Advertisment

ಭಾರತೀಯರ ತಟ್ಟೆಯ ಮೇಲೆ ಬಾಂಗ್ಲಾದೇಶದ ಕಣ್ಣು, ಹೊಸ ಮಧ್ಯಂತರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಂತಹದು?

author-image
Gopal Kulkarni
Updated On
ಭಾರತೀಯರ ತಟ್ಟೆಯ ಮೇಲೆ ಬಾಂಗ್ಲಾದೇಶದ ಕಣ್ಣು, ಹೊಸ ಮಧ್ಯಂತರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಂತಹದು?
Advertisment
  • ಪಶ್ಚಿಮ ಬಂಗಾಳದ ಭಾವನೆಯ ಜೊತೆ ಬಾಂಗ್ಲಾದೇಶ ಸರ್ಕಾರದ ಕಳ್ಳಾಟ
  • ದುರ್ಗಾಪೂಜೆ ಸನಿಹದಲ್ಲಿರುವುಗಾಲೇ ಭಾರತಕ್ಕೆ ಮಾಡಿದ ದ್ರೋಹ ಏನು?
  • ಹಿಲ್ಸಾ ಮೀನಿನ ರಫ್ತು ಬ್ಯಾನ್​ ಮಾಡಿದ ಮೊಹಮ್ಮದ್ ಯೂನಸ್ ಸರ್ಕಾರ

ಕೊಲ್ಕತ್ತಾ: ನವರಾತ್ರಿ ಬಂತು ಎಂದರೆ ಸಾಕು ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಯ ಬಹುದೊಡ್ಡ ಸಂಭ್ರಮ. ಪಶ್ಚಿಮ ಬಂಗಾಳದ ನೆಲದಲ್ಲಿ ನಡೆಯುವ ಈ ದುರ್ಗಾಪೂಜೆಯ ವೈಭವ ಸಡಗರ ಕಣ್ತುಂಬಿಕೊಳ್ಳಲು ಎರಡು ಕಣ್ಣಂತೂ ಸಾಲುವುದೇ ಇಲ್ಲ. ಅಷ್ಟು ಅದ್ಧೂರಿಯಾಗಿ, ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದುರ್ಗಾಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದ ಪ್ರತಿ ಮನೆಯಲ್ಲಿಯೂ ಸಾಸಿವೆ ಎಣ್ಣೆಯಲ್ಲಿ ಕರೆಯುತ್ತಿರುವ ಹಿಲ್ಸಾ ಮೀನಿನ ವಾಸನೆ ಹರಡುತ್ತದೆ. ಪಶ್ಚಿಮ ಬಂಗಾಳದ ಸಂಸ್ಕೃತಿಯಲ್ಲಿ, ಊಟ ಉಪಚಾರದಲ್ಲಿ ಹಿಲ್ಸಾ ಜಾತಿಯ ಮೀನಿಗೆ ವಿಶೇಷ ಸ್ಥಾನಮಾನವಿದೆ. ಅದು ಇಲ್ಲದೇ ಇಲ್ಲಿ ಯಾವ ದುರ್ಗಾ ಪೂಜೆಯ ಹಬ್ಬ ಸಂಪೂರ್ಣಗೊಳ್ಳುವುದಿಲ್ಲ. ಆದ್ರೆ ಈ ಬಾರಿ ದುರ್ಗಾ ಪೂಜೆಯಂದು ಪಶ್ಚಿಮ ಬಂಗಾಳದ ಜನರ ತಟ್ಟೆಯಲ್ಲಿ ಹಿಲ್ಸಾ ಮೀನು ಕಾಣದಂತೆ ಮಾಡುವ ಗುರಿಯನ್ನು ಹೊಂದಿದಂತೆ ಕಾಣುತ್ತಿದೆ ಬಾಂಗ್ಲಾದೇಶದ ನೂತನ ಮಧ್ಯಂತರ ಸರ್ಕಾರ.

Advertisment

ಇದನ್ನೂ ಓದಿ:ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್​​; ಕೇಂದ್ರದಿಂದ ಹೈಅಲರ್ಟ್​​; ನೀವು ಓದಲೇಬೇಕಾದ ಸ್ಟೋರಿ..!
ಹಿಲ್ಸಾ ಜಾತಿಯ ಮೀನು ಅತಿಹೆಚ್ಚು ಭಾರತಕ್ಕೆ ಆಮದು ಆಗುವುದೇ ಬಾಂಗ್ಲಾದೇಶದಿಂದ. ಆದ್ರೆ ಸದ್ಯ ಬಾಂಗ್ಲಾದಲ್ಲಿ ಇರುವುದು ಮೊಹಮ್ಮದ್ ಯೂನಸ್​ರ ಮಧ್ಯಂತರ ಸರ್ಕಾರ. ಈ ಸರ್ಕಾರ ಭಾರತೀಯರ ತಟ್ಟೆಯ ಜೊತೆಗೆ ಹೊಟ್ಟೆಯ ಮೇಲೂ ಹೊಡೆಯುವ ಸಾಹಸಕ್ಕೆ ಕೈ ಹಾಕಿದೆ. ಪ್ರತಿ ವರ್ಷ ಬಾಂಗ್ಲಾದೇಶದಿಂದ ಆಮದು ಆಗುತ್ತಿದ್ದ ಹಿಲ್ಸಾ ಮೀನಿನ ರಫ್ತಿಗೆ ಬಾಂಗ್ಲಾದೇಶದಲ್ಲಿ ನಿರ್ಬಂಧ ಹೇರಲಾಗಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಹಿಲ್ಸಾ ಮೀನು ಬೇಡಿಕೆಯಿದ್ದಷ್ಟು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅದರ ಬೆಲೆ ಗಗನಕ್ಕೆ ಮುಟ್ಟುತ್ತಿದೆ.

ಇದನ್ನೂ ಓದಿ:ಜೈಲಲ್ಲೇ ದೀಕ್ಷೆ ಪಡೆದ ಕುಖ್ಯಾತ ಭೂಗತ ಪಾತಕಿ; ಈತನ ಹಿನ್ನೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ!
ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಯ ವೇಳೆ ಕಿಚಡಿ ಜೊತೆಗೆ ಹಿಲ್ಸಾ ಮೀನಿನ ಸಾರನ್ನು ಕೂಡ ಮಾಡುತ್ತಾರೆ. ಈ ವಿಶೇಷ ಜಾತಿಯ ಮೀನು ಅತಿಹೆಚ್ಚು ಸಿಗುವುದೇ ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ. ಸದ್ಯ ಬಾಂಗ್ಲಾದೇಶದ ನೂತನ ಸರ್ಕಾರ ಈಗ ಈ ಜಾತಿಯ ಮೀನುಗಳ ರಫ್ತಿಗೆ ನಿರ್ಬಂಧ ಹೇರಿದ್ದು ಪಶ್ಚಿಮ ಬಂಗಾಳದ ಜನರ ತಟ್ಟೆಯ ಜೊತೆಗೆ ಹೊಟ್ಟೆಗೂ ಹೊಡೆದಿದೆ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment