newsfirstkannada.com

ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ಕಿರಾತಕರ ವಂಚನೆ.. APK ಫೈಲ್​​ ಡೌನ್​ಲೋಡ್ ಮಾಡಿದ್ರೆ ಹಣ ಮಾಯ, ಹೇಗೆ?

Share :

Published August 23, 2024 at 7:33am

    ಎಲೆಕ್ಟ್ರಿಸಿಟಿ, ಜಲಮಂಡಳಿ ಬಿಲ್​ ಹೆಸರಲ್ಲಿ ಎಪಿಕೆ ಫೈಲ್​​ ಬಂದಿದ್ಯಾ?

    ಕ್ಷಣದಲ್ಲಿ ಮಾತ್ರ ನಿಮ್ಮ ಬ್ಯಾಂಕ್​ಗೆ ಕನ್ನ ಬೀಳೋದಂತೂ ಗ್ಯಾರಂಟಿ

    ಮೋಸ ಹೋಗೋಕು ಮುನ್ನ, ಇದನ್ನು ಗಮನವಿಟ್ಟು ತಿಳಿದುಕೊಳ್ಳಿ

ನಿಮ್ಮ ಮೊಬೈಲ್​ಗೆ ಎಪಿಕೆ ಅನ್ನೋ ಫೈಲ್​ ಬರ್ತಿದ್ಯಾ..?. ಎಲೆಕ್ಟ್ರಿಸಿಟಿ ಬಿಲ್, ಜಲಮಂಡಳಿ ಬಿಲ್​ ಹೆಸರಲ್ಲಿ ಎಪಿಕೆ ಫೈಲ್​​ ಬಂದಿದ್ಯಾ?. ಆ ತರ ಫೈಲ್​ ಬಂದವರು ಬರದೇ ಇದ್ದವ್ರೂ ಮೋಸ ಹೋಗೋಕು ಮುನ್ನ, ಇದನ್ನು ಗಮನವಿಟ್ಟು ತಿಳಿದುಕೊಳ್ಳಿ.

ಇದನ್ನೂ ಓದಿ: ರಾಜಕಾರಣದಲ್ಲಿ ಹೊಸ ಇತಿಹಾಸಕ್ಕೆ ಸಜ್ಜಾದ ದಳಪತಿ ವಿಜಯ್.. ಪಕ್ಷದ ಫ್ಲ್ಯಾಗ್, ಗೀತೆ ಅನಾವರಣ; ಪ್ರತಿಜ್ಞೆ ಏನು? 

ವೇಷ ಬೇರೆ ರೂಪ ಬೇರೆ.. ಆದ್ರೆ ವಂಚನೆ ಮಾತ್ರ ಸೇಮ್​ ಟು ಸೇಮ್​.. ಓಟಿಪಿ ಬರಲ್ಲ, ಲಿಂಕ್​ಕೂ ಕಳ್ಸಲ್ಲ. ಆದ್ರೂ, ಕ್ಷಣ ಮಾತ್ರದಲ್ಲಿ ಮಾತ್ರ ನಿಮ್ಮ ಬ್ಯಾಂಕ್​ಗೆ ಕನ್ನ ಬೀಳೋದಂತೂ ಗ್ಯಾರಂಟಿ.. ಅದ್ಹೇಗೆ ಅಂದ್ರಾ?.

ಇದನ್ನೂ ಓದಿ: ಚನ್ನಪಟ್ಟಣ ಬೈಎಲೆಕ್ಷನ್​ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ

ಫೈಲ್​​ಡೌನ್ ಲೋಡ್ ಮಾಡಿದ್ರೆ ಸಾಕು ಫೋನ್​ ಹ್ಯಾಕ್

ಈ ಹ್ಯಾಕರ್​ಗಳ ಕಾಟ ಏನ್ಮಾಡಿದ್ರು ಕಡಿಮೆಯಾಗ್ತಿಲ್ಲ.. ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್​ ಹ್ಯಾಕ್​ ಮಾಡಿ ಹಣ ಎಗರಿಸ್ತಾರೆ.. ಇದೀಗ ಇದೇ ಹ್ಯಾಕರ್ಸ್​ ಬೆಸ್ಕಾಂ, ಜಲಮಂಡಳಿ ಹೆಸ್ರಲ್ಲಿ ವಂಚನೆಗಿಳಿಸಿದ್ದಾರೆ. ಆದ್ರೆ, ಈ ವಂಚಕರು ಲಿಂಕ್​, ಓಟಿಪಿ ಕಳಿಸಲ್ಲ. ಫೈಲ್​ ಕಳುಹಿಸಿ ಡೌನ್​ಲೌಡ್​ ಆಗ್ತಿದ್ದಂತೆ ಫೋನ್​ ಹ್ಯಾಕ್​ಮಾಡಿ ಒಂದು​ ಸೆಕೆಂಡ್​ನಲ್ಲೇ ಹಣಕ್ಕೆ ಕನ್ನ ಹಾಕ್ತಿದ್ದಾರೆ.

ಎಚ್ಚರ..ಎಚ್ಚರ!

  • ಕೆಲ ಕಂಪನಿ ಲೋಗೋ ಡಿಪಿಗೆ ಇಟ್ಟುಕೊಂಡು ಫೈಲ್‌ ಫಾರ್ವಡ್
  • ವಾಟ್ಸ್​ಆ್ಯಪ್ ನಂಬರ್​ಗಳಿಗೆ ಬರುತ್ತೆ ಎಪಿಕೆ ಫೈಲ್​ ಫಾರ್ವಡ್
  • ಬೆಸ್ಕಾಂ, ನೀರಿನ ಬಿಲ್ ಪಾವತಿಸುವಂತೆ ಮೆಸೇಜ್ ಫಾರ್ವರ್ಡ್
  • ಫೈಲ್‌ ವಾಟ್ಸ್​ಆ್ಯಪ್​ಗೆ ಸೆಂಡ್ ಮಾಡಿ ಡೌನ್‌ಲೋಡ್‌ಗೆ ಸೂಚನೆ
  • ಮೊಬೈಲ್ ಕಂಟ್ರೋಲ್ ಕಂಪ್ಲೀಟ್ ಆಗಿ ಸೈಬ‌ರ್ ಕಳ್ಳರ ಪಾಲು
  • ಬ್ಯಾಂಕ್ & ವ್ಯಾಲೆಟ್‌ಗೆ​ ನಂಬರ್ ಲಿಂಕ್ ಆಗಿದ್ರೆ ಹಣ ವರ್ಗಾವಣೆ

ನ್ಯೂಸ್​ಫಸ್ಟ್​ ವರದಿಯಿಂದ ಈ ಬಗ್ಗೆ ಜಲಮಂಡಳಿ ಗಮನಕ್ಕೂ ಬಂದಿದ್ದು, ಎಪಿಕೆ ಅಪ್ಲಿಕೇಶನ್ & ಫೈಲ್​ಗಳು ಬಂದರೆ ಬಳಸದಂತೆ ಜಲಮಂಡಳಿ ಅಧ್ಯಕ್ಷ ಡಾ.ರವಿ ರಾಮ್​ ತಿಳಿಸಿದ್ದಾರೆ.

ನೀರಿಗೆ ಸಂಬಂಧಿಸಿದಂತೆ ನಾವು ಯಾವುದೇ ಲಿಂಕ್ ಅನ್ನು ಕಳುಹಿಸಲ್ಲ. ನಿಮ್ಮ ಅಧಿಕೃತ ಆ್ಯಪ್ ಇದೆಯೋ ಅದರ ಮೂಲಕವೇ ಪೇ ಮಾಡಿ. ಬೇರೆ ಆ್ಯಪ್ ಮೂಲಕ ಹಣ ಪಾವತಿ ಮಾಡಬೇಡಿ. ಯಾವಗಲೂ ಮಾಡೋದನ್ನೇ ಮಾಡಿ. ಹೊಸದನ್ನು ಬಳಕೆ ಮಾಡಬೇಡಿ.

ಡಾ.ವಿ.ರಾಮ್​, ಜಲಮಂಡಳಿ ಅಧ್ಯಕ್ಷ

ಮೊಬೈಲ್​ಗೆ ಅಪರಿಚಿತ ನಂಬರ್​ನಿಂದ ಏನೇ ಬಂದ್ರೂ ಓಪನ್​ ಮಾಡೋ ಮೊದಲು ಎಚ್ಚರವಾಗಿರಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ಕಿರಾತಕರ ವಂಚನೆ.. APK ಫೈಲ್​​ ಡೌನ್​ಲೋಡ್ ಮಾಡಿದ್ರೆ ಹಣ ಮಾಯ, ಹೇಗೆ?

https://newsfirstlive.com/wp-content/uploads/2024/08/BNG_WATER.jpg

Load More