/newsfirstlive-kannada/media/post_attachments/wp-content/uploads/2024/08/Darshan-New-Photo-In-Jail-2.jpg)
ಬೆಂಗಳೂರು: ಒಂದು ತಿಂಗಳ ಹಿಂದಷ್ಟೇ ನ್ಯೂಸ್​ ಫಸ್ಟ್ ದರ್ಶನ್ ವಿಗ್ ಬಗ್ಗೆ ಒಂದು ಸುದ್ದಿಯನ್ನು ಮಾಡಿತ್ತು. ಜೈಲಿನಲ್ಲಿರುವ ದರ್ಶನ್​ ಕೃತಕ ಕೂದಲಿಗೂ ಕತ್ತರಿ ಬಿದ್ದಿರುವ ಬಗ್ಗೆ ವರದಿ ಮಾಡಲಾಗಿತ್ತು. ಇಂದು ವೈರಲ್ ಆದ ಫೋಟೋದಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿದೆ. ಜೈಲಿನ ಅಧಿಕಾರಿಗಳು ದರ್ಶನ್ ವಿಗ್​ನ್ನು ತೆಗೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/DARSHAN_JAIL_1.jpg)
ಇದನ್ನೂ ಓದಿ:ಜೈಲಲ್ಲಿ ದರ್ಶನ್ ಲುಕ್ ಫುಲ್ ಚೇಂಜ್.. ವಿಗ್ ತೆಗೆಸಿದ್ರಾ ಪೊಲೀಸ್? ದಾಸನ ಹೊಸ ಮುಖ ಅನಾವರಣ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್​ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ಅವರ ಎಲ್ಲಾ ರೀತಿಯ ಆಭರಣಗಳಿಗೂ ಕತ್ತರಿ ಬಿದ್ದಿತ್ತು. ಆದ್ರೆ ಬೆಳ್ಳಿ ಕಡಗ ಮಾತ್ರ ಪೊಲೀಸರು ಅವರಿಂದ ತೆಗೆಸಿಲ್ಲ. ಜೈಲಿಗೆ ಸೇರಿದ್ಮೇಲೆ ವಿಗ್​ನ ಮೇಂಟೇನ್​​ ಮಾಡೋದು ಕಷ್ಟ ಆಗ್ತಿದೆಯಂತೆ. ಹೀಗಾಗಿ ವಿಗ್ ತೆಗಿಸಿರೋ ಪೊಲೀಸರು ದರ್ಶನ್​ ತಲೆ ಕೂದಲನ್ನ ಪೂರ್ತಿಯಾಗಿ ಬೋಳಿಸಿದ್ದಾರೆ ಎನ್ನಲಾಗಿತ್ತು. ಅದು ಈಗ ಸ್ಪಷ್ಟವಾಗಿ ಫೋಟೋದಲ್ಲಿ ಕಾಣುತ್ತಿದೆ. ದರ್ಶನ್ ವಿಗ್ ಇಲ್ಲದೇ ಚೇರ್​ನಲ್ಲಿ ಕುಳಿತಿರೋದು ಕಾಣಿಸುತ್ತಿದೆ. ಅಲ್ಲದೇ ಬೋಳಿಸಿದ ತಲೆಯಲ್ಲಿ ಮತ್ತೆ ಕೇಶ ರಾಶಿ ಕೊಂಚ ಬೆಳೆದಿರುವುದು ಕೂಡ ಕಾಣಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us