newsfirstkannada.com

ಬೆಂಗಳೂರು ಗ್ರಾಮಾಂತರ: ಅನುಮಾನ ಮೂಡಿಸಿದ ಮತದಾನ ಪ್ರಕ್ರಿಯೆ; ಮತಯಂತ್ರವನ್ನ ಕಾರಲ್ಲಿ ತೆಗದುಕೊಂಡು ಹೋಗಿದ್ದೇಕೆ?

Share :

Published April 27, 2024 at 6:27am

Update April 27, 2024 at 6:31am

    ಹೈವೋಲ್ಟೇಜ್​ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರ

    ಡಿಕೆ ಸುರೇಶ್​ ಮತ್ತು ಡಾ.ಸಿ.ಎನ್​.ಮಂಜುನಾಥ್​ ಸ್ಪರ್ಧೆಯ ಕ್ಷೇತ್ರ

    ಮತದಾರರಲ್ಲಿ ಅನುಮಾನ ಮೂಡಿಸಿದ ಚುನಾವಣಾ ಸಿಬ್ಬಂದಿ ನಡೆ

ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರ ಪ್ರಭು ತೀರ್ಪು ಬರೆದಾಗಿದೆ. ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್​ ಮತ್ತು ಡಾ.ಸಿ.ಎನ್​.ಮಂಜುನಾಥ್​ ಸ್ಪರ್ಧೆಯಿಂದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್​ ಕಣವಾಗಿತ್ತು. ಕ್ಷೇತ್ರದೆಲ್ಲೆಡೆ ಬಹುತೇಕ ಶಾಂತಿಯುತವಾಗಿ ನಡೆಸಿದೆ. ಆದ್ರೆ, ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ಮಾತ್ರ, ಚುನಾವಣಾ ಅಧಿಕಾರಿಗಳ ನಡೆ, ಗ್ರಾಮಸ್ಥರಲ್ಲಿ ಅನುಮಾನವನ್ನು ಮೂಡಿಸಿದೆ.

ಕೆಲಕಾಲ ಮತಯಂತ್ರವನ್ನ ಕಾರಲ್ಲಿ ತೆಗದುಕೊಂಡು ಹೋಗಿದ್ದೇಕೆ?

ರಾಂಪುರ ಗ್ರಾಮದ ಮತಗಟ್ಟೆ ಸಂಖ್ಯೆ 45 ಮತ್ತು 46 ರಲ್ಲಿ ಮತದಾನ ನಡೆದಿದ್ದು, 46ನೇ ಮತಗಟ್ಟೆಯಲ್ಲಿ 6 ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು. ಮತ್ತೊಂದು ಮತಗಟ್ಟೆಯಲ್ಲಿ ಮತದಾನ ಇನ್ನೂ ನಡೆಯುತಿತ್ತು. ಗ್ರಾಮದ ಮತಗಟ್ಟೆಯ ಬಳಿ ಬಸ್ಸು ಹೋಗುವುದಕ್ಕೆ ಜಾಗ ಇರಲಿಲ್ಲ. ಹೀಗಾಗಿ ಗ್ರಾಮದ ಮುಂಭಾಗ ಬಸ್‌ಗೆ ಮತಯಂತ್ರವನ್ನು ಜೀಪಿನ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ, ಮತದಾನ ಮುಗಿದ ಬಳಿಕ ಕೆಲಕಾಲ ಮತಯಂತ್ರವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿದ್ರಿಂದ ಆತಂಕ ಸೃಷ್ಟಿಯಾಗಿತ್ತು.

ಮತಗಟ್ಟೆ ಸಂಖ್ಯೆ 46 ರ ಸಿಬ್ಬಂದಿಗಳು ಪೊಲೀಸರನ್ನು ಕರೆದುಕೊಳ್ಳದೆ ಏಕಾಏಕಿ ಮತಯಂತ್ರವನ್ನು ತೆಗೆದುಕೊಂಡು ಅಲ್ಲಿಂದ ಜೀಪಿನಲ್ಲಿ ಹೊರಟಿದ್ದಾರೆ. ಮತಯಂತ್ರವನ್ನು ಬಸ್ಸಿಗೆ ತಲುಪಿಸದೆ ಜೀಪಿನಲ್ಲಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದಾಗ ಸ್ಥಳೀಯ ಸಿಬ್ಬಂದಿ ಅವರಿಗೆ ಕರೆಮಾಡಿದ್ದಾರೆ. ಆದ್ರೆ ದೂರವಾಣಿ ಕರೆಯನ್ನು ಸ್ವೀಕರಿಸದೇ ಹೋಗಿದ್ದರಿಂದ ಗ್ರಾಮಸ್ಥರು ಮತ್ತಷ್ಟು ಅನುಮಾನಗೊಂಡಿದ್ದಾರೆ. ಕೊನೆಗೆ ತಡವಾಗಿ ಗ್ರಾಮದ ಬಸ್‌ ಬಳಿಗೆ ಸಿಬ್ಬಂದಿ ಬಂದಿದ್ದಾರೆ.

ಮತಯಂತ್ರದ ಬಸ್​ ಅಡ್ಡಗಟ್ಟಿ ಗ್ರಾಮಸ್ಥರ ಪ್ರತಿಭಟನೆ

ಚುನಾವಣಾ ಅಧಿಕಾರಿಗಳ ನಡೆಯಿಂದ ಅನುಮಾನಗೊಂಡ ಗ್ರಾಮಸ್ಥರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಈ ಸಿಬ್ಬಂದಿಯ ಮೇಲೆ ಸಂದೇಹವಿದೆ. ಅವರು ಮತಯಂತ್ರವನ್ನು ಯಾಕೆ ತೆಗೆದುಕೊಂಡು ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ. ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಬರುವವರೆಗೆ ನಾವು ಮತಯಂತ್ರವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಬಸ್ ಅಡ್ಡಹಾಕಿ ಪ್ರತಿಭಟನೆ ನಡೆಸಿದರು. ಕೊನೆಗೆ ಗ್ರಾಮಸ್ಥರ ಮನವೊಲಿಕೆ ಮಾಡಿ ಮತಯಂತ್ರ ಸಾಗಿಸಲಾಯ್ತು.

ಇದನ್ನೂ ಓದಿ: ವೋಟಿಂಗ್​​ ಮುಗಿಯುತ್ತಿದ್ದಂತೆ ಹೆಚ್​​​ಡಿಕೆ, ಸುಮಲತಾ ಮಧ್ಯೆ ಜಗಳ; ಮಂಡ್ಯ ರಾಜಕೀಯಕ್ಕೆ ಟ್ವಿಸ್ಟ್​​!

ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಇಡೀ ರಾಜ್ಯದ ಗಮನವನ್ನೇ ಸೆಳೆದಿತ್ತು. ಈಗಿರುವಾಗ ಚುನಾವಣಾ ಸಿಬ್ಬಂದಿ ಭದ್ರತೆ ಇಲ್ಲದೇ ಮತಯಂತ್ರವನ್ನು ಕಾರಿನಲ್ಲೇ ತೆಗೆದುಕೊಂಡು ಹೋಗಿದ್ದೇಕೆ ಅನ್ನೋದೇ ಗ್ರಾಮಸ್ಥರ ಅನುಮಾನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಗ್ರಾಮಾಂತರ: ಅನುಮಾನ ಮೂಡಿಸಿದ ಮತದಾನ ಪ್ರಕ್ರಿಯೆ; ಮತಯಂತ್ರವನ್ನ ಕಾರಲ್ಲಿ ತೆಗದುಕೊಂಡು ಹೋಗಿದ್ದೇಕೆ?

https://newsfirstlive.com/wp-content/uploads/2024/04/Vonting-Machine.jpg

Load More