/newsfirstlive-kannada/media/post_attachments/wp-content/uploads/2024/04/bng-death1.jpg)
ಬೆಂಗಳೂರು: ಇಡೀ ರಾಜ್ಯ ರಾಜಧಾನಿಯನ್ನು ದಂಗು ಬಡಿಸಿತ್ತು ಸಾರಕ್ಕಿ ಗೇಟ್ ಬಳಿ ನಡೆದ ಭೀಕರ ಜೋಡಿ ಕೊಲೆ. ಈ ಕೇಸ್​ ಸಂಬಂಧ​ ಕ್ಷಣ ಕ್ಷಣಕ್ಕೂ ಟ್ವಿಸ್ಟ್​​ ಪಡೆದುಕೊಳ್ಳುತ್ತಿದೆ. ಮೃತ ಅನುಷಾ ಹಾಗೂ ಸುರೇಶ್​ ಇಬ್ಬರು ಐದು ವರ್ಷಗಳಿಂದ ಪರಿಚಯವಿದ್ರು. ಈ ಹಿಂದೆ ಇಬ್ಬರು ಒಟ್ಟಿಗೆ ಕೆಲಸ ಕೂಡ ಮಾಡ್ತಿದ್ರು. ಆಗ ತನಗೆ ಮದುವೆಯಾಗಿಲ್ಲಾ ಎಂದು ಪ್ರೀತಿ ಮಾಡಿದ್ದ ಸುರೇಶ್.
/newsfirstlive-kannada/media/post_attachments/wp-content/uploads/2024/04/bng-death5.jpg)
ಇದನ್ನೂ ಓದಿ:ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ
ಆದ್ರೆ, ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್​ನ ಅಸಲಿ ಬಣ್ಣ ಗೊತ್ತಾಗಿದೆ. ಹೀಗಾಗಿ, ಸುರೇಶ್​ನಿಂದ ಅನುಷಾ ಅಂತರ ಕಾಯ್ದುಕೊಂಡಿದ್ದಳು. ಆದ್ರೆ, ಸುರೇಶ್ ಮಾತ್ರ ಆಕೆಗೆ ಕಾಟ ಕೊಡೋದನ್ನ ನಿಲ್ಲಿಸಿರಲಿಲ್ಲ. ಹೀಗಾಗಿ, ಮೊನ್ನೆ ಬೆಳಗ್ಗೆ ಅನುಷಾ ಜೆ.ಪಿ.ನಗರದ ಠಾಣೆಗೆ ಭೇಟಿ ನೀಡಿ ಪೊಲೀಸರಿಂದ ವಾರ್ನ್​ ಮಾಡಿಸಿದ್ದಾಳೆ. ಅದಲ್ಲದೇ, ಸುರೇಶ್ ಆಕೆ ತಂಟೆಗೆ ಹೋಗಲ್ಲ ಅಂತಾ ಮುಚ್ಚಳಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇದಾದ ಮೇಲೆ ಪೊಲೀಸ್ ಠಾಣೆಯಿಂದ ಹೊರಬಂದ ಮೇಲೆ ಸುರೇಶ್​ ಬಣ್ಣ ಬಣ್ಣದ ಮಾತಾಡಿದ್ದಾನೆ.
/newsfirstlive-kannada/media/post_attachments/wp-content/uploads/2024/04/bng-death3.jpg)
ಅದ್ಯಾವಾಗ ಅನುಷಾ ಇನ್ಮುಂದೆ ನನಗೆ ಸಿಗೋದಿಲ್ಲಾ ಅಂತಾ ಕನ್ಫರ್ಮ್​ ಆಯ್ತೋ. ಸಿಟ್ಟಿಗೆದ್ದ ಸುರೇಶ್​ ತಾನೇ ತಂದಿದ್ದ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ. ಈ ವೇಳೆ ಪಾರ್ಕ್​ಗೆ ಎಂಟ್ರಿ ಕೊಟ್ಟ ಅನುಷಾ ತಾಯಿ ಗೀತಾ ನನ್ನ ಮಗಳಿಗೆ ಏನೂ ಮಾಡಬೇಡ ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಇಷ್ಟಾದ್ರೂ ಕೇಳದಿದ್ದಾಗ, ಅಲ್ಲೆ ಇದ್ದ ಸಿಮೆಂಟ್​ ಇಟ್ಟಿಗೆ ತೆಗೆದು ತಲೆ ಮೇಲೆ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಆತನೂ ಜೀವ ಬಿಟ್ಟಿದ್ದಾನೆ.
/newsfirstlive-kannada/media/post_attachments/wp-content/uploads/2024/04/bng-death2.jpg)
ಒಟ್ಟಾರೆ, ಇದೀಗ ಜೆ.ಪಿ.ನಗರ ಪೊಲೀಸ್​ ಠಾಣೆಯಲ್ಲಿ ಕೌಂಟರ್​ ಕಂಪ್ಲೇಟ್​ ದಾಖಲಾಗಿದೆ. ಮೃತ ಸುರೇಶ್ ಪತ್ನಿಯಿಂದ ಅನುಷಾ ತಾಯಿ ಮೇಲೆ ದೂರು ಕೊಟ್ಟಿದ್ರೆ, ಇತ್ತ ಮೃತ ಅನುಷಾ ತಾಯಿ ಸುರೇಶ್ ಮೇಲೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ಮುಂದುವರೆಸಿದ್ದಾರೆ. ಈ ಪ್ರೀತಿ, ಸೇಡು, ಜಿದ್ದು, ಅಸಹಾಕತೆ ಇದೆಲ್ಲರ ನಡುವೆ ಜೋಡಿ ಬೀದಿ ಹೆಣವಾದ್ರು. ಆ ತಾಯಿ ತನ್ನ ಮಗಳನ್ನೂ ಕಳೆದುಕೊಂಡು ಜೈಲು ಪಾಲಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us