/newsfirstlive-kannada/media/post_attachments/wp-content/uploads/2024/03/Election-Cash-Seize-1.jpg)
ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಮತದಾರರನ್ನ ಸೆಳೆಯಲು ನೂರಾರು ಪ್ರಯತ್ನ ಮಾಡುತ್ತಿದ್ದಾರೆ. ಪ್ರಚಾರದಲ್ಲಿ ಮುಳುಗಿರುವ ಕ್ಯಾಂಡಿಡೇಟ್ಸ್​ ವೋಟರ್ಸ್​ಗೆ ಬೇರೆ ಬೇರೆ ರೀತಿಯ ಆಮಿಷವೊಡ್ಡುತ್ತಿದ್ದಾರೆ. ಇದರ ಮಧ್ಯೆ ಜನರಿಗೆ ಹಂಚಲು ತಂದಿದ್ದಂತಹ 18 ಕೋಟಿಗೂ ಅಧಿಕ ಮೊತ್ತದ ಹಲವಾರು ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮೂಲಕ ಸೀಜ್ ಮಾಡಿದ್ದಾರೆ. ಅದರಲ್ಲಿ ದಾಖಲೆ ಇಲ್ಲದ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸೇರಿವೆ.
ಲೋಕಸಭಾ ಎಲೆಕ್ಷನ್​ ವೇಳೆಯೇ ಚುನಾವಣಾ ಅಧಿಕಾರಿಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಇಲ್ಲಿವರೆಗೂ 4 ಕೋಟಿಗೂ ನಗದು ಸೀಜ್ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದರೂ ಇಲ್ಲಿವರೆಗೆ ಯಾವ್ಯಾವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/04/Election-Case-Sieze.jpg)
93640.935 ಲೀಟರ್ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ 6,72,77,420 ರೂಪಾಯಿ ಮೌಲ್ಯದ 103.564 ಕೆಜಿ ಮಾದಕ ದ್ರವ್ಯವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದು ಅಲ್ಲದೇ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು 37,50,000 ರೂಪಾಯಿ ಮೌಲ್ಯದ 18.409 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
1,09,34,877 ರೂಪಾಯಿ ಮೌಲ್ಯದ ಇತರೆ ವಸ್ತುಗಳು ಹಾಗೂ ಈ ಎಲ್ಲ ವಸ್ತುಗಳನ್ನು ಸಾಗಿಸುತ್ತಿದ್ದಂತಹ ಒಟ್ಟು 65 ವಾಹನಗಳನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವಾಹನಗಳ ಮೌಲ್ಯ 1,52,41,560 ರೂಪಾಯಿ ಆಗಿದೆ. ಯಾವುದೇ ದಾಖಲೆ ಇಲ್ಲದ 18,28,49,790 ರೂಪಾಯಿ ಸೀಜ್ ಮಾಡಲಾಗಿದೆ. ಈವರೆಗೆ ನಗರ ವ್ಯಾಪ್ತಿಯಲ್ಲಿ ಒಟ್ಟು 18,36,14,569 ರೂಪಾಯಿ ಮೌಲ್ಯದ ವಸ್ತುಗಳನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರ ಜೊತೆಗೆ ಇಲ್ಲಿಯವರೆಗೆ ಚೆಕ್ ಪೋಸ್ಟ್ ತಪಾಸಣೆ ಮಾಡುವಾಗ ಒಟ್ಟು 1,939 ಎಫ್​ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us