newsfirstkannada.com

ಸಿಗರೇಟ್ ಪಾರ್ಟಿಯಲ್ಲಿ ದರ್ಶನ್ ಜೊತೆ ಕುಳಿತ ರೌಡಿಶೀಟರ್.. ವಿಲ್ಸನ್​ ಗಾರ್ಡನ್ ನಾಗನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

Share :

Published August 25, 2024 at 6:27pm

    ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡ ರೌಡಿಶೀಟರ್ ನಾಗ ಯಾರು?

    ನಟೋರಿಯಸ್ ರೌಡಿಯ, ನಟೋರಿಯಸ್ 20 ವರ್ಷದ ಕ್ರೈಂ ಡೈರಿ ಹೇಗಿದೆ ಗೊತ್ತಾ?

    2004ರಲ್ಲಿಯೇ ಮೊದಲ ಬಾರಿ ಜೈಲು ಕಂಡವನು ಈಗಲೂ ಜೈಲಿನಲ್ಲಿಯೇ ಇದ್ದಾನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್ ಆಗಿರುವ ನಟ ದರ್ಶನ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್​ ಆಗಿ ಕಾಫಿ ಹೀರುತ್ತಾ, ಧಮ್ ಎಳೀತಾ ರೌಡಿ ಶೀಟರ್ ವಿಲ್ಸನ್ ಗಾರ್ಡನ್​ ನಾಗನ ಜೊತೆ ಇರೋ ಫೋಟೋ ಈಗ ವೈರಲ್ ಆಗಿದೆ. ಇದರಿಂದ ಜೈಲಾಧಿಕಾರಿಗಳ ಮೇಲೆ, ಅವರ ಕಾರ್ಯಕ್ಷಮತೆಯ ಮೇಲೆ ನೂರಾರು ಸಂಶಯಗಳು ಹುಟ್ಟುತ್ತಿವೆ. ಅದರ ಜೊತೆಗೆ, ದರ್ಶನ್ ಜೊತೆಗಿರುವ ಈ ನಟೋರಿಯಸ್ ರೌಡಿ ನಾಗ ಯಾರು ಅನ್ನೋ ಪ್ರಶ್ನೆಯೂ ಕೂಡ ಇದೆ. ಆ ನಟೋರಿಯಸ್​ ರೌಡಿ ನಾಗನ ಕಂಪ್ಲೀಟ್ ಕ್ರೈಂ ಸ್ಟೋರಿ ಇಲ್ಲಿದೆ.

ಇದನ್ನೂ ಓದಿ: ಜೈಲಲ್ಲೇ ಸಿಗರೇಟ್ ಪಾರ್ಟಿ.. ದರ್ಶನ್ ಫೋಟೋ ಲೀಕ್ ಆದ ಮೇಲೆ ಎಚ್ಚೆತ್ತ ಅಧಿಕಾರಿಗಳು; ಮುಂದೇನು?

2004 ರಲ್ಲಿ ಮೊದಲ ಬಾರಿಗೆ ಸಿದ್ಧಾಪುರ ಠಾಣೆಯ ವ್ಯಾಪ್ತಿಯಲ್ಲಿ ರಾಬರಿ ಕೇಸ್​ನಲ್ಲಿ ವಿಲ್ಸನ್​ ಗಾರ್ಡನ್​ ನಾಗನ ಬಂಧನವಾಗಿರುತ್ತದೆ. ಐಪಿಸಿ ಸೆಕ್ಷನ್ 392ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದ್ಯ ಈ ಕೇಸ್ ಖುಲಾಸೆಯಾಗಿದೆ.

2005ರಲ್ಲಿ ಅಡುಗೋಡಿಯ ಎಸ್​ ಆರ್ ನಗರ, ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ 6 ವಾಹನ ಕಳುವು ಮಾಡಿದ ಪ್ರಕರಣದಲ್ಲಿ ಎರಡನೇ ಬಾರಿ ಈ ವಿಲ್ಸನ್ ಗಾರ್ಡನ್ ನಾಗನ ಮೇಲೆ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸ್ ಕೂಡ ಈಗ ಖುಲಾಸೆಯಾಗಿದೆ.

ಇನ್ನು 2009ರಲ್ಲಿ ಕಲಾಸಿಪಾಳ್ಯದಲ್ಲಿ ಗೇಟ್ ಗಣೇಶ್​ ಕೊಲೆ ಕೇಸ್​ನಲ್ಲಿಯೂ ಸಹ ನಾಗ ಸೇರಿ ಆತನ 13ಜನ ಸಹಚರರ ಬಂಧನವಾಗಿತ್ತು. ಈ ಕೇಸ್​ ಕೂಡ ಖುಲಾಸೆಯಾಗಿದೆ.

ಇದನ್ನೂ ಓದಿ: ಯುವ ನಟಿಯರಿಗೆ ಕಿರುಕುಳ.. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದ ಇಬ್ಬರು ರಾಜೀನಾಮೆ

ಇದಾದ ಮೂರೇ ವರ್ಷದಲ್ಲಿ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಕೇಸ್​ವೊಂದರಲ್ಲಿ ನಾಗನನ್ನು ಸೇರಿ ಐದು ಜನ ಸಹಚರರ ಬಂಧನವಾಗಿತ್ತು. ಹಿಂದಿನಂತೆ ಈ ಕೇಸ್ ಕೂಡ ಖುಲಾಸೆಯಾಗಿದೆ.

ಮತ್ತೆ ಇದೇ ವರ್ಷ ಸಿದ್ಧಾಪುರದಲ್ಲಿ ಮುರುಳಿ ಎಂಬಾತನನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ನಾಗ ಸೇರಿ ನಾಲ್ವರ ಬಂಧನವಾಗಿರುತ್ತದೆ. ಈ ಕೇಸ್​ನಿಂದಲೂ ನಾಗ ಖುಲಾಸೆಯಾಗಿದ್ದಾನೆ.

2012ರಲ್ಲಿ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ  ಮಣಿ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 324 ರ ಅಡಿ ಕೇಸ್ ದಾಖಲಾಗಿತ್ತು. ನಾಗ ಹಾಗೂ ಸಹಚರ ಶ್ರೀನಿವಾಸನ ಬಂಧನವೂ ಆಗಿತ್ತು. ಈ ಪ್ರಕರಣವೂ ಈಗ ಖುಲಾಸೆಯಾಗಿದೆ.

ಇದನ್ನೂ ಓದಿ: ಒಂದು​ ಕೈಯಲ್ಲಿ ಸಿಗರೇಟ್, ಮತ್ತೊಂದು ಕಡೆ ಟೀ ಕಪ್‌; ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ? ಶಾಕಿಂಗ್ ಮಾಹಿತಿ ಬಹಿರಂಗ

ಇದೇ ವರ್ಷ ಅಂದ್ರೆ 2012ರಲ್ಲಿ ಕೊರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್ 399, 5402 ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ನಡೆಸಿದ ಕೇಸ್​ನಲ್ಲಿ ನಾಗ ಸೇರಿ ಮೂವರ ಬಂಧನವಾಗಿರುತ್ತದೆ.

2012ರಲ್ಲಿಯೆ ಕಾಟನ್ ಪೇಟೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಗುಪ್ಪನ ಕೊಲೆ ಆರೋಪದಲ್ಲಿ ಐಪಿಸಿ 302 ಅಡಿ ಕೊಲೆ ಕೇಸ್ ದಾಖಲಾಗಿತ್ತು. ನಾಗ ಸೇರಿ 6 ಜನ ಸಹಚರರನ್ನು ಬಂಧನ ಮಾಡಲಾಗಿತ್ತು. 2014ರಲ್ಲಿ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಐಪಿಸಿ 399, 402ರ ಅಡಿ ದರೋಡೆ ಕೇಸ್​ನಲ್ಲಿ ನಾಗ ಸೇರಿ ಐವರ ಸಹಚರರ ಬಂಧನವಾಗಿತ್ತು.

ಇದನ್ನೂ ಓದಿ: ‘ದಾಸ’ ಫುಲ್‌ ಬಿಂದಾಸ್‌? ಜೈಲಿನಲ್ಲಿ ದರ್ಶನ್ ಪಕ್ಕ ಕುಳಿತಿರುವ ನಟೋರಿಯಸ್‌ ರೌಡಿಗಳು ಯಾರು?
2014 ರಲ್ಲಿ ವಿಲ್ಸನ್ ಗಾರ್ಡನ್ ನಲ್ಲಿ ಶ್ರೀನಿವಾಸ್ ಎಂಬುವವರ ಕೊಲೆ ಕೇಸ್. ಐಪಿಸಿ 302 ಅಡಿ ನಾಗ ಸೇರಿ 10 ಮಂದಿ ಸಹಚರರ ವಿರುದ್ದ ಕೇಸ್ ದಾಖಲಾಗಿತ್ತು. ಈ ಮೇಲಿನ ಎಲ್ಲಾ ಕೇಸ್​ಗಳು ಖುಲಾಸೆಯಾಗಿವೆ

ಆದ್ರೆ 2014 ರಲ್ಲಿ ಮಡಿವಾಳದ ನಕರಬಾಬು ಕೊಲೆ ಕೇಸ್. ಐಪಿಸಿ 302 ಅಡಿ ಕೇಸ್. ನಾಗ ಸೇರಿ 21 ಸಹಚರರ ವಿರುದ್ದ ದಾಖಲಾಗಿರುವ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅದೇ ರೀತಿ 2016ರಲ್ಲಿ ವೈಟ್​ಫೀಲ್ಡ್​ನಲ್ಲಿ ಸುಹೇಲ್ ಕೇಸ್​ ಪ್ರಕರಣದಲ್ಲಿ ನಾಗ ಸೇರಿ 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಕೂಡ ಸದ್ಯ ನ್ಯಾಯಾಲಯದಲ್ಲಿದೆ. 2017ರಲ್ಲಿ ಯಲಹಂಕದಲ್ಲಿ ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್​ ಕೇಸ್​ನಲ್ಲಿ ನಾಗ, ಸೈಲೆಂಟ್ ಸುನೀಲ್, ಒಂಟೆ ರೋಹಿತ್ ಸೇರಿ 17 ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು . ಇವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ.

2020ರಲ್ಲಿ ಅನ್ನಪೂರ್ಣೇಶ್ವರಿ ನಗರದ ಜಿಮ್ ಸುಬ್ಬು ಕೊಲೆ ಕೇಸ್​ನಲ್ಲಿ ನಾಗ ಸೇರಿ 7 ಮಂದಿ ಸಹಚರರ ವಿರುದ್ಧ ಕೊಲೆ ಕೇಸ್ ದಾಖಲಾಗಿತ್ತು. 2020ರಲ್ಲಿ ಚನ್ನರಾಯಣಪಟ್ಟಣದ ಹಿರಿಸಾವೆ ಬಳಿ ಶಾಂತಿನಗರ ಲಿಂಗನ ಕೊಲೆ ಕೇಸ್​ನಲ್ಲಿ ನಾಗ ಸೇರಿ 12 ಮಂದಿ ವಿರುದ್ಧ ಕೊಲೆ ಕೇಸ್ ದಾಖಲಾಗಿತ್ತು. ಈ ಕೇಸ್ ಸದ್ಯ ಖುಲಾಸೆಯಾಗಿದೆ.

2021ರಲ್ಲಿ ಕೊರಮಂಗಲ ಠಾಣಾ ವ್ಯಾಪ್ತಿಯಲ್ಲಿ ಎನ್​ಡಿಪಿಎಸ್ ಅಡಿ ಪ್ರಕರಣವೂ ನಾಗನ ವಿರುದ್ಧ ದಾಖಲಾಗಿದೆ.ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. 2013 ಆಗಸ್ಟ್​ನಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ಧಾಪೂರ ರೌಡಿ ಮಹೇಶ್​ ರಿಲೀಸ್ ಆಗಿ ಹೊರ ಬರ್ತಿದ್ದಂತೆ ನಾಗನ ಸಹಚರರಿಂದ ಜೈಲು ಮುಂಭಾಗದಲ್ಲಿ ಹತ್ಯೆ ಮಾಡಲಾಗಿತ್ತು. ಸದ್ಯ ಮಹೇಶನ ಹತ್ಯೆ ಕೇಸ್​ನಲ್ಲಿ ವಿಲ್ಸನ್ ಗಾರ್ಡನ್ ನಾಗ ಅರೆಸ್ಟ್ ಆಗಿ ಜೈಲುವಾಸ ಅನುಭವಿಸುತ್ತಿದ್ದಾನೆ. ವಿಲ್ಸನ್ ಗಾರ್ಡನ್ ನ ಹೆಸರಿನಲ್ಲಿರೋ 23 ಪ್ರಕರಣಗಳ ಪೈಕಿ 8 ಕೊಲೆ ಕೇಸ್ ನಲ್ಲಿ A1 ಆರೋಪಿಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಗರೇಟ್ ಪಾರ್ಟಿಯಲ್ಲಿ ದರ್ಶನ್ ಜೊತೆ ಕುಳಿತ ರೌಡಿಶೀಟರ್.. ವಿಲ್ಸನ್​ ಗಾರ್ಡನ್ ನಾಗನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

https://newsfirstlive.com/wp-content/uploads/2024/08/DARSHAN_JAIL.jpg

Load More