newsfirstkannada.com

×

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಈಗಲೇ ಅಪ್ಲೇ ಮಾಡಿ

Share :

Published October 1, 2024 at 3:05pm

Update October 1, 2024 at 3:06pm

    ಯಾವ್ಯಾವ ವಿಭಾಗಗಳಿಗೆ ಹುದ್ದೆಗಳನ್ನು ಕಾಲ್​ಫಾರ್ಮ್ ಮಾಡಿದೆ?

    ಆನ್​ಲೈನ್ ಅಲ್ಲ, ಹಾಫ್​​ಲೈನ್​ನಲ್ಲಿ ಅಭ್ಯರ್ಥಿಗಳು ಅಪ್ಲೇ ಮಾಡಿ

    ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುವ ಬೆಂವಿವಿ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗಳನ್ನು ಮಾಡಲಾಗುತ್ತಿದೆ. ಈ ಸಂಬಂಧ ಬೆಂಗಳೂರು ಉತ್ತರ ವಿವಿ ಅರ್ಜಿಗಳನ್ನು ಆಹ್ವಾನ ಮಾಡಿದೆ. 26 ಸೆಪ್ಟೆಂಬರ್ 2024ರಂದು ಕುಲಪತಿಗಳು ಇದಕ್ಕೆ ಅನುಮೋದನೆ ನೀಡಿದ್ದರು. ಹಾಫ್​​ಲೈನ್​ ಮೂಲಕ ಅಭ್ಯರ್ಥಿಗಳು ಅಪ್ಲೇ ಮಾಡಬೇಕು.

ಇದನ್ನೂ ಓದಿ: SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಗಸಂದ್ರ ಮತ್ತು ಆಡಳಿತ ಭವನದಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದೆ. ಹೀಗಾಗಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ 2024-25ನೇ ಸಾಲಿನ ಶೈಕ್ಷಣಿಕ ಸಾಲಿಗೆ ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳಿಗೆ ಸಂಬಳ
43,520 ರೂಪಾಯಿಗಳು
49,920 ರೂಪಾಯಿಗಳು

ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್

ಈ ವಿಭಾಗ ಹುದ್ದೆಗಳ ನೇಮಕಾತಿ
ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಮಾಜ ಕಾರ್ಯ, ವಾಣಿಜ್ಯ ಶಾಸ್ತ್ರ, ಸಸ್ಯಶಾಸ್ತ್ರ, ಕಂಪ್ಯೂಟರ್​ ಸೈನ್ಸ್​, ಭೌತ ಶಾಸ್ತ್ರ, ಗಣಿತ ಶಾಸ್ತ್ರ, ಲೈಬ್ರರಿ ಸೈನ್ಸ್​, ರಸಾಯನ ಶಾಸ್ತ್ರ, ಬಿ.ಇಡಿ, ಎಂ.ಎ ಎಜುಕೇಷನ್,

ಒಟ್ಟು ಹುದ್ದೆಗಳು- 73

ಅಭ್ಯರ್ಥಿಗಳ ವಿದ್ಯಾರ್ಹತೆ-
ಸ್ನಾತಕೋತ್ತರ ಪದವಿಯೊಂದಿಗೆ ಪಿ.ಹೆಚ್.ಡಿ/ಎನ್.ಇ.ಟಿ./ಎಸ್.ಎಲ್.ಇ.ಟಿ. ಹೊಂದಿರಲೇಬೇಕು

ಅರ್ಜಿ ಸಲ್ಲಿಸುವುದು ಹೇಗೆ?
ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಯ ಫಾರ್ಮ್​ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅದಕ್ಕೆ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸೇವಾನುಭವ ಪತ್ರ, ಪಿಹೆಚ್​​ಡಿ/ಎನ್​​​ಇಟಿ/ಎಸ್​ಎಲ್​ಇಟಿ ಪ್ರಮಾಣಪತ್ರ, ಸಂಶೋಧನ ಪ್ರಕಟಣೆಗಳ ಪತ್ರಿಕೆಗಳು ಸೇರಿ ಇತರೆ ಅಗತ್ಯ ದಾಖಲೆಗಳನ್ನು (ದ್ವಿಪ್ರತಿಗಳು) ಲಗತ್ತಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ
ಕುಲಸಚಿವರು, ವಿಶ್ವವಿದ್ಯಾಲಯದ ಆಡಳಿತ ಕಚೇರಿ, ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ- 563103.

ಪ್ರಮುಖ ದಿನಾಂಕ-
07 ಅಕ್ಟೋಬರ್​ 2024 (ಸಂಜೆ 5:30ರ ಒಳಗೆ)

ವಿಶೇಷ ಸೂಚನೆ

  • ಎನ್​​​ಇಟಿ/ಎಸ್​ಎಲ್​ಇಟಿ ಪ್ರಮಾಣಪತ್ರ ಇರಲೇಬೇಕು
  • ಈ ಹುದ್ದೆಗಳೆಲ್ಲ ಸಂಪೂರ್ಣ ತಾತ್ಕಾಲಿಕವಾಗಿರುತ್ತವೆ

ಅತಿಥಿ ಉಪನ್ಯಾಸಕರ ನೇಮಕಾತಿ ಖಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೆ ಅಥವಾ 2024-25ನೇ ಶೈಕ್ಷಣಿಕ ಅವಧಿವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿವರಿಗೆ ಅನ್ವಯಿಸುವುದು.

ಅಭ್ಯರ್ಥಿಗಳು ಸಂದರ್ಶನದ ದಿನಾಂಕ ಮತ್ತು ಇತರೆ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್​​ಸೈಟ್ www.bnu.karnataka.gov.in​ ನಿಂದ ಪಡೆಯಬೇಕು.

ಪ್ರಮುಖವಾದ ಲಿಂಕ್- https://bnu.karnataka.gov.in/storage/pdf-files/Academic%20notifications/GUEST%20FACULTY%20NOTIFICATION%20KANNADA%202024-25.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಈಗಲೇ ಅಪ್ಲೇ ಮಾಡಿ

https://newsfirstlive.com/wp-content/uploads/2024/10/JOB_BNG.jpg

Load More