newsfirstkannada.com

ಸಂಸದ ಪಿ.ಸಿ ಮೋಹನ್ ಪತ್ನಿ ಹೆಸರಲ್ಲೇ ಕೋಟಿ, ಕೋಟಿ ಸಂಪತ್ತು; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ!

Share :

Published April 1, 2024 at 6:03pm

    ಬಿಜೆಪಿ ಸಂಸದ ಪಿ.ಸಿ ಮೋಹನ್ ಒಟ್ಟು 36.44 ಕೋಟಿ ಆಸ್ತಿಗೆ ಒಡೆಯ

    ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳಿಂದ 5.79 ಕೋಟಿ ರೂ. ಸಾಲ

    ಬಿಜೆಪಿ ಸಂಸದ ಪಿ.ಸಿ ಮೋಹನ್ ವಿರುದ್ಧ 2 ಕ್ರಿಮಿನಲ್ ಕೇಸ್ ದಾಖಲು

ಬೆಂಗಳೂರು ಕೇಂದ್ರ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್‌‌ ಅವರು ಇಂದು ಅಬ್ಬರದ ಸಮಾವೇಶ ಮತ್ತು ಘಟಾನುಘಟಿ ನಾಯಕರ ಸಮ್ಮುಖದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪಿ.ಸಿ ಮೋಹನ್ ನಾಮಪತ್ರ ಸಲ್ಲಿಕೆಗೆ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ, ವಿಪಕ್ಷ ನಾಯಕ ಆರ್‌. ಅಶೋಕ್, ಮಾಜಿ ಸಚಿವರಾಜ ಅರವಿಂದ್ ಲಿಂಬಾವಳಿ, ಜನಾರ್ದನ ರೆಡ್ಡಿ ಸಾಥ್ ನೀಡಿದ್ದರು.

ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಪಿ.ಸಿ ಮೋಹನ್ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಪಿ.ಸಿ ಮೋಹನ್ ಅವರು ಅಫಿಡವಿಟ್ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಯದುವೀರ್​​ ಒಡೆಯರ್​ ಬಳಿ ಇರೋ ಆಸ್ತಿ ಎಷ್ಟು ಗೊತ್ತಾ? ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ..!

ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಒಟ್ಟು 36.44 ಕೋಟಿ ಆಸ್ತಿಗೆ ಒಡೆಯ. ಇವರ ಒಟ್ಟು‌ ಚರಾಸ್ತಿ‌ – 10.46 ಕೋಟಿ ರೂಪಾಯಿ. ಒಟ್ಟು ಸ್ಥಿರಾಸ್ತಿ – 25.98 ಕೋಟಿ ರೂಪಾಯಿ. ಪಿ.ಸಿ ಮೋಹನ್ ಅವರ ಪತ್ನಿ ಶೈಲಾ ಮೋಹನ್ ಅವರ ಒಟ್ಟು ಆಸ್ತಿ ಬರೋಬ್ಬರಿ 34.64 ಕೋಟಿ. ಶೈಲಾ ಮೋಹನ್ ಅವರ ಬಳಿ ಒಟ್ಟು ಚರಾಸ್ತಿ – 4.39 ಕೋಟಿ ರೂಪಾಯಿ, ಸ್ಥಿರಾಸ್ತಿ – 30.25 ಕೋಟಿ ರೂಪಾಯಿ. ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳಿಂದ ಪಿ.ಸಿ ಮೋಹನ್ ಅವರು 5.79 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಪತ್ನಿ ಮಾಡಿರುವ ಸಾಲ 10 ಕೋಟಿ ರೂಪಾಯಿ. ಪಿ.ಸಿ ಮೋಹನ್ ಅವರ ಬಳಿ ಸದ್ಯ 39,590 ಕ್ಯಾಶ್ ಇದೆ. ಪತ್ನಿ ಶೈಲಾ ಅವರ‌ ಬಳಿ 4 ಲಕ್ಷ ರೂ. ನಗದು ಇದೆ.

ಪಿಸಿ ಮೋಹನ್‌ಬಳಿ 1/2 kg ಚಿನ್ನ, 3 kg ಬೆಳ್ಳಿ ಒಡವೆ ಇವೆ. ಶೈಲ ಮೋಹನ್ ಬಳಿ 1/2 kg ಚಿನ್ನ, 5kg ಬೆಳ್ಳಿ ಒಡವೆಗಳಿವೆ. ಪಿ.ಸಿ‌ ಮೋಹನ್ ಅವರು 2022-23ರಲ್ಲಿ 49 ಲಕ್ಷ ರೂಪಾಯಿ ಆದಾಯ ತೋರಿಸಿದ್ದಾರೆ. ಶೈಲಾ ಮೋಹನ್ ಅವರು 2022-23ರಲ್ಲಿ 2.40 ಕೋಟಿ‌ ರೂಪಾಯಿ ಆದಾಯ ತೋರಿಸಿದ್ದಾರೆ. ಬಿಜೆಪಿ ಸಂಸದ ಪಿ.ಸಿ ಮೋಹನ್ ವಿರುದ್ಧ 2 ಕ್ರಿಮಿನಲ್ ಕೇಸ್ ದಾಖಲಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಸದ ಪಿ.ಸಿ ಮೋಹನ್ ಪತ್ನಿ ಹೆಸರಲ್ಲೇ ಕೋಟಿ, ಕೋಟಿ ಸಂಪತ್ತು; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ!

https://newsfirstlive.com/wp-content/uploads/2024/04/PC-Mohan-BJP.jpg

Load More