Advertisment

BBK11: ಉಸ್ತುವಾರಿ ಸರಿಯಿಲ್ವಂತೆ! ಮನೆ ಮಂದಿ ಬಾಯಲ್ಲಿ ಗೊಬ್ಬರ ಅಬ್ಬರದ ಬಗ್ಗೆಯೇ ಮಾತು

author-image
AS Harshith
Updated On
ದಿಢೀರ್​ ಬದಲಾಯಿತು ಬಿಗ್​ಬಾಸ್ ಅಸಲಿ ಮನೆ; 'ನರಕ' ಡೆಮಾಲಿಷ್ ಮಾಡಿದ್ದೇಕೆ BBK ತಂಡ?
Advertisment
  • ಗೊಬ್ಬರದ ಅಬ್ಬರದಿಂದ ಮನೆ ಮಂದಿಗೆ ಬೇಸರ
  • ಟಾಸ್ಕ್​ ವಿಚಾರವಾಗಿ ಆ ವ್ಯಕ್ತಿ ಬಗ್ಗೆಯೇ ಮಾತು
  • ಅಷ್ಟಕ್ಕೂ ಏನಾಯ್ತು? ಇವ್ರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ?

ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಟಾಸ್ಕ್​ ನೀಡಿದ್ದರು. ಗೊಬ್ಬರದ ಅಬ್ಬರ ಎಂಬ ಹೆಸರಿನಲ್ಲಿ ಸ್ಪರ್ಧೆ ಎರ್ಪಡಿಸಿದ್ದರು. ಆದರೆ ಈ ಟಾಸ್ಕ್​ ವೇಳೆ ಮನೆಯ ಕ್ಯಾಪ್ಟನ್​ ನಿರ್ಣಯ ಸ್ಪರ್ಧಿಗಳಿಗೆ ಬೇಸರ ತರಿಸಿದೆ. ಈ ಕುರಿತಾಗಿ ಇತ್ತಂಡಗಳು ಮಾತನಾಡಿಕೊಳ್ಳುತ್ತಿದ್ದಾರೆ.

Advertisment

ಇದನ್ನೂ ಓದಿ:BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?

ಹಂಸಾ ಮನೆಯ ಕ್ಯಾಪ್ಟನ್​ ಆಗಿದ್ದು, ಟಾಸ್ಕ್​ ವೇಳೆ ನಿಯಮ ಉಲ್ಲಂಘನೆ ಬಗ್ಗೆ ಕ್ಯಾಪ್ಟನ್​ ಸರಿಯಾದ ನಿರ್ಣಯ ಕೈಗೊಂಡಿರಲಿಲ್ಲ. ಟಾಸ್ಕ್​ ವೇಳೆ ಚೆಂಡನ್ನು ತಳ್ಳಿಕೊಂಡು ಹೋಗುವ ಬದಲು ಕೈಯಲ್ಲಿ ಹಿಡಿದಿದ್ದಾರೆ. ಇನ್ನು ಕೆಲವರು ಜಂಪ್​ ಮಾಡುತ್ತಾ ಟಾಸ್ಕ್​ ಪೂರ್ತಿ ಮಾಡಿದ್ದಾರೆ. ಆದರೆ ಹಂಸಾ ಈ ಕುರಿತಾಗಿ ಸರಿಯಾಗಿ ಟಾಸ್ಕ್​ ನಡೆಸಿಕೊಟ್ಟಿಲ್ಲ ಎಂದು ನರಕ ಮತ್ತು ಸ್ವರ್ಗದ ನಿವಾಸಿಗಳು ಪಟ್ಟಾಂಗ ಹಾಕುತ್ತಿದ್ದಾರೆ. ಉಸ್ತುವಾರಿ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:  BBK11: ಆಟದಲ್ಲಿ ನಡೆಯಿತೇ ಮೋಸ? ಹಂಸಾಗೆ ಯಾವ ಸೀಮೆ ಕ್ಯಾಪ್ಟನ್​​ ಎಂದ ಚೈತ್ರಾ ಕುಂದಾಪುರ!

Advertisment


">October 9, 2024

ನರಕದಲ್ಲಿ ಶಿಶಿರ್​, ಜಗದೀಶ್​​, ಮಾನಸಾ ಉಸ್ತುವಾರಿ ಬಗ್ಗೆ ಮಾತನಾಡಿದರೆ, ಅತ್ತ ಸ್ವರ್ಗದಲ್ಲಿ ಉಗ್ರಂ ಮಂಜು, ತಿವಿಕ್ರಮ ಈ ಇದೇ ವಿಚಾರವಾಗಿ ಚರ್ಚಿಸಿದ್ದಾರೆ. ಆದರೀಗ ಹಂಸಾರವರು ಕ್ಯಾಪ್ಟನ್ಸಿ ವಿಚಾರವಾಗಿ ಮನೆಯ ಉಸ್ತುವಾರಿಯನ್ನು ಕಳೆದುಕೊಳ್ಳುತ್ತಾರಾ ಎಂಬ ಕುತೂಹಲತೆಯು ಅಭಿಮಾನಿಗಳನ್ನು ಕಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment