newsfirstkannada.com

×

BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..!

Share :

Published October 2, 2024 at 8:35am

Update October 2, 2024 at 10:42am

    ಸ್ವರ್ಗ ಮತ್ತು ನರಕದ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ

    ಅತ್ತ ಚೈತ್ರಾ ಕುಂದಾಪುರ ರೋಸ್ಟ್​.. ಇತ್ತ ಭವ್ಯ ಗೌಡ ಮೇಲೂ ಅಟ್ಯಾಕ್​

    ಶುರುವಾಗಿದೆ ಕೋಲ್ಡ್​ ವಾರ್​.. ನಗುತ್ತಿದ್ದವರ ನಡುವಲ್ಲಿ ಕಿತ್ತಾಟ, ಜಗಳ

ಬಿಗ್​ ಬಾಸ್​ ಕನ್ನಡ ಸೀಸನ್​ 11 ಪ್ರಾರಂಭವಾಗಿ 4 ದಿನ ಕಳೆದಿದೆ. ಪರಿಚಯ, ಹರಟೆ ಜೊತೆಗೆ ಕಳೆಯುತ್ತಿದ್ದ ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪವು ಪ್ರಾರಂಭವಾಗುತ್ತಿದೆ. ಅದರ ಜೊತೆಗೆ ನಾಮಿನೇಷನ್​ ಬಿಸಿ ತಗುಲಿದ್ದು, ಸ್ಪರ್ಧಿಗಳ ನಡುವೆ ಟಾರ್ಗೆಟ್​ ಶುರುವಾಗಿದೆ.

ಬಿಗ್​ ಬಾಸ್​ನಲ್ಲಿ ಸ್ವರ್ಗ ಮತ್ತು ನರಕ ಎಂಬ ವಿಭಾಗಗಳಿವೆ. ನರಕದಲ್ಲಿ ಎಲ್ಲರ ಕೈ ಬೆರಳು ಚೈತ್ರಾ ಕುಂದಾಪುರ ಕೊಂಚ ಜಾಸ್ತಿ ಇದ್ದರೆ, ಇತ್ತ ಸ್ವರ್ಗದಲ್ಲಿ ಭವ್ಯ ಮೇಲೂ ಟಾರ್ಗೆಟ್​​ ಹೆಚ್ಚಾಗಿದೆ. ಇದಲ್ಲದೆ, ಹಂಸ, ಶಿಶಿರ್, ಯಮುನಾ, ಗೌತಮಿ, ಜಗದೀಶ್, ಮಾನಸ, ಮೋಕ್ಷಿತಾ ಅವರನ್ನು ನಾಮಿನೇಶನ್​ ಮಾಡಿದ್ದಾರೆ. ಆದರೆ ನಾಮಿನೇಷನ್​ ಮಾಡುವ ವೇಳೆ ಸ್ಪರ್ಧಿಗಳು ವಿಧ ವಿಧದ ಕಾರಣ ಕೊಟ್ಟಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ ವೆಟ್ಟೈಯಾನ್‌ ಬಗ್ಗೆ ಬಿಗ್ ಅಪ್​ಡೇಟ್​.. ಸೂಪರ್ ಸ್ಟಾರ್ ಆರೋಗ್ಯ ಈಗ ಹೇಗಿದೆ?

ಮಾತು ಮನೆ ಕೆಡಿಸಿತು ಎಂಬಂತೆ ನರಕದಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಶುರುವಾಗಿದೆ. ಚೈತ್ರಾ ಕುಂದಾಪುರ ಮತ್ತು ಮಾನಸ ನಡುವೆ ಸಣ್ಣ ಕಿಡಿ ಹೊತ್ತಿಕೊಂಡಿದೆ. ಇತ್ತ ಸ್ವರ್ಗದಲ್ಲಿ ಗುದ್ದಾಟ ಶುರುವಾಗಿದ್ದು, ಮೊದಲ ವಾರದ ನಾಮಿನೇಷನ್​ ಪ್ರಕ್ರಿಯೆ ಬಗ್ಗೆ ಅಭಿಮಾನಿಗಳ ಮನದಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಕುಂದಾಪುರ ಕಿರಿಕ್‌; ಕಿಚ್ಚನಿಂದ ಕ್ಲಾಸ್​ ಪಕ್ಕಾ!

ಅಂದಹಾಗೆಯೇ ಮೊದಲ ವಾರ ಯಾರೆಲ್ಲಾ ನಾಮಿನೇಷನ್​ ಆಗಿ ಮನೆಯಿಂದ ಹೊರಹೋಗುತ್ತಾರೆ? ಕಿಚ್ಚ ಸುದೀಪ್​ ಯಾರನ್ನ ಮನೆಯಿಂದ ಹೊರ ಕಳುಹಿಸುತ್ತಾರೆ? ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..!

https://newsfirstlive.com/wp-content/uploads/2024/10/Bhavya-BBK11.jpg

Load More