ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?
ಜೆಪಿ ನಗರದಲ್ಲಿ ಇಂಡಿಯನ್ ಬೇಕ್ ಕೇಕ್ ಶೋ!
ಅಚ್ಚರಿಪಡುವ ರೀತಿಯಲ್ಲಿ ಬಗೆ ಬಗೆಯ ಕೇಕ್ ತಯಾರು
ಬೆಂಗಳೂರು: ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಕೇಕ್ ಎಂದು ಹೇಳಿದ ಕೂಡಲೇ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಆದರೆ ಈ ಕೇಕ್ಗಳನ್ನ ನೋಡುತ್ತಿದ್ದರೆ ತಿನ್ನಬೇಕು ಅಂತ ಅನಿಸುವುದು ಇಲ್ಲ. ಇಲ್ಲಿ ಕೇಕ್ನ ಈ ರೀತಿನೂ ಮಾಡಬಹುದಾ ಅಂತ ಅಚ್ಚರಿ ವ್ಯಕ್ತಪಡಿಸುವುದರಲ್ಲಿ ಯಾವುದೇ ಡೌಟೇ ಇಲ್ಲ. ಸಿಲಿಕಾನ್ ಸಿಟಿ ಅಂದ್ರೆನೇ ಕಲರ್ ಫುಲ್.
ಇನ್ನೂ, ವಿಕೇಂಡ್ ಬಂತು ಅಂದರೆ ಮುಗಿತು ಎಲ್ಲಿ ನೋಡಿದರೂ ಕಲರ್ ಫುಲ್ ಇವೆಂಟ್ಗಳ ಜಾತ್ರೆ ನಡಿಯುತ್ತಾನೇ ಇರುತ್ತೆ. ಅದೇ ರೀತಿ ಬೆಂಗಳೂರಿನ ಜೆಪಿ ನಗರದಲ್ಲಿ ಇಂಡಿಯಾನ್ ಬೇಕ್ ಶೋ ನಡೆದಿದೆ. ಇಲ್ಲಿಗೆ ಬಂದು ಕೇಕ್ ನೋಡಿದ ಪ್ರತಿಯೊಬ್ಬ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ವೇಡಿಂಗ್ ಕೇಕ್, ಹ್ಯಾರಿ ಪಾಟರ್, ಬಾರ್ಬಿ, ಭಾರತೀಯ ಸಾಂಪ್ರದಾಯಿಕ ಮದುವೆ, ಅವತಾರ ಸೇರಿದಂತೆ ಕೇಕ್ನಲ್ಲಿ ಭಿನ್ನ ಭಿನ್ನವಾಗಿ ತಯಾರಾಗಿದ್ದವು. ಈ ಕೇಕ್ಗಳನ್ನ ಮಾಡುವುದಕ್ಕೆ ಸುಮಾರು ಒಂದು ವಾರ ತೆಗೆದುಕೊಂಡಿದ್ದೇವೆ ಅಂತ ಹೇಳಿದ್ದಾರೆ. ಇದು ನಮ್ಮ ಫ್ಯಾಶನ್ ಆಗಿದ್ದು, ಬೇಕಿಂಗ್ ನಮಗೆ ಖುಷಿಕೊಡುತ್ತೆ ಎಂದು ಹರ್ಷ ಸಹ ವ್ಯಕ್ತ ಪಡಿಸಿದ್ದಾರೆ.
ಈ ಕೇಕ್ಗಳನ್ನು ನೋಡಿ ಮನಸೋಲದವರೇ ಇಲ್ಲ. ಅಷ್ಟು ಮುದ್ದಾಗಿ ಕೇಕ್ನಲ್ಲಿ ತಮ್ಮ ಪ್ರತಿಭೆಯನ್ನು ಈ ರೀತಿನೂ ತೋರಿಸಬಹುದು ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದು ನೋಡುಗರ ಕಣ್ಣಿಗೆ ಹಬ್ಬ ಅಂತನೇ ಹೇಳಬಹುದು. ಇಲ್ಲಿರುವ ಪ್ರತಿ ಕೇಕ್ಗೂ ಒಂದೊಂದು ಥೀಮ್ ಸಹ ಇದ್ದು, ಅದರ ಪೂರ್ತಿ ವಿವರವನ್ನು ಕೇಕ್ ತಯಾರು ಮಾಡಿದವರೇ ವಿವರಿಸಿದ್ದಾರೆ. ಒಟ್ಟಿನಲ್ಲಿ ಈ ಕೇಕ್ ನೋಡಿದರೆ ತಿನ್ನುವುದಕ್ಕಲ್ಲ. ಅಷ್ಟು ಅಚ್ಚರಿಪಡುವ ರೀತಿಯಲ್ಲಿ ಕೇಕ್ ಅನ್ನು ಮಾಡಲಾಗಿದೆ. ಒಂದೊಂದು ಕೇಕ್ನ ಹಿಂದೆ ಒಂದೊಂದು ಕಥೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ