BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?

author-image
AS Harshith
Updated On
BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?
Advertisment
  • ಗೋಲ್ಡ್​​ ಸುರೇಶ್​ ಕೋಪಕ್ಕೆ ಕಾರಣ ಯಾರು ಗೊತ್ತಾ?
  • ಮೋಸ, ಅನ್ಯಾಯದ ವಿರುದ್ಧ ತಿರುಗಿ ಬಿದ್ದ ಗೋಲ್ಡ್​ ಸುರೇಶ್
  • ಕ್ಯಾಪ್ಟನ್​ ನಡತೆಯಿಂದ ಗೋಲ್ಡ್​ ಸುರೇಶ್​ಗೆ ಬೇಸರವಾಯಿತೇ?

ಬಿಗ್​ ಬಾಸ್​ ಕನ್ನಡ ಸೀಸನ್​ 11 ಸ್ಪರ್ಧಿ ಗೋಲ್ಡ್​ ಸುರೇಶ್ ಕೋಪಗೊಂಡಿದ್ದಾರೆ. ಕ್ಯಾಮೆರಾದ ಮುಂದೆ ಬಂದು ಬಿಗ್​ ಬಾಸ್​ ನಾವಿನ್ನು ಯಾವ ಆಟ ಆಡಲ್ಲ. ಮೋಸ, ಅನ್ಯಾಯವೆಂದು ಹೇಳಿದ್ದಾರೆ. ಅಷ್ಟಕ್ಕೂ ಇವರ ಕೋಪಕ್ಕೆ ಕಾರಣ ಯಾರು ಗೊತ್ತಾ? ಈ ಸ್ಟೋರಿ ಓದಿ.

ಬಿಗ್​ ಬಾಸ್​​ ಮನೆಯ ಕ್ಯಾಪ್ಟನ್​ ಹಂಸಾ ಅವರಿಗೆ ಟಾಸ್ಕ್​ವೊಂದನ್ನು ನೀಡಿದ್ದರು. ‘ಗೊಬ್ಬರದ ಅಬ್ಬರ’ ಎಂಬ ಟಾಸ್ಕ್​ ಮೂಲಕ ಮನೆ ಮಂದಿಯನ್ನು ಆಟವಾಡಿಸಲು ಹೇಳಿದ್ದರು. ಆದರೆ ಈ ಆಟದಲ್ಲಿ ಪ್ರತಿಸ್ಪರ್ಧಿಗಳು ಕ್ಯಾಪ್ಟನ್​ ಹಂಸಾ ಅವರ ನಡೆಯನ್ನು ಕಂಡು ಮೋಸ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK11: ಆಟದಲ್ಲಿ ನಡೆಯಿತೇ ಮೋಸ? ಹಂಸಾಗೆ ಯಾವ ಸೀಮೆ ಕ್ಯಾಪ್ಟನ್​​ ಎಂದ ಚೈತ್ರಾ ಕುಂದಾಪುರ!

ಬಿಗ್​ ಬಾಸ್​ ಕೊಟ್ಟ ಗೊಬ್ಬರದ ಅಬ್ಬರ ಟಾಸ್ಕ್​ನಲ್ಲಿ ಸ್ಪರ್ಧಿಗಳ ಕೈ -ಕಾಲಿಗೆ ಬಿಗಿಯಾಗಿ ಕಟ್ಟಲಾಗಿರುತ್ತದೆ. ಸ್ಪರ್ಧಿಗಳು ಬಣ್ಣದ ಚೆಂಡನ್ನು ತಳ್ಳಿಕೊಂಡು ಮೀಸಲಿಡುವ ಸ್ಟ್ಯಾಂಡ್​ನಲ್ಲಿ ಇಡಬೇಕು. ಆದರೆ ಟಾಸ್ಕ್​ ವೇಳೆ ಕೆಲವರು ಕೈಯಲ್ಲಿ ಚೆಂಡನ್ನು ಎತ್ತಿಕೊಂಡು ಹೋದರೆ, ಇನ್ನು ಕೆಲವರು ಜಂಪ್​ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಕಣ್ಣಾರೆ ಕಂಡರೂ ಸುಮ್ಮನಿದ್ದ ಕ್ಯಾಪ್ಟನ್​ ವಿರುದ್ಧ ಪ್ರತಿಸ್ಪರ್ಧಿಗಳು ಕಿಡಿಕಾರಿದ್ದಾರೆ. ಪಂದ್ಯದ ರೂಲ್ಸ್​ ವಿಚಾರವಾಗಿ ಮಾತಿನ ಚಕಮಕಿ ಕೂಡ ನಡೆದಿದೆ. ಗೋಲ್ಡ್​ ಸುರೇಶ್​ ಹಂಸಾ ನಡೆಯನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್‌ ವಿರುದ್ಧ FIR.. ‘ಅನುಬಂಧ ಅವಾರ್ಡ್’ ಇಡೀ ತಂಡಕ್ಕೂ ಸಂಕಷ್ಟ!

ಹಂಸಾ ರೂಲ್ಸ್​ ವಿಚಾರವಾಗಿ ಮಾತನಾಡಿದ ಗೋಲ್ಡ್​​ ಸುರೇಶ್, ಬಿಗ್​ ಬಾಸ್​ ನಾವಿನ್ನು ಯಾವ ಆಟ ಕೂಡ ಆಡಲ್ಲ. ಮೋಸ, ಅನ್ಯಾಯ ಎಂದು ಹೇಳಿದ್ದಾರೆ. ಅತ್ತ ಚೈತ್ರಾ ಕುಂದಾಪುರ ಯಾವ ಸೀಮೆ ಕ್ಯಾಪ್ಟನ್​ ನೀವು? ಎಂದು ಕಿಡಿಕಾರಿದ್ದಾರೆ.


">October 9, 2024

ಜಗದೀಶ್​ ಕೂಡ ಹಂಸಾ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆಗೆ ಊಟ ಮಾಡುವುದಾದರೆ ಮನೆಗೆ ಹೋಗಿ ಋಣ ತೀರಿಸಿ ಆಟದಲ್ಲಲ್ಲ ಎಂದು ಹೇಳಿದ್ದಾರೆ. ಇವರ ಮಾತು ಕೇಳಿ ಹಂಸಾ ಚಿಂತಾಕ್ರಾಂತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment