಸವಿದ್ದ ಲಕ್ಷ್ಮಿ ಮೃತಪಟ್ಟ ಬಾಲಕಿ. ಮೇ 8ರಂದು ಬಾಲಕಿಯು ನಾಪತ್ತೆಯಾಗಿದ್ದಳು. ಈ ಸಂಬಂಧ ಮೇ 9 ರಂದು ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬೆಳ್ಳಂದೂರು ಪೊಲೀಸ್​ ಠಾಣೆಗೆ ಪೋಷಕರು ದೂರು ನೀಡಿದ್ದರು. ಆದರೆ ಮೇ 11ರಂದು ಮನೆಯ ಹಿಂಬದಿಯ ಪಿಟ್​ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವುದು ಶಂಕೆ ಮೂಡಿಸಿದೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

ಲೇಬರ್ ಶಡ್​ಗಳಲ್ಲಿ ಪೋಷಕರು ಹಾಗೂ ಲಕ್ಷ್ಮಿ ವಾಸವಿದ್ದಾರೆ. ಮನೆಯ ಹಿಂಬದಿಯಲ್ಲಿ ತೆರದ ಸ್ಥಿತಿಯಲ್ಲಿ 6 ಅಡಿ‌ಯ ಪಿಟ್ ಇದೆ. ಈ ಪಿಟ್ ಸುತ್ತ ಗಿಡಗಳು ಬೆಳೆದಿದ್ದ ಕಾರಣ ಒಳಗೆ ಏನು ಬಿದ್ದರೂ ಸರಿಯಾಗಿ ಕಾಣಿಸುತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಯತಪ್ಪಿ ಬಾಲಕಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ ಎಂದು ಮಾಹಿತಿ ಇದೆ. ಬೆಳ್ಳಂದೂರು ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಬಾಲಕಿ ಮನೆಯ ಹಿಂದೆಯೇ ನಿಗೂಢ ಸಾವು.. ಏನಾಯಿತು?

https://newsfirstlive.com/wp-content/uploads/2024/05/BNG_GIRL.jpg

Load More