ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಫೋಟೋ
ದರ್ಶನ್ ಪಕ್ಕದಲ್ಲಿರೋದು ನಟೋರಿಯಸ್ ಕ್ರಿಮಿನಲ್ ರೌಡಿ & ಗ್ಯಾಂಗ್!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ದರ್ಶನ್ ಪಕ್ಕದಲ್ಲಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ಕಳೆದ 2 ತಿಂಗಳಿಂದ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ಡಿ ಗ್ಯಾಂಗ್ ಜೈಲಿನಲ್ಲಿರುವ ಫೋಟೋ ಬಿಡುಗಡೆಯಾಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಆರಾಮಾಗಿ ಇದ್ದಾರಾ? ಫೋಟೋ ಫುಲ್ ವೈರಲ್; ಏನಿದರ ಅಸಲಿಯತ್ತು?
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಫೋಟೋ ಇದೀಗ ಫುಲ್ ವೈರಲ್ ಆಗಿದೆ. ದರ್ಶನ್ ಹೇಗಿದ್ದಾರೆ ಅನ್ನೋ ದರ್ಶನ ಅವರ ಅಭಿಮಾನಿಗಳಿಗೆ ಆಗಿದ್ರೆ, ದರ್ಶನ್ ಕುಳಿತುಕೊಂಡಿರುವ ರೀತಿ, ಕೈಯಲ್ಲಿರುವ ಸಿಗರೇಟ್ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ಗೆ ಬಿಗ್ ಟ್ವಿಸ್ಟ್; ನಟ ದರ್ಶನ್ಗೆ ಶಿಕ್ಷೆ ಗ್ಯಾರಂಟಿ; ಸ್ಫೋಟಕ ವರದಿ
ಜೈಲಿನಿಂದ ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ಅವರು ನಟೋರಿಯಸ್ ರೌಡಿಗಳ ಜೊತೆ ಕುಳಿತುಕೊಂಡಿದ್ದಾರೆ. ದರ್ಶನ್ ಪಕ್ಕದಲ್ಲಿರೋದು ನಟೋರಿಯಸ್ ಕ್ರಿಮಿನಲ್ ವಿಲ್ಸನ್ ಗಾರ್ಡನ್ ನಾಗ. ವಿಲ್ಸನ್ ಗಾರ್ಡನ್ ನಾಗ ಬೆಂಗಳೂರು ದಕ್ಷಿಣ ವಿಭಾಗದ ರೌಡಿ ಶೀಟರ್.
ವಿಲ್ಸನ್ ಗಾರ್ಡನ್ ನಾಗ ಒಂದು ತಿಂಗಳ ಹಿಂದಷ್ಟೇ ಸಿದ್ದಾಪುರ ಮಹೇಶ್ ಕೊಲೆ ಕೇಸ್‌ನಲ್ಲಿ ಕೋರ್ಟ್‌ಗೆ ಶರಣಾಗಿದ್ದ. ನಂತರ ಪೊಲೀಸರು ವಿಲ್ಸನ್ ಗಾರ್ಡನ್ ನಾಗನ ಮೇಲೆ ಕೋಕಾ ಕಾಯ್ದೆ ಹಾಕಿ ಜೈಲಿಗೆ ಕಳುಹಿಸಿದ್ದರು. ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತಿರುವ ನಟ ದರ್ಶನ್ ಅವರು ಒಂದು ಕೈಯಲ್ಲಿ ಟೀ, ಒಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಕೇಸ್ಗೆ ಮತ್ತೊಂದು ಟ್ವಿಸ್ಟ್; ತನಿಖಾಧಿಕಾರಿಗಳ ಕೈಸೇರಿದ CSFL ರಿಪೋರ್ಟ್..!
ದರ್ಶನ್ ಪಕ್ಕದಲ್ಲಿ ಕೂತಿರೋ ಇನ್ನೊಬ್ಬ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಾಗರಾಜ್. ಈ ನಾಗರಾಜ್ ಅವರು ದರ್ಶನ್ ಆಪ್ತ, ಮ್ಯಾನೇಜರ್ ರೀತಿ ಇದ್ದವನು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಾಗರಾಜ್ A11 ಆಗಿದ್ದಾರೆ. ನಾಗರಾಜು ಅಲಿಯಾಸ್ ನಾಗ ದರ್ಶನ್ ಅವರ ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರ್ತಿದ್ದ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಜೊತೆಗೆ ಇದ್ದು, ಕೊಲೆ ಕೇಸ್ ನಲ್ಲಿ ಈತನದ್ದು ಪ್ರಮುಖ ಪಾತ್ರ ಇರುವ ಆರೋಪವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ