newsfirstkannada.com

T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

Share :

Published June 2, 2024 at 5:52pm

Update June 2, 2024 at 5:53pm

  ಟೂರ್ನಿಯಲ್ಲಿ ಹೆಚ್ಚು ಚರ್ಚೆ ಆಗೋ ಪಂದ್ಯ IND vs PAK

  ವಿರಾಟ್​ ಕೊಹ್ಲಿಯಿಂದ ವರ್ಲ್ಡ್​​ಕಪ್​ನಲ್ಲಿ ಪಂದ್ಯ ಸೋತೇವು

  ‘ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ನರ್ವಸ್ ಆಗಿದ್ದೀನಿ’

ಟಿ20 ವಿಶ್ವಕಪ್ ಮಹಾ ಸಮರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಅಮೆರಿಕ ಗೆದ್ದಿದೆ. ವಿಶ್ವ ಕ್ರಿಕೆಟ್​ ಅಭಿಮಾನಿಗಳ ಕಣ್ಣು ಮಾತ್ರ ಭಾರತ- ಪಾಕ್ ನಡುವಿನ ಪಂದ್ಯದ ಮೇಲಿದೆ. ಜೂನ್ 9 ರಂದು ನ್ಯೂಯಾರ್ಕ್​​​ನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ಪಾಕ್​ ಕ್ಯಾಪ್ಟನ್​ ಬಾಬರ್ ಅಜಂ ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೋರ್ಷೆ ಕಾರು ಆಕ್ಸಿಡೆಂಟ್​​ನಲ್ಲಿ ತಪ್ಪು ಒಪ್ಪಿಕೊಂಡ ಬಾಲಕ.. ಪೊಲೀಸರ ಮುಂದೆ ಬಾಯ್ಬಿಟ್ಟಿದ್ದೇನು?

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ಬಾಬರ್ ಅಜಂ, ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ಇಡೀ T20 ವಿಶ್ವಕಪ್​​ ಟೂರ್ನಿಯಲ್ಲೇ ಹೆಚ್ಚು ಚರ್ಚೆಯಾಗುವ ಮ್ಯಾಚ್ ಆಗಿದೆ. ವಿಶ್ವದ ಯಾವುದೇ ಮೂಲೆಗೆ ಹೋದರು ಭಾರತ-ಪಾಕ್​ ನಡುವಿನ ಪಂದ್ಯದ ಬಗ್ಗೆ ಮಾತಾಡ್ತಾರೆ. ಇಂಥಹ ಮ್ಯಾಚ್​ನಲ್ಲಿ ಆಡಲು ಆಟಗಾರರೆಲ್ಲ ಉತ್ಸಾಹ ಹೊಂದಿದ್ದಾರೆ. ಪ್ರತಿ ಒಬ್ಬರು ತಮ್ಮ ತಮ್ಮ ದೇಶವನ್ನು ಬೆಂಬಲಿಸುವುದರಿಂದ ಎಲ್ಲರ ಕಣ್ಣು ಭಾರತ-ಪಾಕ್ ಮ್ಯಾಚ್​ ಮೇಲಿದೆ. ನಾನು ಕೂಡ ಪಂದ್ಯ ನಡೆಯುವುದಕ್ಕೂ ಇನ್ನು ವಾರ ಇದ್ದರು ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​​​ನ ಮೊದಲ ಪಂದ್ಯದಲ್ಲೇ ಅಮೆರಿಕ ಸೆನ್ಸೇಷನ್.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಆ್ಯರೋನ್ ಜೇನ್ಸ್​

ಭಾರತದ ಜೊತೆ ಆಡುವಾಗ ಹೆಚ್ಚು ಹೆಚ್ಚು ಬ್ಯಾಟಿಂಗ್​ ಕಡೆಗೆ ಗಮನ ಕೊಡುತ್ತೇನೆ. 2023ರ ವರ್ಲ್ಡ್​​ಕಪ್​ನಲ್ಲಿ ಗೆಲುವು ಬಹುತೇಕ ನಮ್ಮ ಕಡೆ ಇತ್ತು. ಆದರೆ ವಿರಾಟ್​ ಕೊಹ್ಲಿಯವರು ಉತ್ತಮ ಬ್ಯಾಟಿಂಗ್​​ನಿಂದ ಗೆಲುವನ್ನು ತಮ್ಮದಾಗಿಸಿಕೊಂಡರು. ಇದು ಮತ್ತೆ ಅಮೆರಿಕದಲ್ಲಿ ಮರುಕಳಿಸುವುದಿಲ್ಲ ಎನ್ನುವ ವಿಶ್ವಾಸವಿದೆ. ಇಡೀ ಕ್ರಿಕೆಟ್ ಅಭಿಮಾನಿಗಳ ನೋಟವೆಲ್ಲ ಭಾರತ-ಪಾಕ್ ಮ್ಯಾಚ್​ ಮೇಲೆ ಇದೆ. ಹೀಗಾಗಿ ನಾನು ನರ್ವಸ್ ಆಗಿದ್ದೇನೆ. ಆದ್ರೆ ಈ ಸಲ ಪಂದ್ಯ ನಮ್ಮಿಂದ ಕೈಜಾರಿ ಹೋಗದಂತೆ ಎಚ್ಚರಿಕೆಯಿಂದ ಆಡುತ್ತೇವೆ. ಇದಕ್ಕಾಗಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

https://newsfirstlive.com/wp-content/uploads/2023/09/ROHIT_BABAR-1.jpg

Load More