ಯದುವೀರ್ ಒಡೆಯರ್ ಬಳಿ ಇರೋದು ಎಷ್ಟು ಕೋಟಿ ಆಸ್ತಿ ಗೊತ್ತಾ?
ಇವರ ಹೆಸರಲ್ಲಿ ಯಾವುದೇ ಕಾರು ಇಲ್ಲ, ಸೈಟ್ ಇಲ್ಲ, ಭೂಮಿನೂ ಇಲ್ಲ!
ಯದುವೀರ್ ಪತ್ನಿ ತ್ರಿಷಿಕಾ ಹೆಸರಲ್ಲಿ ಆಸ್ತಿ ಎಷ್ಟು ಕೋಟಿ ನೀವೇ ಓದಿ
ಮೈಸೂರು: ಕೊನೆಗೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ, ನಾಮಪತ್ರ ಸಲ್ಲಿಕೆ ಕೇವಲ 5 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿ ಮೈಸೂರಿನ ಒಡೆಯ ಯದುವೀರ್ ಅಚ್ಚರಿ ಮೂಡಿಸಿದ್ದಾರೆ. ವಿಶೇಷ ಎಂದರೆ ಇವರ ಹೆಸರಲ್ಲಿ ಯಾವುದೇ ಕೃಷಿ ಭೂಮಿಯಾಗಲಿ, ಸೈಟ್ ಆಗಲಿ, ಮನೆ ಆಗಲಿ ಇಲ್ಲ ಎಂಬುದು.
ಕೈಯಲ್ಲಿ 1 ಲಕ್ಷ ರೂ. ನಗದು ಇದೆ. ವಿವಿಧ ಬ್ಯಾಂಕ್ ಅಕೌಂಟ್‌ಗಳಲ್ಲಿ 1.36 ಕೋಟಿ ರೂ. ಇದೆ. ಜತೆಗೆ 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ ಕೂಡ ಇದೆ. ಒಟ್ಟು 4.99 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ಯದುವೀರ್ ಘೋಷಿಸಿಕೊಂಡಿದ್ದಾರೆ.
ಇನ್ನು, ಯದುವೀರ್ ಪತ್ನಿ ಬಳಿ 75 ಸಾವಿರ ರೂ. ನಗದು, 90 ಲಕ್ಷ ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಒಟ್ಟು 1.04 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಯದುವೀರ್ ಮಗನ ಬಳಿಯಿರೋ ಆಸ್ತಿ ಎಷ್ಟು?
ಯದುವೀರ್ ಪುತ್ರನ ಕೈಯಲ್ಲಿ 5 ಸಾವಿರ ರೂ. ನಗದು ಇದ್ದು, ಮ್ಯೂಚುವಲ್ ಫಂಡ್‌ನಲ್ಲಿ 1.49 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಟಾಟಾ ಲೈಫ್ ಇನ್ಸೂರೆನ್ಸ್‌ನಲ್ಲಿ 1.89 ಕೋಟಿ ರೂ. ಹೂಡಿಕೆ ಮಾಡಿದ್ದು, 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಇದೆ. ಇವರ ಹೆಸರಲ್ಲಿ ಒಟ್ಟು 3.63 ಕೋಟಿ ರೂ. ಚರಾಸ್ತಿ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ರಾಹುಲ್, ಅಥಿಯಾ ಶೆಟ್ಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ