newsfirstkannada.com

ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

Share :

Published July 3, 2024 at 2:59pm

  ಬೆರಿಲ್ ಸೈಕ್ಲೋನ್​ ಹಿನ್ನೆಲೆ ಅಲ್ಲೇ ಉಳಿದುಕೊಂಡಿದ್ದ ಪ್ಲೇಯರ್ಸ್

  ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸೆಲೆಬ್ರೆಷನ್ ಮಾಡುತ್ತಾರಾ?

  ಸ್ಪೆಷಲ್ ಚಾರ್ಟರ್ ವಿಮಾನದಲ್ಲಿ ಆಟಗಾರರು ನಾಳೆ ಬರ್ತಾರಾ?

ವೆಸ್ಟ್​​ ಇಂಡೀಸ್​ನಲ್ಲಿ ಬೆರಿಲ್ ಸೈಕ್ಲೋನ್​ ಆರ್ಭಟ ಜೋರಾಗಿರುವ ಕಾರಣ ಭಾರತದ ಕ್ರಿಕೆಟ್ ತಂಡದ​ ಆಟಗಾರರು ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಕರೆದುಕೊಂಡು ಬರಲು ಸ್ಪೆಷಲ್ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಇದೀಗ ಈ ವಿಮಾನ ಬಾರ್ಬಡೋಸ್​ ತಲುಪಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

ಸ್ಪೆಷಲ್ ಚಾರ್ಟರ್ ವಿಮಾನ ಬಾರ್ಬಡೋಸ್ ತಲುಪಿದ್ದು T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಪ್ಲೇಯರ್ಸ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಿಬ್ಬಂದಿ ವರ್ಗದವರು ಈಗಾಗಲೇ ವಿಮಾನವನ್ನು ಹತ್ತಿದ್ದಾರೆ ಎನ್ನಲಾಗಿದೆ. ಪ್ಲೇಯರ್ಸ್ ಎಲ್ಲ ವಿಮಾನ ಹತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೆರಿಲ್ ಚಂಡಮಾರುತದ ತೀವ್ರತೆ ಹಿನ್ನೆಲೆಯಲ್ಲಿ ಭಾರತ ತಂಡ ಸ್ವದೇಶಕ್ಕೆ ವಾಪಸ್ ಆಗಲು ವಿಳಂಬವಾಗಿತ್ತು. ಆದರೆ ವಿಮಾನ ಹತ್ತಿರುವ ಆಟಗಾರರು 16 ಗಂಟೆ ಪ್ರಯಾಣದ ಬಳಿಕ ನಾಳೆ ಬೆಳಗ್ಗೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

ಬಾರ್ಬಡೋಸ್​ ಸ್ಟೇಡಿಯಂನಲ್ಲಿ ಜೂ.29ರಂದು ನಡೆದ T20 ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ರೋಹಿತ್ ಬಾಯ್ಸ್​ ಟ್ರೋಫಿಗೆ ಮುತ್ತಿಟ್ಟು ಸಂಭ್ರಮಿಸಿದ್ದರು. ಆದರೆ, ಜೂ. 1ರಂದು ಬಾರ್ಬಡೋಸ್‌ಗೆ ಭೀಕರ ಬೆರಿಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ. ಸ್ಪೆಷಲ್ ಚಾರ್ಟರ್​ ವಿಮಾನದ ಮೂಲಕ T20 ವಿಶ್ವಕಪ್​ ಟ್ರೋಫಿಯೊಂದಿಗೆ ಆಟಗಾರರೆಲ್ಲ ನಾಳೆ ದೆಹಲಿಗೆ ಆಗಮಿಸಲಿದ್ದಾರೆ. ಅಭಿಮಾನಿಗಳೆಲ್ಲ ಕಾತುರದಿಂದ ಜೋರಾಗಿ ಸೆಲೆಬ್ರೆಷನ್ ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

https://newsfirstlive.com/wp-content/uploads/2024/07/TEAM_INDIA-2.jpg

Load More