Advertisment

ಮಹಾಲಕ್ಷ್ಮಿ ಕೊ*ಲೆಗಾರ ಶವವಾಗಿ ಪತ್ತೆ.. ಪೀಸ್, ಪೀಸ್‌ ಮಾಡಿದ ‘ಮುಕ್ತಿ’ ಮಾಡಿದ್ದೇನು? ಪಾಪಿ ಅಂತ್ಯ ಹೇಗಾಯ್ತು?

author-image
admin
Updated On
ಮಹಾಲಕ್ಷ್ಮಿಯನ್ನ ಪೀಸ್, ಪೀಸ್ ಮಾಡಿದ್ಯಾಕೆ? ಸೈಕೋ ಕಿಲ್ಲರ್ ಎಲ್ಲಿ ಅಡಗಿದ್ದ? ಇಂಚಿಂಚು ಮಾಹಿತಿ ಬಹಿರಂಗ!
Advertisment
  • ತಾನು ಮಾಡಬಾರದ ತಪ್ಪು ಮಾಡಿದ್ದೇನೆ ಎಂದು ಹೇಳಿದ್ದ ಆರೋಪಿ
  • ಫ್ರಿಡ್ಜ್‌ ಆನ್ ಮಾಡಿ ತಪ್ಪಿಸಿಕೊಳ್ಳಲು ಭಯಾನಕ ಪ್ಲಾನ್ ಮಾಡಿದ್ದ
  • ಮಹಾಲಕ್ಷ್ಮಿಯನ್ನು ಸಾಯಿಸಿದ ಮುಕ್ತಿ ಬೆನ್ನು ಹತ್ತಿದ ಪೊಲೀಸರು

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಬರ್ಬರ ಹ*ತ್ಯೆ ಕೇಸ್‌ಗೆ ಭಯಾನಕವಾದ ಟ್ವಿಸ್ಟ್ ಸಿಕ್ಕಿದೆ. ಮಹಾಲಕ್ಷ್ಮಿಯನ್ನು ಪೀಸ್‌, ಪೀಸ್ ಮಾಡಿದ ಮಹಾ ಪಾಪಿ ಸಾವು ಅಷ್ಟೇ ಕ್ರೂರವಾಗಿದೆ. ಮಹಾಲಕ್ಷ್ಮಿಯ ಕೊ*ಲೆಯ ಬಳಿಕ ತಲೆಮರೆಸಿಕೊಂಡ ನರರಾಕ್ಷಸ ಮಾಡಿದ ತಪ್ಪಿಗೆ ತಾನೇ ನರಕದ ಬಾಗಿಲು ತಟ್ಟಿದ್ದಾನೆ.

Advertisment

ಇದನ್ನೂ ಓದಿ: BREAKING: ಮಹಾಲಕ್ಷ್ಮಿ ಪೀಸ್, ಪೀಸ್‌ ಮಾಡಿದ ಮಹಾ ಪಾಪಿ ಸಾವು; ಅಸಲಿಗೆ ಆಗಿದ್ದೇನು? 

ಮಹಾಲಕ್ಷ್ಮಿ ಪ್ರಕರಣದ ಕೊಲೆ ಆರೋಪಿ ಸಾವಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿ ಕೊ*ಲೆ ಬೆಳಕಿಗೆ ಬಂದ ಮೇಲೆ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದರು. ನರಹಂತಕ ಯಾವುದೇ ಮೂಲೆಯಲ್ಲಿದ್ರೂ ಬಂಧಿಸಲು ಹೊರಟಿದ್ದರು. ಪೊಲೀಸರ ರಣಬೇಟೆಯ ಸುಳಿವು ಸಿಗೋಕು ಮುಂಚೆಯೇ ಮುಕ್ತಿ ರಂಜನ್ ರಾಯ್ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

publive-image

ವೈಯಾಲಿಕಾವಲ್ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಮುಕ್ತಿ ರಂಜನ್ ರಾಯ್ ಫ್ರಿಡ್ಜ್‌ ಆನ್ ಮಾಡಿ ತಪ್ಪಿಸಿಕೊಳ್ಳಲು ಸಮಯ ಸಾಧಿಸಿದ್ದಾನೆ. ಮರ್ಡ*ರ್ ಮಾಡುತ್ತಿದ್ದಂತೆ ಭಯಗೊಂಡ ಆರೋಪಿ ತನ್ನ ತಮ್ಮನಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ತಾನು ಮಾಡಬಾರದ ತಪ್ಪು ಮಾಡಿದ್ದೇನೆ. ಸ್ವಲ್ಪ ದಿನಗಳ ಕಾಲ ಬೆಂಗಳೂರು ಬಿಟ್ಟು ಹೋಗುತ್ತೇನೆ ಎಂದು ತಿಳಿಸಿದ್ದಾನೆ.

Advertisment

publive-image

ಬೆಂಗಳೂರನ್ನು ಬಿಟ್ಟು ತಲೆಮರೆಸಿಕೊಂಡ ಆರೋಪಿ ಕರ್ನಾಟಕದ ಗಡಿ ದಾಟುತ್ತಿದ್ದಂತೆ ಮೊಬೈಲ್ ಫೋನ್ ಸ್ವಿಚ್‌ ಆಫ್ ಮಾಡಿಕೊಂಡಿದ್ದಾನೆ. ಇಷ್ಟಾದ್ರೂ ಇವನ ಜಾಡು ಹಿಡಿದ ಬೆಂಗಳೂರು ಪೊಲೀಸರು ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧೆಡೆ ಒಂದೊಂದು ತಂಡಗಳಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಕೊ*ಂದ ಮುಕ್ತಿ ರಂಜನ್ ಒಡಿಶಾದಲ್ಲಿ ನೇ*ಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ ಆರೋಪಿಯ ಈಗಾಗಲೇ ಸಾವನ್ನಪ್ಪಿದ್ದಾನೆ ಅನ್ನೋ ಮಾಹಿತಿಯನ್ನು ಬೆಂಗಳೂರು ಪೊಲೀಸರು ಕಲೆ ಹಾಕಿದ್ದಾರೆ.

ಮಹಾಲಕ್ಷ್ಮಿ ಸಾವಿನ ಪ್ರಕರಣದಲ್ಲಿ ಮೊದಲ ಗೆಳೆಯ ಅಶ್ರಫ್ ಮೇಲೆ ಎಲ್ಲರಿಗೂ ಅನುಮಾನ ಬಂದಿತ್ತು. ಆದರೆ ಅಶ್ರಫ್ ಕಳೆದ 6 ತಿಂಗಳಿಂದ ಸಂಪರ್ಕದಲ್ಲಿ ಇಲ್ಲ ಅನ್ನೋದು ಖಚಿತವಾಗಿತ್ತು. ಇದಾದ ಮೇಲೆ ಮಹಾಲಕ್ಷ್ಮಿ ಜೊತೆ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ತಲೆಮರೆಸಿಕೊಂಡಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಈ ಸುಳಿವುಗಳ ಆಧಾರದಲ್ಲಿ ಬೆನ್ನು ಹತ್ತಿದ ಪೊಲೀಸರಿಗೆ ಮುಕ್ತಿ ಯಮಲೋಕಕ್ಕೆ ಪಯಣ ಬೆಳೆಸಿರುವುದು ಖಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment