/newsfirstlive-kannada/media/post_attachments/wp-content/uploads/2024/09/BBK11-17-contestants.jpg)
ಬಿಗ್​ ಮನೆಗೆ ಕಾಲಿಟ್ಟಿದ್ದಾರೆ ಸ್ಪರ್ಧಿಗಳು. ಸ್ವರ್ಗ-ನರಕದ ಕಿಚ್ಚು ಹೊತ್ತುತ್ತಿದ್ದಂತೆ ಜೋರು ಮಳೆ ಶುರುವಾಗಿತ್ತು. ಪ್ರತಿ ಸೀಸನ್​ನಲ್ಲೂ ಖುಷಿ, ಕೌತುಕದ ಜೊತೆಗೆ ಕಾಲಿಡುತ್ತಿದ್ದ ಸ್ಪರ್ಧಿಗಳಿಗೆ ನರಕ ದರ್ಶನದ ಭಯ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಅಷ್ಟಕ್ಕೂ ಸ್ವರ್ಗ ಸುಖ ಯಾರಿಗೆ? ನರಕ ದರ್ಶನ ಯಾರಿಗೆ?
/newsfirstlive-kannada/media/post_attachments/wp-content/uploads/2024/09/BIG-BOSS.jpg)
17 ಸ್ಪರ್ಧಿಗಳಲ್ಲಿ 7 ಜನ ನರಕಕ್ಕೆ 10 ಜನ ಸ್ವರ್ಗಕ್ಕೆ ಹೋಗಿದ್ದಾರೆ. ಮೊದಲಿಗೆ ಸ್ವರ್ಗಕ್ಕೆ ಹೋದವ ಲಿಸ್ಟ್​ ನೋಡೋಣ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್​, ಗೌತಮಿ, ಧರ್ಮ, ಜಗದೀಶ್​, ತ್ರಿವಿಕ್ರಮ್​, ಹಂಸಾ, ಐಶ್ವರ್ಯಾ, ಮಂಜು ಈ 10 ಸ್ಪರ್ಧಿಗಳು ಸ್ವರ್ಗವಾಸಿಗಳು.
/newsfirstlive-kannada/media/post_attachments/wp-content/uploads/2024/09/BBK11-Chaitra-Kundapura.jpg)
ಇದನ್ನೂ ಓದಿ:BBK11: ಬಿಗ್ ಬಾಸ್ ಅಸಲಿ ಆಟ ಶುರು ಮಾಡಿದ ಗೌತಮಿ ಜಾಧವ್.. ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್!
ಇನ್ನೂ ನರಕ ದರ್ಶನ ಮಾಡಿರೋ ಸ್ಪರ್ಧಿಗಳು ಅನುಷಾ ರೈ, ಶಿಶಿರ್​, ಮಾನಸಾ, ಗೋಲ್ಡ್​ ಸುರೇಶ್​ ಚೈತ್ರಾ, ಮೋಕ್ಷಿತಾ, ರಂಜಿತ್​.
ವಿಶೇಷ ಅಂದ್ರೇ ರಾಜಾರಾಣಿ ಗ್ರ್ಯಾಂಡ್​ ಫಿನಾಲೆ ಸಮಯಲ್ಲಿ ರಿವೀಲ್​ ಆಗಿದ್ದ ನಾಲ್ಕು ಸ್ಪರ್ಧಿಗಳಲ್ಲಿ ಇಬ್ಬರೂ ಜಗದೀಶ್​ ಹಾಗೂ ಗೌತಮಿ ಜನರ ವೋಟಿಂಗ್​ ಆಧಾರಾದ ಮೇಲೆ ಸ್ವರ್ಗಕ್ಕೆ ಹೋದ್ರು. ಅದೇ ರೀತಿ ಅತೀ ಹೆಚ್ಚು ವೋಟ್ ಪಡೆದು ಚೈತ್ರಾ, ಗೋಲ್ಡ್​ ಸುರೇಶ್​ ನರಕಕ್ಕೆ ಕಾಲಿಟ್ಟರು.
/newsfirstlive-kannada/media/post_attachments/wp-content/uploads/2024/09/BIG-BOSS-1.jpg)
ಅತೀ ಹೆಚ್ಚು ಸ್ಪರ್ಧಿಗಳು ಸ್ವರ್ಗದಲ್ಲಿದ್ದು, ನರಕದಲ್ಲಿ ಕಮ್ಮಿ ಜನ ಇದ್ರೂ ನರಕದಿಂದ ಸ್ವರ್ಗಕ್ಕೆ ಬರ್ತಿವಿ ಅನ್ನೋ ಆತ್ಮವಿಶ್ವಾಸ ಎದ್ದು ಕಾಣ್ತಿದೆ. ಇದು ಕೂಡ ಸೀಸನ್​ 10ರ ಸಮರ್ಥರು ಹಾಗೂ ಅಸಮರ್ಥರ ರೀತಿಯಲ್ಲಿಯೇ ಇದ್ದು, ಅಷ್ಟೇ ಜಿದ್ದಾಜಿದ್ದಿ ಎದ್ದು ಕಾಣ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us