newsfirstkannada.com

ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿತ, ಸಾವು

Share :

Published July 3, 2024 at 5:44pm

Update July 3, 2024 at 5:45pm

  ಸೆಕ್ಯುರಿಟಿ ಗಾರ್ಡ್​​ನನ್ನ ವಿದ್ಯಾರ್ಥಿ ಕೊಲೆ ಮಾಡಲು ಕಾರಣವೇನು?

  ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

  ವಿದ್ಯಾರ್ಥಿ ಚಾಕು ಇರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ ಸೆಕ್ಯುರಿಟಿ

ಬೆಂಗಳೂರು: ಸೆಕ್ಯುರಿಟಿ ಗಾರ್ಡ್​ ಕಾಲೇಜಿನ​ ಒಳಗೆ ಬಿಟ್ಟಿಲ್ಲವೆಂದು ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

ಜೈ ಕಿಶೋರ್ ರಾಯ್ ಮೃತ ಸೆಕ್ಯುರಿಟಿ ಗಾರ್ಡ್. ಭಾರ್ಗವ್ ಎನ್ನುವ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ಸೆಕ್ಯುರಿಟಿ ಗಾರ್ಡ್​, ವಿದ್ಯಾರ್ಥಿಯನ್ನು ಕಾಲೇಜಿನ ಒಳಗೆ ಬಿಟ್ಟಿಲ್ಲ. ಹೀಗಾಗಿ ಕೋಪಗೊಂಡ ವಿದ್ಯಾರ್ಥಿ ಸೆಕ್ಯುರಿಟಿ ಮೇಲೆ ಹಲ್ಲೆ ನಡೆಸಿ ಚಾಕು ತೆಗೆದುಕೊಂಡು ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸೆಕ್ಯುರಿಟಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಇದನ್ನೂ ಓದಿ: ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿ ಕಾಲೇಜಿಗೆ ಮದ್ಯಪಾನ ಮಾಡಿ ಬಂದಿರುವ ಶಂಕೆ ಇದೆ. ಈ ವೇಳೆ ಕಾಲೇಜಿನ ಒಳಗೆ ಬಿಡದಿದ್ದಕ್ಕೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿತ, ಸಾವು

https://newsfirstlive.com/wp-content/uploads/2024/07/BNG_SECURITY.jpg

Load More