ಟಿಕೆಟ್ ಪೈಪೋಟಿ ಮಧ್ಯೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೋ?
ಅಖಾಡಕ್ಕೆ ನಿಖಿಲ್ ಎಂಟ್ರಿ ಕೊಡುತ್ತಿರುವುದು ಕದನ ಕೌತುಕ ಹೆಚ್ಚಿಸಿದೆ
ತಾವೇ ಅಖಾಡಕ್ಕೆ ಧುಮುಕಲು ಸೈನಿಕ ಶತಪ್ರಯತ್ನಗಳು, ಈಡೇರುತ್ತಾ?
ಬೊಂಬೆನಾಡಿನಲ್ಲಿ ಅಧಿಪತ್ಯ ಸಾಧಿಸಲು ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಚನ್ನಪಟ್ಟಣ ಉಪಕದನದಲ್ಲಿ ಯಾರಾಗ್ತಾರೆ ದೋಸ್ತಿ ಅಭ್ಯರ್ಥಿ ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ. ಈ ಮಧ್ಯೆ ದಳಪತಿ ಪುತ್ರನ ನಡೆ ಸೈನಿಕನಿಗೆ ಟಕ್ಕರ್ ಕೊಡುವಂತಿದೆ. ಸಿಪಿವೈ ಅಖಾಡದಲ್ಲಿ ಕುಮಾರಸ್ವಾಮಿ ಸುಪುತ್ರ ಎಂಟ್ರಿ ಕೊಡುತ್ತಿರೋದು ಕದನ ಕೌತುಕ ಹೆಚ್ಚಿಸಿದೆ.
ಇದನ್ನೂ ಓದಿ: ಸರ್ಕಾರ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?
ರಾಜ್ಯ ರಾಜಕೀಯದ ದೇವಮೂಲೆಯನ್ನ ಕೈವಶ ಮಾಡಿಕೊಳ್ಳಲು ರಣತಂತ್ರಗಳೇ ನಡೀತಿವೆ. ಬೈ ಎಲೆಕ್ಷನ್‌ಗೆ ಡೇಟ್ ಫಿಕ್ಸ್ ಆಗದೇ ಇದ್ರೂ ಈಗಲೇ ಪೈಪೋಟಿ ಹೆಚ್ಚಾಗಿದೆ. ಇದು ದೋಸ್ತಿ-ಕಾಂಗ್ರೆಸ್ ನಡುವಿನ ಕದನ ಅನ್ನೋದಕ್ಕಿಂತ ಮೈತ್ರಿ ನಾಯಕರ ಮಧ್ಯೆ ಫೈಟ್ ನಡೆದಂತಿದೆ. ಪುತ್ರನ ಕಣಕ್ಕಿಳಿಸಲು ದಳಪತಿ ದಂಡಯಾತ್ರೆ ಮಾಡ್ತಿದ್ರೆ ತಾವೇ ಅಖಾಡಕ್ಕೆ ಧುಮುಕಲು ಸೈನಿಕ ಶತಪ್ರಯತ್ನ ನಡೆಸ್ತಿದ್ದಾರೆ.
ಇದನ್ನೂ ಓದಿ: ರಾಜಕಾರಣದಲ್ಲಿ ಹೊಸ ಇತಿಹಾಸಕ್ಕೆ ಸಜ್ಜಾದ ದಳಪತಿ ವಿಜಯ್.. ಪಕ್ಷದ ಫ್ಲ್ಯಾಗ್, ಗೀತೆ ಅನಾವರಣ; ಪ್ರತಿಜ್ಞೆ ಏನು?
‘ಸೈನಿಕ’ನಿಗೆ ಟಕ್ಕರ್ ಕೊಡಲು ಅಖಾಡಕ್ಕೆ ‘ರೈಡರ್’ ಎಂಟ್ರಿ
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡದಲ್ಲಿ ಡಿ.ಕೆ. ಬ್ರದರ್ಸ್ ಎಂಟ್ರಿ ಕೊಟ್ಟು ಒಂದು ಸುತ್ತಿನ ಕಾರ್ಯತಂತ್ರ ಹೆಣೆದಿದ್ದಾರೆ. ಇಬ್ಬರಲ್ಲಿ ಒಬ್ಬರು ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಅಂತಲೇ ಎಲ್ಲೆಡೆ ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ದೋಸ್ತಿಯಲ್ಲೇ ಚನ್ನಪಟ್ಟಣ ಟಿಕೆಟ್ ಕುಸ್ತಿ ಶುರುವಾಗಿದೆ. ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಟಿಕೆಟ್ ಕದನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
‘ಸೈನಿಕ’ನ ಗಡಿಗೆ ‘ಜಾಗ್ವಾರ್’ ಎಂಟ್ರಿ!
ಯೋಗೇಶ್ವರ್ ದೆಹಲಿ ಯಾತ್ರೆ ಕೈಗೊಂಡಿರುವ ಟೈಮ್‌ನಲ್ಲಿ ನಿಖಿಲ್ ಚನ್ನಪಟ್ಟಣ ಸಂಚಾರ ಮಾಡ್ತಿದ್ದಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ. ಈ ಟಿಕೆಟ್ ಪೈಪೋಟಿಯ ಮಧ್ಯೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೋ?. ಲೆಟ್ಸ್ ವೇಯ್ಟ್ ಅಂಡ್ ವಾಚ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ