Advertisment

ಶೇಖ್ ಹಸೀನಾರ ಭಾರತಕ್ಕೆ ಕರೆ ತಂದಿದ್ದೇ ರೋಚಕ.. 2 ರಫೇಲ್ ಜೆಟ್ ಹೇಗೆ ಭದ್ರತೆ ನೀಡಿದ್ವು ಗೊತ್ತಾ?

author-image
Ganesh
Updated On
ಶೇಖ್ ಹಸೀನಾರ ಭಾರತಕ್ಕೆ ಕರೆ ತಂದಿದ್ದೇ ರೋಚಕ.. 2 ರಫೇಲ್ ಜೆಟ್ ಹೇಗೆ ಭದ್ರತೆ ನೀಡಿದ್ವು ಗೊತ್ತಾ?
Advertisment
  • ಶತ್ರುಗಳು ಹಸೀನಾ ಕಡೆ ನೋಡಿದ್ದರೆ ಧ್ವಂಸ ಆಗುತ್ತಿದ್ದರು..
  • 2 ರಫೇಲ್ ಭದ್ರತೆ ನೀಡಿ ಭಾರತಕ್ಕೆ ಕರೆತಂದಿದ್ದೇ ರೋಚಕ
  • ಅಜಿತ್ ದೋವಲ್ ಪಾತ್ರ ಗ್ರೇಟ್​, ರೋಚಕ ಕ್ಷಣದಲ್ಲಿ ಏನಾಯ್ತು..?

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಉಂಟಾಗಿರುವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಭುಗಿಲೆದ್ದ ಹಿಂಸಾಚಾರದಿಂದಾಗಿ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದ್ದಾರೆ.

Advertisment

ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಇಂಗ್ಲೆಂಡ್​ಗೆ ಹೋಗಿ ಅಲ್ಲೇ ಶಾಶ್ವತವಾಗಿ ಆಶ್ರಯಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಈ ಮಧ್ಯೆ ನಿನ್ನೆ ಅವರು ಭಾರತಕ್ಕೆ ಬಂದಿದ್ದೇ ರೋಚಕ. ತೀವ್ರ ಹಿಂಸಾಚಾರ ಹಿನ್ನೆಲೆಯಲ್ಲಿ ಹಸೀನಾಗೆ ಜೀವ ಭಯ ಶುರುವಾಗಿತ್ತು. ಭಾರತದತ್ತ ಮುಖ ಮಾಡಿದ ಹಸೀನಾಗೆ ಭದ್ರತೆ ನೀಡಿದ್ದು ರಫೇಲ್ ಯುದ್ಧ ವಿಮಾನಗಳು ಅನ್ನೋದು ವಿಶೇಷ.

ಇದನ್ನೂ ಓದಿ:ಡೇಂಜರ್​ ಝೋನ್​​ನಲ್ಲಿ ಸುನಿತಾ ವಿಲಿಯಮ್ಸ್​; NASA ಒಂದು ದಿನ ಲೇಟ್​ ಮಾಡಿದ್ರೂ ಅವರ ಪ್ರಾಣಕ್ಕೆ ಕಂಟಕ

publive-image

ಬಾಂಗ್ಲಾ ತೊರೆಯುವ ನಿರ್ಧಾರ ಮಾಡಿದ್ದ ಹಸೀನಾ ನಿನ್ನೆ ಮಧ್ಯಾಹ್ನ ವಾಯುಪಡೆಯು ವಿಮಾನವನ್ನು ಹತ್ತಿ ಭಾರತದತ್ತ ಮುಖ ಮಾಡಿದ್ದರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಭಾರತೀಯ ವಾಯುಪಡೆಯ ರಡಾರ್, ಹಸೀನಾ ಇರುವ ವಿಮಾನವನ್ನು ಗುರುತಿಸಿದೆ. ಬಾಂಗ್ಲಾದೇಶದಿಂದ-ಭಾರತದ ಗಡಿಯತ್ತ ಬರುತ್ತಿದ್ದ ವಿಮಾನವನ್ನು ಪತ್ತೆ ಮಾಡಿತ್ತು. ಜೆಟ್​ನಲ್ಲಿ ಹಸೀನಾ ಜೊತೆ ಅಲ್ಲಿನ ಉನ್ನತ ಮಟ್ಟದ ಪ್ರಯಾಣಿಕರು ಇರೋದನ್ನು ಭಾರತೀಯ ವಾಯುಪಡೆ ಅರಿತುಕೊಂಡಿತು. ನಂತರ ಪಶ್ಚಿಮ ಬಂಗಾಳದ ಹಸಿಮಾರಾ ಏರ್​ಫೋರ್ಸ್​ ಸ್ಟೇಷನ್​​ನಿಂದ ಎರಡು ರಫೇಲ್ ಯುದ್ಧ ವಿಮಾನಗಳು ಅವರಿಗೆ ಭದ್ರತೆ ನೀಡಲು ಹೊರಟಿವೆ.

Advertisment

ಅಲ್ಲಿಂದ ಹಸೀನಾರಿದ್ದ ವಿಮಾನವು ಭಾರತೀಯ ಯುದ್ಧ ವಿಮಾನಗಳ ಭದ್ರತೆಯೊಂದಿಗೆ ನಿಗಧಿತ ಸ್ಥಳದತ್ತ ಹಾರಾಟ ನಡೆಸಿತ್ತು. ಈ ವೇಳೆ ಭಾರತೀಯ ಭದ್ರತಾ ಅಧಿಕಾರಿಗಳು, ಆಂತರಿಕ ಗುಪ್ತಚರ ಇಲಾಖೆಗಳು ಈ ಚಟುವಟಿಕೆಯ ಮೇಲೆ ಹದ್ದಿನ ಕಣ್ಣಿಟ್ಟು, ಸಲಹೆ ಸೂಚನೆಗಳನ್ನು ನೀಡುತ್ತಿದ್ದವು. ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿರುವ ಏರ್​ ಚೀಫ್ ಮಾರ್ಷಲ್ ವಿ.ಆರ್​.ಚೌಧರಿ ಮತ್ತು ಜನರಲ್ ಉಪೇಂದ್ರ ದ್ವಿವೇದಿ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆಬಿಟ್ಟು ಹೋದ ಅಪ್ಪ ಇನ್ನೂ ಬರಲೇ ಇಲ್ಲ..

ಸಂಜೆ 5.45ರ ಸುಮಾರಿಗೆ ಹಿಂಡನ್ ಏರ್​ಬೇಸ್​ಗೆ ಹಸೀನಾರಿದ್ದ ವಿಮಾನ ಬಂದು ತಲುಪಿದೆ. ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಎನ್​ಎಸ್​ಎ ಮುಖ್ಯಸ್ಥ ಅಜಿತ್ ದೋವಲ್ ಕೂಡ ಉಪಸ್ಥಿತರಿದ್ದರು. ಅಲ್ಲಿ ಇಬ್ಬರ ನಡುವೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಬಾಂಗ್ಲಾದ ಪ್ರಸ್ತತದ ಪರಿಸ್ಥಿತಿ ಮುಂದಾಗುವ ಅನಾಹುತಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೊನೆಗೆ ಈ ಎಲ್ಲಾ ವಿಚಾರಗಳನ್ನು ಪ್ರಧಾನಿ ಮೋದಿ ಅವರ ಸಂಪುಟಕ್ಕೆ ದೋವಲ್ ಮಾಹಿತಿ ನೀಡಿದ್ದಾರೆ.

Advertisment

ಇದನ್ನೂ ಓದಿ:ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತವೇ ಗತಿ; ನಿಲ್ಲದ ಹಿಂಸಾಚಾರ.. ಬಾಂಗ್ಲಾದಲ್ಲಿ ಏನೆಲ್ಲ ಆಗೋಯ್ತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment