newsfirstkannada.com

ಬೆಂಗಳೂರು ನಗರದ ಹಲವೆಡೆ ವರುಣನ ಅಬ್ಬರ.. ಗುಡುಗು, ಸಿಡಿಲಿನ ಸಮೇತ ಭಾರೀ ಮಳೆ; ಜನರ ಪರದಾಟ

Share :

Published June 2, 2024 at 7:12pm

Update June 2, 2024 at 7:14pm

  ಮಳೆಯ ಕುರಿತು ಹವಾಮಾನ ಇಲಾಖೆ ಕೊಟ್ಟ ಸಂದೇಶವೇನು?

  ಭಾನುವಾರ ಎಂದು ಕುಟುಂಬ ಸಮೇತ ಹೊರ ಹೋಗಿದ್ದವ್ರಿಗೆ ಶಾಕ್

  ವರುಣನ ಅಬ್ಬರಕ್ಕೆ ನಗರದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಫುಲ್ ಶಾಕ್ ಆಗಿದೆ. ಬೆಳಗ್ಗೆಯಿಂದ ಸುಮ್ಮನಿರುವ ವರುಣರಾಯ ಸಂಜೆ ಆಗುತ್ತಲೇ ಸದ್ದಿಲ್ಲದೇ ಎಂಟ್ರಿ ಕೊಡುತ್ತಿದ್ದಾನೆ. ವರುಣನ ಅಬ್ಬರಕ್ಕೆ ನಗರದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆ ತುಂಬಿ ಮಳೆ ನೀರು ಹರಿಯುತ್ತಿದ್ದರಿಂದ ಟ್ರಾಫಿಕ್ ಉಂಟಾಗಿ ಬೈಕ್ ಸವಾರರು, ವಾಹನ ಚಾಲಕರು ತೊಂದರೆಗೆ ಒಳಗಾಗಿದ್ದಾರೆ.

ಮಳೆ ಕಂಡು ಹಲವರು ಸಂತಸ ವ್ಯಕ್ತ ಪಡಿಸಿದರೆ ಇನ್ನೂ ಕೆಲವರು ಧಾರಾಕಾರ ಮಳೆಗೆ ಸುಸ್ತಾಗಿ ಹೋಗಿದ್ದಾರೆ. 2 ದಿನದಿಂದ ನಗರದಲ್ಲಿ ಮೋಡ ಕವಿದ ವಾತವರಣ ಇತ್ತು. ಆದರೆ ಸಂಜೆ ಆಗುತ್ತಿದ್ದಂತೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಕೆ.ಆರ್ ಮಾರ್ಕೆಟ್, ಜೆ.ಸಿ ರಸ್ತೆ, ಲಾಲ್​​ ಬಾಗ್ ರಸ್ತೆ, ನಾಗರಬಾವಿ, ಯಶವಂತಪುರ, ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯ ನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ರಾಜಾಜಿ ನಗರ, ಕೋರಮಂಗಲ ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಗುಡುಗು, ಮಿಂಚು ಸಮೇತ ಮಳೆ ಆರ್ಭಟಿಸುತ್ತಿದೆ. ಹೀಗಾಗಿ ಈ ಎಲ್ಲ ಪ್ರದೇಶಗಳ ರಸ್ತೆಗಳಲ್ಲಿ ಟ್ರಾಫಿಕ್ ಉಂಟಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

ನಿನ್ನೆಯಷ್ಟೇ ಧಾರಾಕಾರವಾಗಿ ತಡರಾತ್ರಿವರೆಗೆ ಸುರಿದಿದ್ದ ಮಳೆ ಇಂದು ಕೂಡ ಹಾಗೇ ಮುಂದುವರೆದಿದೆ. ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ಹೆಬ್ಬಾಳ, ಕೊಡಿಗೆಹಳ್ಳಿ, ಕೊಡಿಗೆಹಳ್ಳಿ ಗೇಟ್, ಬ್ಯಾಟರಾಯನಪುರ, ಜಿಕೆವಿಕೆ, ಜಕ್ಕೂರು ಏರೋಡ್ರಮ್​​, ಯಲಹಂಕ, ಜಕ್ಕಸಂದ್ರ, ಕೋರಮಂಗಲ ಸೇರಿದಂತೆ ನಗರದ ವಿವಿಧಡೆ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಮನೆಗೆ ತೆರಳುತ್ತಿದ್ದ ಜನರು, ವ್ಯಾಪಾರಿಗಳು, ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಈ ವಾರ ಫುಲ್ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ನಗರದ ಹಲವೆಡೆ ವರುಣನ ಅಬ್ಬರ.. ಗುಡುಗು, ಸಿಡಿಲಿನ ಸಮೇತ ಭಾರೀ ಮಳೆ; ಜನರ ಪರದಾಟ

https://newsfirstlive.com/wp-content/uploads/2024/06/BNG_RAINS_3.jpg

Load More