newsfirstkannada.com

ದರ್ಶನ್​ಗೆ ವಿಡಿಯೋ ಕಾಲ್.. ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿ ಸತ್ಯ; ಬಾಯ್ಬಿಟ್ಟಿದ್ದೇನು?

Share :

Published August 26, 2024 at 5:20pm

    ದರ್ಶನ್ ಜೊತೆಗಿನ ವಿಡಿಯೋ ಕಾಲ್ ವೈರಲ್ ಕೇಸ್‌ನಲ್ಲಿ ಸತ್ಯನ ಹೆಸರು

    ಮಾಜಿ ರೌಡಿ ಶೀಟರ್​ಗಾಗಿ ತೀವ್ರ ಹುಡುಕಾಟ ಶುರು ಮಾಡಿದ್ದ ಪೊಲೀಸರು

    ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತಾನೇ ಖುದ್ದು ಹಾಜರಾದ ರೌಡಿ ಸತ್ಯ!

ಬೆಂಗಳೂರು: ಸ್ಯಾಂಡಲ್​ವುಡ್ ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್​ ದೊಡ್ಡ ಚರ್ಚೆಯಲ್ಲಿದ್ದಾರೆ. ಅವರಿಗೆ ಕೇಂದ್ರ ಕಾರಾಗೃಹದಲ್ಲಿ ಸಿಗುತ್ತಿರುವ ಐಷಾರಾಮಿ ವ್ಯವಸ್ಥೆಗಳು ಜೈಲು ಅಧಿಕಾರಿಗಳ ಕಾರ್ಯ ಕ್ಷಮತೆ ಮತ್ತು ದಕ್ಷತೆಯ ಬಗ್ಗೆ ಕೈಗನ್ನಡಿ ಹಿಡಿದಂತಾಗಿತ್ತು. ಅದರ ಬೆನ್ನಲ್ಲೆ ದರ್ಶನ್​ಗೆ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ಮಾಡಿದ ಸುದ್ದಿಯೂ ಜೋರಾಗಿ ಹರಡಿತ್ತು. ವಿಡಿಯೋ ಕಾಲ್ ಮಾಡಿದವನು ರೌಡಿ ಶೀಟರ್ ಸತ್ಯ ಅನ್ನೋದು ಗೊತ್ತಾಗುತ್ತಿದ್ದಂತೆ ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದರು. ಈಗ ಆ ಕೇಸ್​ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ಸೆಂಟ್ರಲ್‌ ಜೈಲಿಗೆ ಪರಪ್ಪನ ಅಗ್ರಹಾರ ಅನ್ನೋ ಹೆಸರು ಹೇಗೆ ಬಂತು? ಯಾರು ಈ ಪರಪ್ಪ? ಏನಿದರ ಇತಿಹಾಸ?

ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಸತ್ಯ ಹಾಜರು

ಯಾವಾಗ ದರ್ಶನ್​ಗೆ ವಿಡಿಯೋ ಕಾಲ್ ಮಾಡಿದ ವಿಡಿಯೋವೊಂದು ಭಾರೀ ಸಂಚಲನ ಸೃಷ್ಟಿಸಿತೋ ಕೂಡಲೇ ಪೊಲೀಸರು ಅಲರ್ಟ್ ಆದ್ರು. ವಿಡಿಯೋ ಕಾಲ್, ದರ್ಶನ್​ಗೆ ಸಿಗುತ್ತಿರುವ ಸಿಗರೇಟ್, ಕಾಫಿ, ಟೀಪಾಯಿಯಂತ ಸೌಲಭ್ಯಗಳೆಲ್ಲವೂ ರಾಜ್ಯ ಸರ್ಕಾರದ ಗೃಹ ಇಲಾಖೆ ಸೇರಿದಂತೆ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಿದ್ದವು. ಹೀಗಾಗಿ ವಿಡಿಯೋ ವೈರಲ್ ಆದ ಕೂಡಲೇ ಅಲರ್ಟ್ ಆಗಿದ್ದ ಪೊಲೀಸರು ವಿಡಿಯೋ ಕಾಲ್ ಮಾಡಿದ್ದ ಸತ್ಯನ ಜಾಡು ಹಿಡಿದು ಹೊರಟಿದ್ದರು. ಈಗ ಮಾಜಿ ರೌಡಿ ಶೀಟರ್ ಸತ್ಯ ಬ್ಯಾಡರಳ್ಳಿ ಪೊಲೀಸ್ ಠಾಣೆಗೆ ಖುದ್ದು ತಾನೇ ಹಾಜರಾಗಿದ್ದಾನೆ. ಇಂದು ಸಂಜೆ ಸುಮಾರು 4 ಗಂಟೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದಾನೆ. ವಿಡಿಯೋ ಕಾಲ್ ಮಾಡಿದ್ದು ಯಾರಿಗೆ? ದರ್ಶನ್ ಬಳಿ ಮಾತನಾಡಿದ್ದು ಏನು ಅನ್ನೋದನ್ನ ಒಪ್ಪಿಕೊಂಡಿದ್ದಾನೆ.

ವಿಡಿಯೋ ಕಾಲ್ ಮಾಡಿದ್ಯಾರು? 
ದರ್ಶನ್ ವಿಡಿಯೋ ಕಾಲ್‌ನಲ್ಲಿ ಇರೋದು ಇದೇ ಸತ್ಯ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್‌ ಜನಾರ್ದನ್ ಅವರ ಮಗನೇ ಸತ್ಯ. ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್‌ಗೆ ತೋರಿಸಿರೋದು ಕೂಡ ಒಬ್ಬ ರೌಡಿಶೀಟರ್. ಅವನ ಹೆಸರು ಧರ್ಮ. ಧರ್ಮ, ಕಳೆದ ಮೇ 07ರಂದು ಬಾಣಸವಾಡಿಯ ಕಾರ್ತಿಕೇಯನ್ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾನೆ.

ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಉಲ್ಟಾ ಮಚ್ಚಲ್ಲಿ ಕೆಎಲ್‌ಇ‌ ಕಾಲೇಜಿನ ವಿದ್ಯಾರ್ಥಿಗಳಿಗೆ ಸತ್ಯ ಹೊಡೆದಿದ್ದ ಸತ್ಯ. ಜೈಲಿಗೆ ಹೋಗಿ ಸದ್ಯ ಬೇಲ್ ಮೇಲೆ ಸತ್ಯ ಹೊರಗೆ ಬಂದಿದ್ದಾನೆ.

ಜೈಲಿನ ಹೊರಬಂದಿರುವ ಸತ್ಯ ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆಗ ಮಾರ್ಕೆಟ್ ಧರ್ಮ, ದರ್ಶನ್ ನಮ್ಮ ಸೆಲ್ ಪಕ್ಕದಲ್ಲೇ ಇರೋದು ಎಂದಿದ್ದಾನೆ. ಕೂಡಲೇ ಇರು ತೋರಿಸ್ತಿನಿ ಎಂದು ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ವಿಡಿಯೋ ಕಾಲ್.. ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿ ಸತ್ಯ; ಬಾಯ್ಬಿಟ್ಟಿದ್ದೇನು?

https://newsfirstlive.com/wp-content/uploads/2024/08/Darshan-Video-Call-7.jpg

Load More