newsfirstkannada.com

×

ಒಂದು ದಿನ ನಾನು ಸಿಎಂ ಆಗ್ತೀನಿ! ಆತನ ಪಾಪದ ಕೊಡ ತುಂಬಿದೆ ಎಂದ BBK11 ಸ್ಪರ್ಧಿ ಜಗದೀಶ್​!

Share :

Published September 30, 2024 at 2:01pm

Update October 1, 2024 at 2:22pm

    ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕ ಜಗದೀಶ್​​

    ಅವರ ಯೋಗ್ಯತೆಯನ್ನ ತೋರಿಸಿಕೊಟ್ಟಿದ್ದೀನಿ ಎಂದ ಅಡ್ವಕೇಟ್​​

    ಸಿಎಂ ಆಗುವ ಕನಸು ಬಿಚ್ಚಿಟ್ಟ ಬಿಗ್​ ಬಾಸ್ ಸೀಸನ್​​ 11​ ಸ್ಪರ್ಧಿ

ಬಿಗ್​ ಬಾಸ್ ಕನ್ನಡ ಸೀಸನ್​​ 11 ಶುರುವಾಗಿದೆ. ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದಕ್ಕೂ ಮುನ್ನ ಪ್ರೋಮೋ ಶೂಟ್​​ ವೇಳೆ ಕೆಲವು ಸ್ಪರ್ಧಿಗಳು ನೀಡಿರುವ ಹೇಳಿಕೆಗಳು ಈಗ ವೈರಲ್​ ಆಗುತ್ತಿದೆ. ಅದರಲ್ಲಿ ಸ್ವರ್ಧಿ ಜಗದೀಶ್ ಪ್ರೋಮೋದಲ್ಲಿ ನಾನು ಮುಂದೊಂದಿನ ಸಿಎಂ ಆಗುತ್ತೇನೆ  ಎಂಬ ಮಾತು ಹರಿದಾಡುತ್ತಿದೆ.​

ಇದನ್ನೂ ಓದಿ: BIGG BOSS 11 ಮನೆಯಲ್ಲಿದ್ದಾರೆ ಮೇಲ್​ ಮತ್ತು ಫಿಮೇಲ್​ ಡಾನ್​ಗಳು​.. ಇಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ!

ಅಡ್ವಕೇಟ್ ವೃತ್ತಿ ಮಾಡುತ್ತಿದ್ದ ಜಗದೀಶ್​ ಬಿಗ್​​​ ಬಾಸ್​ ಮನೆಯೊಳಕ್ಕೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕಿದ್ದಾರೆ. ಅದಕ್ಕೂ ಮುನ್ನ ಪ್ರೋಮೋದಲ್ಲಿ ನ್ಯಾಯವನ್ನ ಯಾರಿಗೆ ಧ್ವನಿ ನೀಡಲ್ವೋ ಅವರಿಗೆ ಹುಡುಕಿಕೊಡೋದೆ ನನ್ನ ಕೆಲಸ, ​ಆತನ ಪಾಪದ ಕೊಡ ತುಂಬಿದೆ. ನನ್ನ ತಾಕತ್ತು ತೋರಿಸಿದ್ದೀನಿ. ನಾನೇ ಎಂದಂಥಾ ರಾಜಕಾರಣಿಗಳಾಗಿರಬಹುದು, ನಾನೇ ಎಂದಂಥಾ ಪುಢಾರಿಗಳಾಗಿರಬಹುದು. ಅವರನ್ನು ಅವರ ಯೋಗ್ಯತೆಯನ್ನ ತೋರಿಸಿಕೊಟ್ಟಿದ್ದೀನಿ. ಒಂದು ದಿನ ನಾನು ಸಿಎಂ ಆಗ್ತೀನಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್ ಅಸಲಿ ಆಟ ಶುರು ಮಾಡಿದ ಗೌತಮಿ ಜಾಧವ್.. ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್!

ಸದ್ಯ ಕಿಚ್ಚ ನಿರೂಪಣೆಯ ಬಿಗ್​ ಬಾಸ್​ ಮನೆಯೊಳಕ್ಕೆ ಹೊಕ್ಕಿರುವ ಜಗದೀಶ್​ ಸ್ವರ್ಗದ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಕೋರ್ಟ್​​, ಹೋರಾಟ ಎಂಬಂತಿದ್ದ ಜಗದೀಶ್​​ ದೊಡ್ಮನೆಯಲ್ಲಿ ಹೇಗೆ ತಮ್ಮ ಅಸಲಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ದಿನ ನಾನು ಸಿಎಂ ಆಗ್ತೀನಿ! ಆತನ ಪಾಪದ ಕೊಡ ತುಂಬಿದೆ ಎಂದ BBK11 ಸ್ಪರ್ಧಿ ಜಗದೀಶ್​!

https://newsfirstlive.com/wp-content/uploads/2024/09/Jagadish-1.jpg

Load More