newsfirstkannada.com

ಕಾರಾಗೃಹದ ಯಾವ ಕಾನೂನು ದರ್ಶನ್​ಗೆ ಅನ್ವಯ ಆಗಲ್ವಾ? ಜೈಲಿನಲ್ಲೂ ಜಾಲಿಯಾಗಿರೋದು ಹೇಗೆ ‘ಸ್ವಾಮಿ‘?

Share :

Published August 25, 2024 at 7:33pm

    ದರ್ಶನ್ ಕೈಯಲ್ಲಿ ಬೆಳ್ಳಿ ಕಡಗ ಕೂಡ ತೆಗೆಸಿಲ್ಲ ಜೈಲು ಅಧಿಕಾರಿಗಳು

    ಸದ್ಯ ಜೈಲಿನಲ್ಲಿ ಹಾಲಿಡೇ ಮೂಡ್‌ನಲ್ಲಿರೋ ದರ್ಶನ್ ರೆಸಾರ್ಟ್ ಫೀಲ್!

    ‘ಫೋಟೋ ಯಾವತ್ತಿನ ದಿನದ್ದು ಎಂದು ಜೈಲು ಅಧಿಕಾರಿಗಳಿಗೂ ಗೊತ್ತಾಗ್ತಿಲ್ಲ’

ಬೆಂಗಳೂರು: ಕಾನೂನು ಅಂದ್ರೆ ಎಲ್ಲರಿಗೂ ಒಂದೇ.. ದೊಡ್ಡವರು ಸಣ್ಣವರು, ಉಳ್ಳವರು, ಇಲ್ಲದವರು ಅನ್ನೋ ಮಾತುಗಳಿವೆ. ಅವೆಲ್ಲಾ ಕಾನೂನು ಪುಸ್ತಕದಲ್ಲಿರುವ ಬದನೇಕಾಯಿ ಅನ್ನೋದು ಪದೇ ಪದೇ ಸಾಬೀತು ಆಗುತ್ತಿದೆ. ಈ ಹಿಂದೆ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ವಿಚಾರದಲ್ಲಿಯೂ ಸಾಬೀತು ಆಗಿತ್ತು. ಈಗ ದರ್ಶನ್ ವಿಚಾರದಲ್ಲಿಯೂ ಸಾಬೀತಾಗಿದೆ. ಉಳ್ಳವರು ಎಲ್ಲಿದ್ದರೂ ಐಷಾರಾಮಿಯಾಗಿಯೇ ಇರುತ್ತಾರೆ ಅನ್ನೋದಕ್ಕೆ ಸದ್ಯ ವೈರಲ್ ಆಗಿರುವ ದರ್ಶನ್ ಫೋಟೋಗಳೇ ಕೈಗನ್ನಡಿಯಂತಿವೆ.

ಇದನ್ನೂ ಓದಿ: ಸಿಗರೇಟ್ ಪಾರ್ಟಿಯಲ್ಲಿ ದರ್ಶನ್ ಜೊತೆ ಕುಳಿತ ರೌಡಿಶೀಟರ್.. ವಿಲ್ಸನ್​ ಗಾರ್ಡನ್ ನಾಗನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಜೈಲಿನಲ್ಲಿ ದರ್ಶನ್ ಏನೂ ನಾವಂದುಕೊಂಡಂತೆ ನರಳಾಡುತ್ತಿಲ್ಲ, ಎಲ್ಲವನ್ನೂ ಕಳೆದುಕೊಂಡ ಪಂಜರದಲ್ಲಿನ ಗಿಳಿಯಂತೆ ಇಲ್ಲ. ಸ್ವಚ್ಛಂದವಾಗಿ ಹಾರಾಡಿಕೊಂಡೇ ಇದ್ದಾರೆ. ತಮ್ಮ ಗತ್ತು ಗೈರುತ್ತಿನಲ್ಲಿಯೇ ಇದ್ದಾರೆ ಅನ್ನೋದಕ್ಕೆ ಈ ಫೋಟೋನೇ ಸಾಕ್ಷಿ. ಯಾಕಂದ್ರೆ ಜೈಲಿನ ನಿಯಮದಪ್ರಕಾರ ಕೈದಿಗಳು ಒಡವೆ ಧರಿಸುವಂತಿಲ್ಲ. ಮಹಿಳೆಯರು ಧಾರ್ಮಿಕ ಒಡವೆಗಳನ್ನು ಬಿಟ್ಟು ಬೇರೆ ಯಾವ ಆಭರಣವನ್ನು ಧರಿಸುವಂತಿಲ್ಲ. ಈ ಹಿಂದೆ ಪವಿತ್ರಾಗೌಡ ಲಿಪ್ಸ್​ಟಿಕ್ ಕೂಡ ಇದೇ ರೀತಿ ಸದ್ದು ಮಾಡಿತ್ತು. ಹಾಗೆ ಈಗ ದರ್ಶನ್ ಕೈಯಲ್ಲಿರುವ ಬೆಳ್ಳಿ ಕಡಗ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್‌ ಕಥೆ ಏನು?

ಜೈಲು ಅಧಿಕಾರಿಗಳು ದರ್ಶನ್ ಕೈಯಲ್ಲಿನ ಬೆಳ್ಳಿ ಕಡಗವನ್ನು ಕೂಡ ತೆಗೆಸಿಲ್ಲ. ಸದ್ಯ ಜೈಲಿನಲ್ಲಿ ಹಾಲಿಡೇ ಮೂಡ್​ನಲ್ಲಿ ದರ್ಶನ್ ರೆಸಾರ್ಟ್​ ಫೀಲ್ ಮಾಡ್ತಿದ್ದಾರೆ. ಅದಕ್ಕೂ ಅಚ್ಚರಿ ಅಂದ್ರೆ ವೈರಲ್ ಆಗಿರುವ ಫೋಟೋ ಯಾವತ್ತಿಂದು ಅಂತ ಖುದ್ದು ಜೈಲು ಅಧಿಕಾರಿಗಳಿಗೆನೇ ಗೊತ್ತಿಲ್ಲ ಯಾಕಂದ್ರೆ ದರ್ಶನ್ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಮ್​ನ ನಿತ್ಯದ ರೂಟಿನ್ ಇದು ಎಂದು ತಿಳಿದು ಬಂದಿದೆ
ಇನ್ನೂ ದೊಡ್ಡ ದುರಂತ ಅಂದ್ರೆ ಜೈಲಿನಲ್ಲಿ ಯಾವುದೇ ಕೈದಿಗಳು ಕೂಡ ಒಡವೆಗಳನ್ನು ಧರಿಸುವಂತಿಲ್ಲ. ಎಲ್ಲಾ ಕೈದಿಗಳು ತಮ್ಮ ಎಲ್ಲಾ ಒಡವೆಗಳನ್ನು ಜೈಲಿನಲ್ಲಿ ಡೆಪಾಸಿಟ್ ಮಾಡಿ ಇಡಬೇಕು, ಆದ್ರೆ ಈ ರೂಲ್ಸ್ನ ಬ್ರೇಕ್ ಮಾಡಿರುವ ಜೈಲು ಅಧಿಕಾರಿಗಳು, ದರ್ಶನ್​ಗೆ ಬೆಳ್ಳಿ ಕಡಗ ಹಾಕಿಕೊಂಡಿದ್ದರೂ ಜಾಣ ಕುರುಡು ಪ್ರದರ್ಶಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಾಗೃಹದ ಯಾವ ಕಾನೂನು ದರ್ಶನ್​ಗೆ ಅನ್ವಯ ಆಗಲ್ವಾ? ಜೈಲಿನಲ್ಲೂ ಜಾಲಿಯಾಗಿರೋದು ಹೇಗೆ ‘ಸ್ವಾಮಿ‘?

https://newsfirstlive.com/wp-content/uploads/2024/08/DARSHAN_JAIL.jpg

Load More