newsfirstkannada.com

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೂ ಮಂಗಳೂರಿನಲ್ಲಿನ ಟ್ರಯಲ್ ಬಾಂಬ್ ಕೇಸ್​ಗೂ ಲಿಂಕ್ ಇದೆಯಾ?

Share :

Published March 2, 2024 at 10:59am

    ಟ್ರಯಲ್ ಬಾಂಬ್​ನಂತೆ ಕೆಲವು ಕುರುಹುಗಳು ಸದ್ಯಕ್ಕೆ ಪತ್ತೆಯಾಗಿವೆ

    ಮಂಗಳೂರಿನಲ್ಲಿ ಟ್ರಯಲ್ ಬಾಂಬ್ ಸ್ಫೋಟದಂತೆ ಇದೆಯಾ?

    ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲು ಪ್ರಮುಖ ಉದ್ದೇಶವೇನು?

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೂ ಮಂಗಳೂರಿನಲ್ಲಿನ ಟ್ರಯಲ್ ಬಾಂಬ್ ಸ್ಫೋಟಕ್ಕೂ ಯಾವುದಾದರೂ ಲಿಂಕ್ ಇದೆಯಾ ಅಂತಾ ತನಿಖಾ ತಂಡಕ್ಕೆ ಸಂಶಯ ಶುರುವಾಗಿದೆ.

ಮಂಗಳೂರಿನಲ್ಲಿ ಟ್ರಯಲ್ ಬಾಂಬ್ ತನಿಖೆ ಮಾಡಿದ್ದ ಅಧಿಕಾರಿಗಳು ಇಲ್ಲಿಯೂ ಪರಿಶೀಲನೆ ಮಾಡುತ್ತಿದೆ. ರಾಮೇಶ್ವರಂ ಕೆಫೆ ಸ್ಫೋಟಗೊಂಡ ವಸ್ತುಗಳ ಡಿಸೈನ್, ಅದರಲ್ಲಿರೋ ಡಿವೈಸ್​ಗಳು, ಸ್ಫೋಟಗೊಂಡ ಮೇಲೆ ಬಂದಂತಹ ಹೊಗೆ ಎಲ್ಲಾ ಮಂಗಳೂರಿನಲ್ಲಿನ ಟ್ರಯಲ್ ಬಾಂಬ್ ಸ್ಫೋಟದಂತೆ ಕೆಲ ಅಂಶಗಳು ಕಾಣುತ್ತಿವೆ. ಹೀಗಾಗಿ ಅಧಿಕಾರಿಗಳು ಎಲ್ಲ ಆಯಾಮಗಳಿಂದ ತನಿಖೆ ಮಾಡುತ್ತಿದ್ದು ಇದರಲ್ಲಿ ಬ್ಲಾಸ್ಟ್ ಮಾಡಲು ಉದ್ದೇಶವೇನು ಎಂದು ಕಂಡುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನು ಓದಿ: Breaking News: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಸೇರಿ ಒಟ್ಟು ನಾಲ್ವರು ವಶಕ್ಕೆ

ಬಾಂಬ್ ತಯಾರಿಸುವ ರೀತಿ, ಸ್ಟೈಲ್​ ಎಲ್ಲ ಮಂಗಳೂರಲ್ಲಿ ನಡೆದಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್ ಮಾದರಿಯಂತೆ ಪ್ರಾಥಮಿಕ ಕುರುಹುಗಳು ಪತ್ತೆಯಾಗಿವೆ. ಇದರಿಂದ ಕೇಸ್​ನಲ್ಲಿ ಮತ್ತಷ್ಟು ಅನುಮಾನಗಳು ಹೆಚ್ಚಾಗಿವೆ. ವಿಧ್ವಂಸಕ ಕೃತ್ಯ ಎಸೆಗಲು ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರಾ ಎಂದು ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಬ್ಲಾಸ್ಟ್​ನ ಹಿಂದೆ ಶಂಕಿತ ಉಗ್ರರ ಕೈವಾಡ ಇದೆಯೇ ಎನ್ನುವ ಶಂಕೆ ಸದ್ಯಕ್ಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೂ ಮಂಗಳೂರಿನಲ್ಲಿನ ಟ್ರಯಲ್ ಬಾಂಬ್ ಕೇಸ್​ಗೂ ಲಿಂಕ್ ಇದೆಯಾ?

https://newsfirstlive.com/wp-content/uploads/2024/03/cctv-5.jpg

Load More