newsfirstkannada.com

ನನ್ನ ಮಗಳು ಹೇಡಿಯಲ್ಲ.. ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್‌ ಕೊಟ್ಟ ಪ್ರಭುದ್ಧ ತಾಯಿ; ಅಸಲಿಗೆ ಆಗಿದ್ದೇನು?

Share :

Published May 16, 2024 at 9:12pm

Update May 16, 2024 at 9:16pm

    ಮಗಳದ್ದು ಕೊಲೆ ಎಂದ ತಾಯಿ.. ಅಮ್ಮನನ್ನ ಕಾಡ್ತಿರೋ ಅನುಮಾನಗಳೇನು?

    ಪ್ರಭುದ್ಧ ತುಂಬಾ ಧೈರ್ಯವಂತೆ, ಬುದ್ದಿವಂತೆ ಹಾಗೂ ಗುಣವಂತೆ ಆಗಿದ್ದಳು

    ವಿದ್ಯಾರ್ಥಿನಿ ಪ್ರಭುದ್ಧ ಮನೆಯಲ್ಲಿ ಸಿಕ್ಕಿದ್ದು ಮೂರು ಡೆತ್​ನೋಟ್‌ಗಳು ಯಾಕೆ?

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೃಂದಾವನ ನಗರದಲ್ಲಿ 21 ವರ್ಷದ ಪ್ರಭುದ್ಧ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ಕಾಲೇಜಿಗೆ ಹೋಗಿ ಮನೆಗೆ ಬಂದಿದ್ದ ವಿದ್ಯಾರ್ಥಿನಿಯ ಶವ ಬಾತ್​ರೂಂನಲ್ಲಿ ಕತ್ತು ಮತ್ತು ಕೈಗಳನ್ನ ಕುಯ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ? ಆತ್ಮಹತ್ಯೆಯೋ ಎಂಬ ಅನುಮಾನ ಸೃಷ್ಟಿಯಾಗಿದ್ದು, ಸಾಕಷ್ಟು ಪ್ರಶ್ನೆಗಳನ್ನ ಕಾಡ್ತಿದೆ. ಒಂದು ಕಡೆ ಪೊಲೀಸರು ತನಿಖೆ ಆರಂಭಿಸಿದ್ರೆ, ಈ ಕಡೆ ಪ್ರಭುದ್ಧ ತಾಯಿ ಸೌಮ್ಯ, ತನ್ನ ಮಗಳನ್ನ ಯಾರೋ ಕೊಲೆ ಮಾಡಿದ್ದಾರೆ ಅಂತ ಗೋಳಾಡ್ತಿದ್ದಾರೆ. ತನ್ನ ಮಗಳ ಸಾವಿಗೆ ನ್ಯಾಯ ಬೇಕು ಅಂತ ಕಣ್ಣೀರು ಇಡುತ್ತಿದ್ದಾರೆ.

ಮಕ್ಕಳೇ ಪ್ರಪಂಚ.. ಮಗಳೇ ದೇವತೆ ಅಂತ ಸಾಕಿಕೊಂಡಿದ್ದರಂತೆ. ಆದ್ರೀವತ್ತು ಅದೇ ದೇವತೆ ಕಣ್ಣ ಮುಂದೆ ಹೆಣವಾಗಿ ಸಿಕ್ಕಿದ್ದು, ಈ ಅಮ್ಮನ ಹೃದಯ ಚೂರು ಚೂರಾಗಿದೆ. ಅಮ್ಮ ಆಕ್ಟಿವಿಸ್ಟ್​. ಸಮಾಜದ ತಪ್ಪನ್ನ ಪ್ರಶ್ನಿಸೋರು. ಹಲವು ರಾಜಕಾರಣಿಗಳನ್ನ ಪ್ರಶ್ನಿಸಿದ್ರಂತೆ. ಅನೇಕ ಹೆಣ್ಣು ಮಕ್ಕಳನ್ನ ರಕ್ಷಣೆನೂ ಮಾಡಿದ್ರಂತೆ. ಹಾಗಾಗಿ, ತನ್ನಂತೆ ತನ್ನ ಮಗಳು ಇರಬೇಕು ಅನ್ನೋ ಉದ್ದೇಶದಿಂದ ಅಷ್ಟೇ ಧೈರ್ಯವಾಗಿ ಬೆಳೆಸಿದ್ದರು. ಅಮ್ಮನಂತೆ ಮಗಳು ಕೂಡ ಅಷ್ಟೇ ಗಟ್ಟಿಗಿತ್ತಿಯಾಗಿದ್ದಳು ಅಂತಾನೂ ಹೇಳಲಾಗ್ತಿದೆ. ಹಾಗಿದ್ದರೂ ಈ ಅಮ್ಮನ ಮುದ್ದಿನ ಮಗಳು ಸಾವನ್ನಪ್ಪಿದ್ದೇಗೆ ಅನ್ನೋದೇ ಈಗ ಕಾಡುತ್ತಿರುವ ಪ್ರಶ್ನೆ.

ಪ್ರಭುದ್ಧ ತುಂಬಾ ಧೈರ್ಯವಂತೆ, ಬುದ್ದಿವಂತೆ ಹಾಗೂ ಗುಣವಂತೆ ಆಗಿದ್ದಳು ಅನ್ನೋದು ಅಮ್ಮನ ನಂಬಿಕೆ. ಇಷ್ಟು ಧೈರ್ಯವಾಗಿ ಸಾಕಿದ್ದ ಮಗಳು ಇದ್ದಕ್ಕಿದ್ದ ಹಾಗೆ ಈ ರೀತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು ಹೇಗೆ ಅನ್ನೋದು ಅಮ್ಮನ ಅನುಮಾನ. ಇನ್ನು ಸೆಕೆಂಡ್​ ಇಯರ್ ಡಿಗ್ರಿ ಓದುತ್ತಿದ್ದ ಮಗಳು ಪ್ರತಿದಿನವೂ ತನ್ನ ಆಕ್ಟಿವಿಟಿನ ಅಮ್ಮನಿಗೆ ಫೋನ್ ಮಾಡಿ ಹೇಳ್ತಿದ್ದಳಂತೆ. ತಾನು ಎಲ್ಲಿ ಹೋಗ್ತಿದ್ದೇನೆ, ಏನು ಮಾಡ್ತಿದ್ದೇನೆ, ಯಾರ ಜೊತೆ ಇದ್ದೇನೆ ಅಂತ ಅಪ್ಡೇಟ್​ ಕೊಡ್ತಿದ್ದಳಂತೆ. ಸಾವನ್ನಪ್ಪಿರುವ ದಿನವೂ ಅಮ್ಮನ ಬಳಿ ಫೋನ್ ಮಾಡಿ ಮಾತಾಡಿದ್ದಾಳಂತೆ. ಇಷ್ಟು ಚೆನ್ನಾಗಿದ್ದ ಮಗಳು ದಿಢೀರ್ ಅಂತ ಸಾವನ್ನಪ್ಪಿದ್ದಾಳೆ ಅಂದ್ರೆ ಯಾವ ತಾಯಿ ತಾನೇ ನಂಬೋಕೆ ಸಾಧ್ಯವಿಲ್ಲ.

ಮಗಳು ಸೂಸೈಡ್​ ಮಾಡಿಕೊಳ್ಳುವಷ್ಟು ವೀಕ್ ಆಗಿರಲಿಲ್ಲ ಎನ್ನುವ ಪ್ರಭುದ್ಧ ತಾಯಿ, ತನ್ನ ಮಗಳನ್ನ ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮಗಳು ಧೈರ್ಯವಂತೆ, ಗಟ್ಟಿಗಿತ್ತಿ ಎನ್ನುವ ಸೌಮ್ಯ, ಮಗಳ ಸಾವಿನ ಬಗ್ಗೆ ಹಲವು ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಕೇಸ್.. FSL ವರದಿಯಲ್ಲಿ ಕೊನೆಗೂ ಸ್ಫೋಟಕ ಅಂಶ ಬಯಲು; ಏನದು? 

ಸಿಂಗಲ್ ಪೇರೆಂಟ್​ ಆಗಿದ್ದುಕೊಂಡು, ಬಹಳ ಧೈರ್ಯವಾಗಿ, ಸೋಶಿಯಲ್ ಆಗಿ ಬೆಳೆಸಿದ ಮಗಳು ಸೂಸೈಡ್ ಮಾಡ್ಕೋತಾಳೆ ಅಂದ್ರೆ ಯಾವ ತಾಯಿನೂ ಒಪ್ಪಲ್ಲ. ಮಗಳ ವಿಷ್ಯದಲ್ಲಿ ಸೌಮ್ಯ ಅವರು ಸಹ ಅಷ್ಟೇ ಕ್ಲಾರಿಟಿಯಾಗಿದ್ದರು. ಆದರೂ ಮಗಳು ತಮ್ಮದೇ ಮನೆಯಲ್ಲಿ ಶವವಾಗಿ ಸಿಕ್ಕಿರೋದನ್ನ ವಿದ್ಯಾರ್ಥಿನಿ ತಾಯಿ ಸಹಿಸುತ್ತಿಲ್ಲ.

ವಿದ್ಯಾರ್ಥಿನಿ ಪ್ರಭುದ್ಧ ಮನೆಯಲ್ಲಿ ಸಿಕ್ತಾ ಡೆತ್​ನೋಟ್?
ಪ್ರಭುದ್ಧ ಮನೆಯಲ್ಲಿ ಡೆತ್​ ನೋಟ್ ಸಿಕ್ಕಿದೆ ಎನ್ನಲಾಗಿದೆ. ಪೊಲೀಸರು ಪರಿಶೀಲನೆ ಮಾಡುವ ವೇಳೆ ಪ್ರಭುದ್ಧ ಪುಸ್ತಕಗಳಲ್ಲಿ ಮೂರು ಚೀಟಿಗಳು ಸಿಕ್ಕಿದ್ದು, ಅದರಲ್ಲಿ ಅಮ್ಮ ಸಾರಿ ಎಂದು ಬರೆದಿರುವುದು ಪತ್ತೆಯಾಗಿದೆಯಂತೆ. ಆದರೆ ಇದು ಪ್ರಭುದ್ಧ ಅವರದ್ದೇ ಹ್ಯಾಂಡ್​ರೈಟಿಂಗ್ ಅನ್ನೋದ್ರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಮನೆ ಒಡತಿ ಶ್ವೇತಾ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜಿಮ್‌ ಟ್ರೈನರ್‌ ಸಾವಿಗೆ ಹೊಸ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ 

ನಿಜಕ್ಕೂ ಆ ಮನೆಯಲ್ಲಿ ನಡೆದಿದ್ದೇನು? ಕೊಲೆನಾ? ಸೂಸೈಡ್?
ಅಂದ ಹಾಗೆ ಪ್ರಭುದ್ಧ ಸಾವಿನ ಬಗ್ಗೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಎಂದಿನಂತೆ ಕಾಲೇಜಿಗೆ ಹೋಗಿದ್ದ ಪ್ರಭುದ್ಧ ಸಂಜೆ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ತಮ್ಮನ ಕೈಯಿಂದ ಮ್ಯಾಗಿ ತರಿಸಿಕೊಂಡಿದ್ದಳು ಎನ್ನಲಾಗಿದೆ. ಆದರೆ ಸಂಜೆ ವೇಳೆ ಡೋರ್ ಲಾಕ್ ಆಗಿದ್ದು ಬಾಗಿಲು ತೆಗೆದಿರಲಿಲ್ಲವಂತೆ. ಪುಟ್ಬಾಲ್ ಆಡೋಕೆ ಹೋಗಿದ್ದ ತಮ್ಮ ಮನೆಗೆ ಬಂದು ಎಷ್ಟೇ ಬಾಗಿಲು ಬಡಿದರೂ ಡೋರ್ ಓಪನ್ ಆಗಲ್ಲ. ಆಮೇಲೆ ಮೇಲಿನ

ಮನೆಯವರು ಬಂದು ಕಿಟಕಿಯಲ್ಲಿ ನೋಡಿದಾಗ ಪ್ರಭುದ್ಧ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಪ್ರಭುದ್ಧ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಲಾಗಿದೆ. ಗಾಬರಿಯಿಂದ ಮನೆಗೆ ಓಡಿ ಬಂದ ತಾಯಿ ರಕ್ತದ ಮಡುವಿನಲ್ಲಿದ್ದ ಮಗಳನ್ನ ಎತ್ಕೊಂಡು ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಬಟ್, ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಕಾರಣ ಪ್ರಭುದ್ಧ ಪ್ರಾಣ ಹಾರಿಹೋಗಿತ್ತು.

ಹಾಗ್ನೋಡಿದ್ರೆ ಪ್ರಭುದ್ಧ ಮನೆಗೆ ಯಾರೂ ಹೆಚ್ಚಾಗಿ ಬರ್ತಿರಲಿಲ್ಲ. ಅಜ್ಜಿ ಸಹ ಕಳೆದ ಕೆಲವು ತಿಂಗಳಿಂದ ಮನೆ ಕಡೆ ಬಂದಿಲ್ಲ. ಪ್ರಭುದ್ಧಗೆ ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ಇತ್ತು. ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಪ್ರಭುದ್ಧ ಸಾವನ್ನಪ್ಪಿದ್ದ ಸ್ಥಳದಲ್ಲಿ ಚಾಕು ಮತ್ತು ಫೋನ್ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರಂತೆ. ಪ್ರಭುದ್ಧ ಎಜುಕೇಷನ್ ಹಾಗೂ ಪರ್ಸನಲ್ ವಿಚಾರದ ಬಗ್ಗೆಯೂ ತನಿಖೆ ಮಾಡ್ತಿದ್ದಾರಂತೆ.

ಪ್ರಭುದ್ಧ ಸಾವಿನ ಸುತ್ತ ಹಲವು ಅನುಮಾಗಳು ಮೂಡಿದೆ. ಮೇಲ್ನೋಟಕ್ಕೆ ಇದು ಸೂಸೈಡ್ ಅಂತ ಪೊಲೀಸರಿಗೆ ಶಂಕೆ ವ್ಯಕ್ತವಾಗ್ತಿದೆಯಾದರೂ ಪ್ರಭುದ್ದ ತಾಯಿ ಇದು ಕೊಲೆ ಅಂತ ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಭುದ್ಧ ಫೋನ್ ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಪೋಸ್ಟ್​ ಮಾರ್ಟಮ್ ರಿಪೋರ್ಟ್ ಸಹ ಬರಬೇಕಿದೆ. ಬಹುಶಃ ಈ ಎಲ್ಲಾ ವರದಿಗಳು ಬಂದ ಬಳಿಕ ಈ ಸಾವಿನ ಹಿಂದಿರುವ ಅಸಲಿ ಸತ್ಯ ಬಯಲಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮಗಳು ಹೇಡಿಯಲ್ಲ.. ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್‌ ಕೊಟ್ಟ ಪ್ರಭುದ್ಧ ತಾಯಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Bangalore-Girl-Death.jpg

Load More