Advertisment

ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

author-image
Bheemappa
Updated On
ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?
Advertisment
  • ವಿದ್ಯಾರ್ಥಿ ಕಾಲೇಜಿನಲ್ಲಿ ಯಾವ ಪದವಿ ಓದುತ್ತಿದ್ದ, ಯಾವ ಊರು?
  • ಸೆಕ್ಯುರಿಟಿ ಇಂಚಾರ್ಜ್​​​ನನ್ನ ಭೀಕರವಾಗಿ ಕೊಲೆ ಮಾಡಿದ ಯುವಕ
  • ಯಾವಾಗ್ಲೂ ಕಾಲೇಜಿಗೆ ಮದ್ಯಪಾನ ಮಾಡಿ ಬರ್ತಿದ್ನಾ ವಿದ್ಯಾರ್ಥಿ?

ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿ ಓದೋದು ಬಿಟ್ಟು ಕುಡಿತದ ಚಟಕ್ಕೆ ಬಿದ್ದಿದ್ದ. ಕಾಲೇಜಿನಿಂದ ಹೊರ ಬಂದ್ರೆ ಸಾಕು ಎಣ್ಣೇಲಿ ತೇಲಾಡ್ತಿದ್ದ. ಬರ್ತಾ ಬರ್ತಾ ಎಣ್ಣೆ ಹಾಕೊಂಡು ಕಾಲೇಜಿಗೆ ಬರೋಕೆ ಶುರುಮಾಡಿದ್ದ. ಇವತ್ತು ಎಣ್ಣೆ ಹಾಕೊಂಡೆ ಹೋಗಿದ್ದವನು ಅದರ ನಶೆಯಲ್ಲೇ ಕಾಲೇಜಿನಲ್ಲಿ ಕೊಲೆ ಮಾಡಿದ್ದಾನೆ…

Advertisment

ಒಳ ಬಿಡದಿದ್ದಕ್ಕೆ ಸೆಕ್ಯುರಿಟಿ ಇಂಚಾರ್ಜ್ ಕೊಲೆ..!

ಕುಡಿದು ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ ತನ್ನನ್ನ ಒಳಗಡೆ ಬಿಡಲಿಲ್ಲ ಅಂತ ಸೆಕ್ಯುರಿಟಿ ಇಂಚಾರ್ಜ್​​ನನ್ನೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಪಾಪುರದ ಸಿಂಧಿ ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ವಿದ್ಯಾರ್ಥಿ ಬರ್ಬರ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?

publive-image

ಬಿಎ ಫೈನಲ್ ಇಯರ್ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ

ಅಂದ್ಹಾಗೆ ಈ ಘಟನೆ ನಡೆದಿದ್ದು ಇವತ್ತು ಮಧ್ಯಾಹ್ನ 3ಗಂಟೆ ಸುಮಾರಿಗೆ. ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ 52 ವರ್ಷದ ಜೈ ಕಿಶೋರ್ ರಾಯ್ ಇಲ್ಲೇ ಹಲವು ವರ್ಷಗಳಿಂದ ವಾಸವಿದ್ದ. ಹೀಗಾಗಿ ಸಿಂಧಿ ಕಾಲೇಜಿನಲ್ಲಿ ಕೆಲ ವರ್ಷಗಳಿಂದ ಸೆಕ್ಯುರಿಟಿ ಇಂಚಾರ್ಜ್ ಆಗಿ ಕೆಲಸ ಮಾಡ್ತಿದ್ದ. ಡಿಸಿಪ್ಲೈನ್ ಬಗ್ಗೆ ಹೆಚ್ಚು ಗಮನವಹಿಸ್ತಿದ್ದ. ವಿದ್ಯಾರ್ಥಿಗಳಿಗೆ ಕೊಂಚ ಸ್ಟ್ರಿಕ್ಟ್ ವರ್ತನೆ ತೋರ್ತಿದ್ದ. ಇದೇ ಕಾಲೇಜಿನಲ್ಲಿ ಓದ್ತಿದ್ದ ಅಸ್ಸಾಂ ಮೂಲದ ಭಾರ್ಗವ್ ಬಿಎ ಫೈನಲ್ ಇಯರ್ ವ್ಯಾಸಂಗ ಮಾಡ್ತಿದ್ದ. ಕೆಲ ದಿನಗಳಿಂದ ಕುಡಿದು ಕಾಲೇಜಿಗೆ ಬರೋಕೂ ಶುರು ಮಾಡಿದ್ದ. ಇವತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಡಿದು ಕಾಲೇಜಿಗೆ ಬಂದಿದ್ದ ಭಾರ್ಗವ್ ಒಳಗಡೆ ಹೋಗೋಕೆ ಮುಂದಾಗಿದ್ದಾನೆ. ಆಗ ಸೆಕ್ಯುರಿಟಿ ಇಂಚಾರ್ಜ್ ಜೈ ಕಿಶೋರ್ ರಾಯ್​ಗೆ ಭಾರ್ಗವ್ ಎಣ್ಣೆ ಹೊಡೆದು ಬಂದಿರೋದು ಗೊತ್ತಾಗಿ ವಿರೋಧ ಮಾಡಿದ್ದಾನೆ.

Advertisment

ಇದನ್ನೂ ಓದಿ: ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

publive-image

ಸೆಕ್ಯುರಿಟಿ ಎದೆಗೆ ನಾಲ್ಕೈದು ಬಾರಿ ಇರಿದ

ಈ ವೇಳೆ ಇಬ್ಬರ ಮಧ್ಯೆ ಜಗಳ ಆಗಿದೆ. ಜಗಳದಲ್ಲಿ ಕೋಪಗೊಂಡಿದ್ದ ಭಾರ್ಗವ್ ಹತ್ತಿರದ ಅಂಗಡಿಗೆ ಹೋಗಿ ಚಾಕು ಖರೀದಿ ಮಾಡಿ ಮತ್ತೆ ಕಾಲೇಜಿನ ಒಳಗಡೆ ಹೋಗೋಕೆ ಬಂದಿದ್ದಾನೆ. ಮೊದಲೇ ಕುಡಿದ ನಶೆಯಲ್ಲಿದ್ದ ಭಾರ್ಗವ್ ಕಿಶೋರ್ ರಾಯ್ ಮೇಲೆ ಕೋಪಗೊಂಡಿದ್ದ ಮತ್ತೆ ಒಳಗಡೆ ಬಿಡ್ತ್ಯೋ ಇಲ್ವೋ ಅಂತ ಜೋರಾಗಿಯೇ ಪ್ರಶ್ನೆ ಮಾಡಿ ಕಾಲೇಜಿನ ಒಳ ನುಗ್ಗೋಕೆ ಮುಂದಾದಾಗಿದ್ದಾನೆ. ಈ ವೇಳೆ ಕೂಡ ಕಿಶೋರ್ ತಡೆದಿದ್ದಾನೆ. ಈ ಬಾರಿ ಚಾಕು ತೆಗೆದಿದ್ದ ಭಾರ್ಗವ್ ಸೀದಾ ಸೆಕ್ಯುರಿಟಿ ಎದೆಗೆ ನಾಲ್ಕೈದು ಬಾರಿ ಇರಿದಿದ್ದಾನೆ. ಆಗ ತೀವ್ರ ರಕ್ತ ಸ್ರಾವವಾಗಿ ಸೆಕ್ಯುರಿಟಿ ಕಿಶೋರ್ ರಾಯ್ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ. ಕೂಡಲೇ ಅಲ್ಲಿದ್ದವರು ಬಾರ್ಗವ್​ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿತ, ಸಾವು

Advertisment

ಇದನ್ನೆಲ್ಲ ನೋಡ್ತಿದ್ದ ಉಳಿದ ವಿದ್ಯಾರ್ಥಿಗಳು ಕಾಲೇಜು ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕಾಲೇಜು ಸಿಬ್ಬಂದಿ ಅಮೃತಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಬಂದಿದ್ದ ಪೊಲೀಸರು ವಿದ್ಯಾರ್ಥಿಯನ್ನ ಅರೆಸ್ಟ್ ಮಾಡಿದ್ದಾರೆ. ಏನೇ ಆಗಲಿ ಬದುಕು ಕಟ್ಟಿಕೊಳ್ಳಬೇಕಿದ್ದ ವಿದ್ಯಾರ್ಥಿ ಕೊಲೆ ಕೇಸಲ್ಲಿ ಅಂದರ್ ಆಗಿದ್ದು ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment