/newsfirstlive-kannada/media/post_attachments/wp-content/uploads/2024/10/jagadish-2.jpg)
ಬಿಗ್​​ ಬಾಸ್​ ಸೀಸನ್​ 11 ಪ್ರಾರಂಭವಾಗಿ ಒಂದು ದಿನ ಕಳೆದಿದೆ. ಅಸಲಿ ಆಟವು ಪ್ರಾರಂಭವಾಗಿ. ಆದರೆ ಆಟದ ನಡುವಲ್ಲಿ ಪಾಪ ಪ್ರಜ್ಞೆ ತೋರಿಸಿ ಲಕ್ಷುರಿ ಬಜೆಟನ್ನು ಕಳೆದುಕೊಂಡಿರುವ ಘಟನೆ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ.
ಅಚ್ಚರಿ ಸಂಗತಿ ಎಂದರೆ ನೀರಿನಿಂದಾಗಿ ಸ್ವರ್ಗದ ನಿವಾಸಿಗಳು ಬಿಗ್​ ಬಾಸ್​ ಕೊಟ್ಟ ಲಕ್ಷುರಿ ಬಜೆಟ್​ ಕಳೆದುಕೊಂಡಿದ್ದಾರೆ. ಪಾಲಿಗೆ ಬಂದದ್ದನ್ನು ಜೋಪಾನವಾಗಿಟ್ಟುಕೊಂಡು, ಹೊಟ್ಟೆ ತಣಿಸುವ ಬದಲು ಇದೀಗ ಸಿಕ್ಕ ಬಜೆಟನ್ನು ಕಳೆದುಕೊಂಡಿದ್ದಾರೆ.
ನರಕದ ನಿವಾಸಿಗಳು ನೀರು ಕೇಳಿದರೆಂದು ಸ್ವರ್ಗದ ನಿವಾಸಿಗಳು ನೀರು ಕೊಟ್ಟಿದ್ದಾರೆ. ಅಡ್ವಕೇಟ್​ ಜಗದೀಶ್ ಸ್ವರ್ಗದ ನಿವಾಸಿಯಾಗಿದ್ದು, ನರಕದ ನಿವಾಸಿಗಳು ಗಂಟಲು ನೋವು ನೀರು ಬೇಕು ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದಾರೆ. ಜಗದೀಶ್​​ ಅವರಿಗೆ​​ ನೀರನ್ನು ಕೊಟ್ಟಿದ್ದಾರೆ. ಇದನ್ನು ಕಂಡ ಬಿಗ್​ ಬಾಸ್​​ ಲಕ್ಷುರಿ ಬಜೆಟ್​ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 800 ಕೋಟಿ ಆಸ್ತಿ ಒಡತಿ; ಭಾರತ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮವನ್ನೇ ಬಿಟ್ಟ ಬ್ಯೂಟಿ
ಆದರೆ ಸಿಕ್ಕ ಪಂಚಾಮೃತವನ್ನು ಮರಳಿ ದೇವರಿಗೆ ನೀಡುವಂತಹ ಪರಿಸ್ಥಿತಿ ಸ್ವರ್ಗದ ನಿವಾಸಿಗಳಿಗೆ ಎದುರಾಗಿದೆ. ಒಬ್ಬರಿಂದಾಗಿ ಬಜೆಟ್​ ಕಳೆದುಕೊಂಡು ಸಪ್ಪೆ ಮೋರೆ ಹಾಕಿದ್ದಾರೆ. ಇನ್ಮುಂದೆ ಸ್ವರ್ಗದ ನಿವಾಸಿಗಳಿಗೆ ನೀರೇ ಗತಿ ಎಂಬಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ