newsfirstkannada.com

ಪೋಷಕರೇ ನಿಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರಾ? ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ

Share :

Published May 2, 2024 at 6:02am

Update May 2, 2024 at 6:03am

    ಹಣ ವಸೂಲಿ ದಂಧೆಗಿಳಿದ ಆಕ್ಸ್​​ಫರ್ಡ್​​​ ಖಾಸಗಿ​​ ಸ್ಕೂಲ್​

    ಆಕ್ಸ್​​ಫರ್ಡ್ ಸಿನಿಯರ್ ಸೆಕೆಂಡರಿ ಶಾಲೆ ವಿರುದ್ಧ ಆರೋಪ

    ಆಕ್ಸ್​​ಫರ್ಡ್ ಶಾಲೆ ವಿರುದ್ಧ ಕಾನೂನು ಸಮರಕ್ಕಿಳಿದ ಪಾಲಕರು

ಖಾಸಗಿ ಶಾಲೆಗಳ ಧನದಾಹಕ್ಕೆ ಕೊನೆಯೇ ಇಲ್ಲದಂತಾಗಿದೆ. ಶುಲ್ಕದ ಹೆಸರಿನಲ್ಲಿ ಲಂಗು-ಲಗಾಮಿಲ್ಲದೆ ಪೋಷಕರಿಂದ ಸುಲಿಗೆ ನಡೀತಿದೆ. ಇಷ್ಟು ದಿನ ಪ್ರೈವೇಟ್​​ ಸ್ಕೂಲ್ಸ್​​​​ ದುಪ್ಪಟ್ಟು ಶುಲ್ಕ, ಫೀಸ್​​ ಟಾರ್ಚರ್ ಅಂತೆಲ್ಲಾ ಸುದ್ದಿಯಾಗ್ತಿದ್ದವು. ಆದ್ರೀಗ ಪ್ರತಿಷ್ಠಿತ ಶಾಲೆ ಒಂದರ ವಿರುದ್ಧ ಹೊಸ ಆರೋಪವೊಂದು ಕೇಳಿ ಬಂದಿದೆ.

ಇದೆಂಥ ಸುಲಿಗೆ..!

ಆಕ್ಸ್​​ಫರ್ಡ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ 4ನೇ ತರಗತಿ ಓದ್ತಿದ್ದ ವಿದ್ಯಾರ್ಥಿನಿ. ಶಾಲೆಯಲ್ಲಿ ಸರಿಯಾಗಿ ಪಾಠ ಮಾಡ್ತಿಲ್ಲ ಅಂತ ಪೋಷಕರಿಗೆ ದೂರು ನೀಡಿದ್ದಳು. 4ನೇ ತರಗತಿ ರಿಸಲ್ಟ್ ಬಂದ್ರೂ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ ಅನ್ನೋ ಕಾರಣಕ್ಕೆ ಶಾಲೆ ಬದಲಾವಣೆಗೆ ಪೋಷಕರು ಮುಂದಾಗಿದ್ರು. ಮಗಳ ಟಿಸಿ ಕೇಳೋದಕ್ಕೆ ಪಾಲಕರು ಶಾಲೆಗೆ ಬಂದಾಗ ಶಾಲೆ ಆಡಳಿತ ಮಂಡಳಿ ಡಿಮ್ಯಾಂಡ್​ ಇಟ್ಟಿದ್ರಂತೆ. ಟಿಸಿ ಕೊಡಬೇಕು ಅಂದ್ರೆ ಮುಂದಿನ ವರ್ಷದ ಶುಲ್ಕ ಪಾವತಿಸಿ ಅಂತ ಬೇಡಿಕೆ ಇಟ್ಟಿದಿಯಂತೆ. ಪ್ರಶ್ನೆ ಮಾಡಿದ್ರೆ, ಮಾರ್ಚ್ 31ರೊಳಗೆ ಟಿಸಿಗೆ ಅರ್ಜಿ ಸಲ್ಲಿಸಿದ್ರೆ ಶುಲ್ಕವಿಲ್ಲ ಅಂತ ರೂಲ್ಸ್ ಇದೆ ಅಂತ ಶಾಲಾ ಆಡಳಿತ ಮಂಡಳಿ ವಾದ ಮಾಡಿದೆ ಅನ್ನೋದು ಪೋಷಕರ ಮಾತು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

ಕೊನೆಗೆ ₹22 ಸಾವಿರದ 500 ರೂಪಾಯಿ ಶುಲ್ಕ ಪಾವತಿ ಮಾಡಿದ ಮೇಲೆಯೇ ಶಾಲೆಯ ಪ್ರಾಂಶುಪಾಲರು ಟಿಸಿ ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಶಾಲಾ ಪ್ರಾಂಶುಪಾಲರನ್ನ ಪ್ರಶ್ನೆ ಮಾಡಿದ್ರೆ ಪೋಷಕರ ಆರೋಪವನ್ನು ಸಲೀಸಾಗಿ ತಳ್ಳಿ ಹಾಕಿದ್ದಾರೆ. ನಾವು ಯಾವುದೇ ದುಡ್ಡು ಡಿಮ್ಯಾಂಡ್ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿನಿ ತಂದೆ ಭುಜಂಗ ರಾವ್, ತಾಯಿ ಡಾ. ಪ್ರೀತಿ ಇಬ್ಬರು ಪ್ರಾಧ್ಯಾಪಕರು. ಆದರೆ ಈ ಶಾಲೆಯ ನಡೆಗೆ ಆಕ್ರೋಶ ಹೊರಹಾಕ್ತಿದ್ದಾರೆ. ಆ ಶಾಲೆಯಲ್ಲಿ ಓದಿಲ್ಲ ಅಂದ್ರೂ ಯಾಕೆ ಅಷ್ಟು ಹಣ ಪಾವತಿಸಬೇಕು ಅಂತ ಸುಲಿಗೆಗಿಳಿದಿರೋ ಶಾಲೆ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಸರ್ಕಾರ ಇತ್ತ ಗಮನ ಹರಿಸಿ ಈ ರೀತಿಯ ಸುಲಿಗೆ ಬ್ರೇಕ್ ಹಾಕಬೇಕು ಎನ್ನುವುದೇ ಪೋಷಕರ ಆಗ್ರಹ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ನಿಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರಾ? ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2024/05/school2.jpg

Load More