/newsfirstlive-kannada/media/post_attachments/wp-content/uploads/2024/12/BBK-11-Shobitha-Gold-Suresh.jpg)
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 11ನೇ ವಾರದ ಮುಕ್ತಾಯದಲ್ಲಿದೆ. ಇಂದು ಸೂಪರ್ ಸಂಡೇ ವಿತ್ ಬಾದ್ ಷಾ ಸುದೀಪ ಸಖತ್ ಸ್ಪೆಷಲ್ ಆಗಿದೆ. ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಈ ವಾರದ ಎಲಿಮಿನೇಷನ್ ಕೂಡ ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್ ನೀಡುತ್ತಿದೆ. ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರು ಇಲ್ಲಿಗೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಗಿಸಿ ಹೊರ ಬಂದಿದ್ದಾರೆ.
ಗೋಲ್ಡ್ ಸುರೇಶ್ ಅವರು ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಎಲ್ಲರ ಜೊತೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡ ಗೋಲ್ಡ್ ಸುರೇಶ್ ಅವರು ಆಮೇಲೆ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ರಜತ್ ಅವರ ಕಟು ಟೀಕೆಗೆ ಕೆರಳಿದ್ದ ಗೋಲ್ಡ್ ಸುರೇಶ್ ಅವರು ಅಂದೇ ಬಿಗ್ ಬಾಸ್ ಮನೆಯಿಂದ ಹೊರಹೋಗುತ್ತೇನೆ ಎಂದು ಹೇಳಿದ್ದರು.
/newsfirstlive-kannada/media/post_attachments/wp-content/uploads/2024/12/Gold-Suresh-Eliminated.jpg)
ಕಾಲಿಗೆ ಪೆಟ್ಟಾದರೂ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಂದುವರಿಸಿದ್ದರು. ವೈದ್ಯರ ಸಲಹೆ ಮೇರೆಗೆ ಹಲವು ಟಾಸ್ಕ್‌ಗಳಲ್ಲಿ ಉಸ್ತುವರಿಯಾಗಿ ಗಮನ ಸೆಳೆದಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರ ಸಲಹೆ ಮೇರೆಗೆ ಉತ್ತಮ ಆಟ ಆಡುತ್ತಿದ್ದ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2024/12/Gold-Suresh-Eliminated-1.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ವಾರದ ಕೊನೆಯಲ್ಲಿ ಎಲಿಮಿನೇಷನ್ ಆದವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲೇ ಬೇಕು. ಆದರೆ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಶೋಭಾ ಅವರು ಸೇಫ್ ಆದರೂ ವೈಯಕ್ತಿಕ ಕಾರಣದಿಂದ ರೂಲ್ಸ್ ಬ್ರೇಕ್ ಮಾಡಿ ಆಚೆ ಬಂದಿದ್ದರು. ಇದೀಗ ಶೋಭಾ ಅವರ ಮಾದರಿಯಲ್ಲೇ ಗೋಲ್ಡ್ ಸುರೇಶ್ ಅವರು ಕೂಡ ಬಿಗ್ ಬಾಸ್ ಶೋ ಅನ್ನ ಕ್ವಿಟ್ ಮಾಡಿ ಹೊರ ಬಂದಿದ್ದಾರೆ.
ಇದನ್ನೂ ಓದಿ: BBK11: ಮನೆ ನಾಯಿಗೆ ಚಿನ್ನದ ಸರ.. ಗೋಲ್ಡ್ ಸುರೇಶ್ ಯಾರು? ಹಿನ್ನೆಲೆ ಏನು? ಇವರ ಆಸೆ ಏನು ಗೊತ್ತಾ?
ಈ ವಾರದ ಎಲಿಮಿನೇಷನ್‌ನಲ್ಲಿ ಗೋಲ್ಡ್ ಸುರೇಶ್ ಅವರ ಹೆಸರೇ ಇರಲಿಲ್ಲ. ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಗೋಲ್ಡ್ ಸುರೇಶ್ ಅವರು ವೀಕ್ಷಕರ ಮನಗೆದ್ದಿದ್ದರು. ಆದರೆ ಗೋಲ್ಡ್ ಸುರೇಶ್ ಕುಟುಂಬಸ್ಥರಿಗೆ ಹೆಲ್ತ್ ಎಮರ್ಜೆನ್ಸಿ ಆಗಿರುವ ಸುದ್ದಿ ಬಂದಿದ್ದು ಆಘಾತಕ್ಕೆ ಒಳಗಾಗಿದ್ದರು. ವೈಯಕ್ತಿಕ ಕಾರಣದಿಂದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗದೇ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us