newsfirstkannada.com

×

ಮಹಾರಾಣಿ ಕಾಲೇಜ್​ ಕ್ಯಾಂಪಸ್​ನಲ್ಲಿ ಭೀಕರ ಆಕ್ಸಿಡೆಂಟ್​.. ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

Share :

Published October 7, 2023 at 10:53am

Update October 7, 2023 at 12:25pm

    ವಿದ್ಯಾರ್ಥಿಗಳಿಗೆ ಗುದ್ದಿದ ಕಾರು ಯಾರದು, ಕ್ಯಾಂಪಸ್​ನಲ್ಲಿ ಓಡಿಸಬಹುದೇ?

    ವಿಶ್ವವಿದ್ಯಾಲಯದ ಕ್ಯಾಂಪಸ್​​ನಲ್ಲಿ ಬೆಳ್ಳಂಬೆಳಗ್ಗೆ ಕಾರು ಆಕ್ಸಿಡೆಂಟ್​

    ಕ್ಯಾಂಪಸ್​ನಲ್ಲಿ ನೋಡು, ನೋಡುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಗುದ್ದಿದ ಕಾರು

ಬೆಂಗಳೂರು: ಬೆಳ್ಳಂಬೆಳಗ್ಗೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕ್ಯಾಂಪಸ್​ ಒಳಗೆ ಕಾರೊಂದು ವೇಗವಾಗಿ ಬಂದು ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯರಿಗೆ ಭೀಕರವಾಗಿ ಗುದ್ದಿದೆ. ಪರಿಣಾಮ ಶಿಕ್ಷಕಿ, ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣದ ಒಳಗಡೆ ಬೆಳ್ಳಂಬೆಳಗ್ಗೆ ಭೀಕರ ಆಕ್ಸಿಡೆಂಟ್ ನಡೆದಿದೆ. ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿಯರು ಇದ್ದ ವೇಳೆ ಅತಿ ವೇಗವಾಗಿ ಬಂದು ಕಾರು ಇಬ್ಬರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಶಿಕ್ಷಕಿಗೂ ಗುದ್ದಿ ಬಳಿಕ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿಕ್ಷಕಿ ಕೂಡ ಗಾಯಗೊಂಡಿದ್ದಾರೆ. ಸದ್ಯ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುದ್ದಿದ್ದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಇನ್ನು ಮೂಲಗಳ ಪ್ರಕಾರ ಕಾರು ವಿವಿಯ ಪ್ರೊಫೆಸರ್ ಒಬ್ಬರದು ಎಂದು ಮಾಹಿತಿ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಣಿ ಕಾಲೇಜ್​ ಕ್ಯಾಂಪಸ್​ನಲ್ಲಿ ಭೀಕರ ಆಕ್ಸಿಡೆಂಟ್​.. ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

https://newsfirstlive.com/wp-content/uploads/2023/10/MAHARANI_COLLAGE.jpg

Load More