newsfirstkannada.com

ಮೋದಿ ಸಮಾರಂಭಕ್ಕೆ ಬಂದಿದ್ದ ಶೇಖ್​ ಹಸೀನಾ.. ಗಾಂಧಿ ಫ್ಯಾಮಿಲಿಯನ್ನ ಭೇಟಿ ಮಾಡಿದ ಬಾಂಗ್ಲಾ ಪ್ರಧಾನಿ; ಯಾಕೆ?

Share :

Published June 11, 2024 at 6:21am

Update June 11, 2024 at 6:23am

  ಮೋದಿ ಕಾರ್ಯಕ್ರಮಕ್ಕೆ ನವದೆಹಲಿಗೆ ಆಗಮಿಸಿದ್ದ ಶೇಖ್ ಹಸೀನಾ

  ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿರನ್ನ ತಬ್ಬಿಕೊಂಡ ಬಾಂಗ್ಲಾ PM

  ಶೇಖ್ ಹಸೀನಾರನ್ನ ಭೇಟಿ ಮಾಡಿ ಗಾಂಧಿ ಫ್ಯಾಮಿಲಿ ಮಾತಾಡಿದ್ದೇನು?

ನವದೆಹಲಿ: ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಗೆ ಬಂದಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರ ಕುಟುಂಬ ಭೇಟಿ ಮಾಡಿದೆ ಎಂದು ತಿಳಿದು ಬಂದಿದೆ. ಈ ಸಂಬಂಧದ ಫೋಟೋಗಳನ್ನು ಕಾಂಗ್ರೆಸ್​ ತನ್ನ ಎಕ್ಸ್​ ಅಕೌಂಟ್​ನಲ್ಲಿ ಹಂಚಿಕೊಂಡಿದೆ.

ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋನಿಯಾ ಗಾಂಧಿ ಫ್ಯಾಮಿಲಿ ಭೇಟಿ ಮಾಡಿದೆ. ಶೇಖ್ ಹಸೀನಾ ಇರುವ ರೂಮ್​ಗೆ ತೆರಳಿದ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಶೇಖ್ ಹಸೀನಾರನ್ನು ತಬ್ಬಿಕೊಂಡು ಆತ್ಮೀಯತೆ ತೋರಿದ್ದಾರೆ. ಇನ್ನು ಭಾರತಕ್ಕೆ ಯಾವಾಗಲೇ ಆಗಲಿ ಶೇಖ್ ಹಸೀನಾ ಅವರು ಬಂದಾಗ ಗಾಂಧಿ ಕುಟುಂಬದವರ ಜೊತೆ ಮಾತನಾಡಿಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ಬಾಂಗ್ಲಾದ ಪ್ರಧಾನಿಯನ್ನ ಭೇಟಿ ಮಾಡಿ ಮಾತು ಕತೆ ನಡೆಸಿದ ಸೋನಿಯಾ ಗಾಂಧಿಯವರು, ನಂಬಿಕೆ, ಸಹಕಾರ ಮತ್ತು ಪರಸ್ಪರ ಬೆಳವಣಿಗೆಯಿಂದ ಭಾರತ-ಬಾಂಗ್ಲಾದೇಶ ನಡುವಿನ ಸಂಬಂಧ ಇನ್ನಷ್ಟು ಪ್ರಬಲವಾಗಲಿದೆ. ಎರಡು ದೇಶಗಳ ಮಧ್ಯೆದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಇವರು ಭೇಟಿ ಮಾಡಿರುವ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸಮಾರಂಭಕ್ಕೆ ಬಂದಿದ್ದ ಶೇಖ್​ ಹಸೀನಾ.. ಗಾಂಧಿ ಫ್ಯಾಮಿಲಿಯನ್ನ ಭೇಟಿ ಮಾಡಿದ ಬಾಂಗ್ಲಾ ಪ್ರಧಾನಿ; ಯಾಕೆ?

https://newsfirstlive.com/wp-content/uploads/2024/06/RAHUL_GANDHI-2.jpg

Load More