/newsfirstlive-kannada/media/post_attachments/wp-content/uploads/2024/02/BDR_14_LACK_MONEY.jpg)
ಬೆಂಗಳೂರು: ಒಂದೇ ರಾತ್ರಿಗೆ ಕೋಟಿ, ಕೋಟಿ ದುಡ್ಡು ಮಾಡೋದು ತಿರುಕನ ಕನಸು ಅನ್ನೋ ಮಾತಿದೆ. ಆದರೆ, ಅದೇ ನಿಜ ಜೀವನದಲ್ಲಿ ಅದು ನಡೆದ್ರೆ ಹೇಗಿರುತ್ತೆ. ಊಹಿಸಿಕೊಳ್ಳೋದೇ ಒಂದು ಅದ್ಭುತ. ಬೆಂಗಳೂರಿನ ಮಹಿಳೆಯೊಬ್ಬರು ಅಜ್ಜನ ಒಂದು ಕಾರ್ಯದಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅದು ಹೇಗೆ? ಕೋಟ್ಯಾಂತರ ಸಿಕ್ಕಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿಗಾಗಿ ಮುಂದೆ ಓದಿ.
ಬೆಂಗಳೂರಿನ ಪ್ರಿಯಾ ಶರ್ಮಾ ಅನ್ನೋ ಮಹಿಳೆಯೇ ಈಗ ಕೋಟ್ಯಾಧಿಪತಿಯಾಗಿದ್ದಾರೆ. ಬಹಳ ವರ್ಷಗಳ ಹಿಂದೆ ಪ್ರಿಯಾ ಅವರ ಅಜ್ಜ ಒಂದು ಷೇರು ಕೊಂಡುಕೊಂಡಿದ್ದರು. ಆದರೆ ಅದನ್ನು ಯಾರಿಗೆ ಹೇಳರಲಿಲ್ಲ. ಆ ಒಂದು ಷೇರಿನಿಂದಲೇ ಪ್ರಿಯಾ ಈಗ ಕೋಟಿಗೆ ಒಡತಿಯಾಗಿದ್ದಾರೆ.
ಇದನ್ನೂ ಓದಿ: ಅಜ್ಜ ಖರೀದಿಸಿದ್ದ 1 ಷೇರ್ನಿಂದ ಮೊಮ್ಮಗನಿಗೆ ಜಾಕ್‌ಪಾಟ್.. ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
2020ರಲ್ಲಿ ನಿಮಗೆಲ್ಲಾ ಗೊತ್ತಿರಬಹುದು ಜಗತ್ತಿನಲ್ಲಿ ಕೋವಿಡ್ ಅನ್ನೋ ಸಾಂಕ್ರಾಮಿಕ ರೋಗ ಜೀವ ಹಿಂಡುತ್ತಿತ್ತು. ಆಗ ಸರ್ಕಾರವೇ ಮನೆಯಿಂದ ಅನಗತ್ಯವಾಗಿ ಹೊರಗೆ ಬರಲೇಬೇಡಿ ಎಂಬ ಸೂಚನೆ ಕೊಟ್ಟಿತ್ತು. ಈ ಸಂದರ್ಭದಲ್ಲೇ ಪ್ರಿಯಾ ಶರ್ಮಾ ಅವರ ಬದುಕು ಬದಲಾಗಿದೆ.
ಅಜ್ಜನ ತಿಜೋರಿಯಲ್ಲಿದ್ದ ಷೇರಿನ ಪತ್ರಗಳು!
2004ರಲ್ಲಿ ಪ್ರಿಯಾ ಶರ್ಮಾ ಅವರ ಅಜ್ಜ L&T (Larsen & Toubro) ಕಂಪನಿಯ 500 ಷೇರುಗಳನ್ನು ಖರೀದಿಸಿದ್ದಾರೆ. ಪ್ರತಿಷ್ಠಿತ ಕನ್ಸ್‌ಟ್ರಕ್ಷನ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಅಜ್ಜ ಬಹಳ ವರ್ಷಗಳ ಕಾಲ ಈ ವಿಚಾರವನ್ನೇ ಮರೆತು ಬಿಟ್ಟಿದ್ದಾರೆ. ಅಜ್ಜನ ತಿಜೋರಿಯಲ್ಲಿದ್ದ ಒಂದೇ ಒಂದು ಷೇರು ಈಗ ಪ್ರಿಯಾ ಅವರಿಗೆ ಜಾಕ್‌ಪಾಟ್ ಹೊಡೆಯುವಂತೆ ಮಾಡಿದೆ.
500 L&T ಷೇರುಗಳಿಂದ ಪ್ರಿಯಾ ಅವರಿಗೆ ಬೋನಸ್ ಆಗಿ 4,500 ಷೇರು ಮತ್ತು ಸ್ಟಾಕ್ಸ್ ವಿಭಜನೆಗಳು ಸಿಕ್ಕಿದೆ. L&T 500 ಷೇರುಗಳು, ಬೋನಸ್ ಷೇರುಗಳು ಸದ್ಯದ ಮಾರುಕಟ್ಟೆ ದರದಲ್ಲಿ 9 ಪಟ್ಟು ಅಧಿಕವಾಗಿದೆ. ಈ ಸಂದರ್ಭದಲ್ಲಿ ಪ್ರಿಯಾ ಅವರಿಗೆ ಅಜ್ಜನ ಷೇರುಗಳಿಂದ ಬರೋಬ್ಬರಿ 1 ಕೋಟಿ 72 ಲಕ್ಷ ರೂಪಾಯಿ ಹಣ ಸಿಕ್ಕಿದೆ.
500 ಷೇರುಗಳಿಂದ 1 ಕೋಟಿ 72 ಲಕ್ಷ ರೂ.
ಪ್ರಿಯಾ ಶರ್ಮಾ ಅವರಿಗೆ 1 ಕೋಟಿ 72 ಲಕ್ಷ ಸಿಗೋದು ಗೊತ್ತಾದ ಮೇಲೆ ಹಲವು ಸಮಸ್ಯೆಗಳು ಎದುರಾಗಿದೆ. ಅಜ್ಜನ ಷೇರಿನ ಹಣ ಪಡೆಯಲು ಕೆಲವೊಂದು ದಾಖಲಾತಿಗಳ ಸವಾಲು ಕಾಣಿಸಿಕೊಂಡಿದೆ. ಆಗ ಪ್ರಿಯಾ ಅವರು ಷೇರು ಮಾರುಕಟ್ಟೆಯ ತಜ್ಞರಾದ ಸಮಾಧಾನ್ ಎಂಬುವವರನ್ನ ಸಂಪರ್ಕ ಮಾಡಿದ್ದಾರೆ. ಅವರು ಅಜ್ಜನ ವಿಲ್ ಪೇಪರ್ ಮತ್ತು ಷೇರಿನ ದಾಖಲಾತಿಗಳನ್ನು ಪರಿಶೀಲಿಸಿ ಕಂಪನಿಗೆ ನೀಡಿದ್ದಾರೆ. ನಿಜವಾದ ಷೇರು ಮಾಲೀಕರು ಯಾರು ಅನ್ನೋದು ಖಚಿತವಾದ ಮೇಲೆ ಹಣದ ವರ್ಗಾವಣೆ ಆರಂಭವಾಗಿದೆ.
ಸುಮಾರು ಒಂದು ವರ್ಷಗಳ ಕಾಲ ಪ್ರಿಯಾ ಶರ್ಮಾ ಅವರು ಇದೇ ರೀತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈನ L&T ಕಂಪನಿಗೆ ಪ್ರಿಯಾ ಶರ್ಮಾ ಅವರ KYC ದಾಖಲೆಯನ್ನು ಸಲ್ಲಿಸಿದ ಮೇಲೆ ಅಜ್ಜ ಷೇರಿನ ಹಣ ಬರೋದು ಖಾತ್ರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ